ಶಿವಮೊಗ್ಗ,ಆ.28:
ಅದೇನು ಕಾರಣವೋ ಗೊತ್ತಿಲ್ಲ ಶಿವಮೊಗ್ಗದ ಕೊರೊನಾ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಂದಿನ ಜಿಲ್ಲಾ ವರದಿ ಪ್ರಕಾರ 430 ಇದ್ದರೆ, ಮತ್ತದೇ ಬಗೆಯಲ್ಲಿ ರಾಜ್ಯ ವರದಿ 314ರ ಮೇಲಿದೆ. ಈ ಎರಡು ದಾಖಲೆಗಳನ್ನು ಮುಂದೆ ನೀಡಲಾಗಿದೆ.
ನಿಮ್ಮ ತುಂಗಾತರಂಗ ಸಾವು ಕಂಡವರ ಸಂಖ್ಯೆ ಒಂದೆಡೆ 4 ಇದ್ದರೆ ಮತ್ತೊಂದೆಡೆ 07 ಎಂದಿದೆ. ಒಟ್ಟಾರೆ ಸಾವಿನ ಸಂಖ್ಯೆಯೂ ವಿಭಿನ್ನ. ರಾಜ್ಯದ ಪ್ರಕಾರ 107 ಆಗಿದ್ದರೆ ಜಿಲ್ಲಾ ವರದಿ ಪ್ರಕಾರ 120.
ನಿಮಗೆ ಇಲ್ಲಿ ಎಲ್ಲವೂ ಮಾಹಿತಿ ಇದೆ. ನಿಮ್ಮ ಗಮನಕ್ಕೆ ಈ ಸುದ್ದಿಯನ್ನು ನೀಡುವುದಷ್ಟೇ ನಮ್ಮ ಕೆಲಸ. ಹಿಂದೆ ರಾಜ್ಯ ವರದಿ ಬದಲಾವಣೆಯಾದಂತೆ ಈಗಿನ ಜಿಲ್ಲಾ ವರದಿಗಳು ಬದಲಾವಣೆಯಾಗುತ್ತಿದೆ. ಇದು ಯಾರ ಉದ್ದೇಶಕ್ಕೋ ಗೊತ್ತಿಲ್ಲ . ಹಿಂದೆ ಒಟ್ಟಾರೆ ಸೋಂಕಿತರ ಸಂಖ್ಯೆ ಕಾಣುತ್ತಿತ್ತು ಈಗ ಮಾಧ್ಯಮಗಳನ್ನು ಹಿಡಿದಿಡಬೇಕೆಂಬ ಕಾರಣಕ್ಕೆ ಅಲ್ಲಿನ ಮಾಹಿತಿಯೇ ಇಲ್ಲ. ಈಗ ಅಲ್ಲಿನ ವಿಷಯಗಳನ್ನು ಮರೆಮಾಚಲಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ.
ಓದುಗರೇ ನಮ್ಮ ದೊರೆಗಳು. ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.