ಶಿವಮೊಗ್ಗ, ಆ.25:
ಶಿವಮೊಗ್ಗದಲ್ಲಿ ಇದು ಮಾಮೂಲಿ. ಒಂಚೂರು ಜ್ವರ, ಕೆಮ್ಮು, ಶೀತ, ಕೈಕಾಲ್ಲೊಂದು ಗಾಯ ಇದ್ದರೆ ಸಾಕು. ಅವರಿಗೆ ಕೊರೊನಾ….?
ಅದರ ಟ್ರೀಟ್ ಮೆಂಟ್ ಕೊಡುವ ಸೀವಿಯರ್ ನ ಮೆಗಾನ್ ಆಸ್ಪತ್ರೆ, ಸ್ವಲ್ಪ ಸೀವಿಯರ್ ನ ಸುಬ್ಬಯ್ಯ ಆಸ್ಪತ್ರೆ, ಲಕ್ಷಣಗಳಿಲ್ಲದ ವ್ಯಕ್ತಿಗಳ ಗಾಜನೂರು ಕೋವಿಡ್ ಸೆಂಟರ್ ತುಂಬಾ ವಿಚಿತ್ರವಾಗಿ ಕಾಣ್ತಿವೆ.
ರೆಕಮೆಂಡ್ ಹೊಡೆಯೋ ಜನರಿಂದ, ಅದಕ್ಕೆ ಹೇಳೋ ಜನಪ್ರತಿನಿಧಿಗಳಿಂದ ತಪ್ಪಿಸಿಕೊಂಡು ಓಡಾಡುವ ಸ್ಥಿತಿಗೆ ಅಧಿಕಾರಿಗಳು ತಲುಪಿದ್ದಾರೆಂದರೆ ಅದರರ್ಥವೇನು?
ಅಂತೆ ಅಧಿಕಾರಿಗಳು ಇಲಾಖೆಗಳು ಮಾಡುವ ಕಥೆ ನೋಡಿದರೆ ಆಶ್ಚರ್ಯವೆನಿಸುತ್ತದೆ. ಏಕೆಂದರೆ ಶಿವಮೊಗ್ಗದ ಪಾಲಿಗೆ ಜಿಲ್ಲೆಯ ಹಾಗೂ ರಾಜ್ಯದ ವರದಿ ಯಾವತ್ತೂ ತದ್ವಿರುದ್ಧವಾಗಿ ಚಿತ್ರ-ವಿಚಿತ್ರ ಎನ್ನಿಸುವಂತೆ ಬರುತ್ತಿದೆ.
ಸಾವು ಕಂಡವರ ಸಂಖ್ಯೆ ಸಹ ನಿಖರವಿಲ್ಲ. ಪ್ರತಿ ವ್ಯಕ್ತಿಯ ಸಾವಿನ ಹಿಂದೆ ಕೊರೊನಾ ಇದೆಯಾ ಎಂದು ಯೋಚಿಸುತ್ತಾ ಬಾಂದವ್ಯವನ್ನೆ ಮರೆಯಬೇಕಾದ ಸ್ಥಿತಿ ಬಂದೊದಗಿದೆ.
ಇಲ್ಲಿ ಗೊತ್ತಾಗದ ಸತ್ಯ ಕಥೆ ಬಿಚ್ಚಿಡುವ ಪ್ರಯತ್ನ ನಿಮ್ಮ ತುಂಗಾತರಂಗ ದಿನಪತ್ರಿಕೆಯದು.
ಇಂದಿನ ವರದಿ;
ಜಿಲ್ಲೆಯಲ್ಲಿ ದಿನಕ್ಕೆ ಕನಿಷ್ಡ ಇನ್ನೂರು ಸಾಮಾನ್ಯ ಎನ್ನುವಂತಾಗುತ್ತಿದೆ. ಇವತ್ತೂ ಸಹ ಜಿಲ್ಲೆಯಲ್ಲಿ 237 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. ಜಿಲ್ಲೆಯಲ್ಲಿ ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 6700 ರ ಸಮೀಪಕ್ಕೆ ಏರಿಕೆಯಾಗಿದೆ.
ಇಂದು ಸೋಂಕಿನಿಂದ 05 ಜನ ಸಾವುಕಂಡಿದ್ದು, ಜಿಲ್ಲೆಯಲ್ಲಿನ ಈ ಬಗೆಗಿನ ಒಟ್ಟು ಸಾವಿನ ಸಂಖ್ಯೆ 116 ಕ್ಕೇರಿದೆ. ಇಂದು 1103 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 989 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ ಎಂದು ಜಿಲ್ಲಾ ಹೆಲ್ತ್ ಬುಲೇಟಿನ್ ನಲ್ಲಿ ತಿಳಿಸಿದೆ.
ಇಂದು 314 ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿದ್ದಾರೆ.
ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ 5000 ದಾಟಿದೆ.
ತಾಲೂಕುವಾರು ವಿವರ
ಶಿವಮೊಗ್ಗ -128, ಭದ್ರಾವತಿ-38,
ಶಿಕಾರಿಪುರ-29, ತೀರ್ಥಹಳ್ಳಿ-05,
ಸಾಗರ 09
ಹೊಸನಗರ -12
ಸೊರಬ- 09
ಇತರೆ ಜಿಲ್ಲೆ -03
ಈ ಬೆನ್ನಲ್ಲೇ ರಾಜ್ಯ ವರದಿ ಎಂದಿನಂತೆ ಇಂದೂ ಬಿತ್ತರವಾಗಿದ್ದು, ಅಲ್ಲಿನ ವರದಿ ಪ್ರಕಾರ ರಾಜ್ಯದಲ್ಲಿ ಇಂದು 306 ಪ್ರಕರಣಗಳು ದಾಖಲಾಗಿದೆ. ಇಲ್ಲಿ 7200 ಹೆಚ್ಚು ಜನ ಕಾಣಿಸಿಕೊಂಡಿದ್ದಾರೆ. ಮರಣದ ಸಂಖ್ಯೆ 96 ಎಂದು ಹೇಳಿದೆ . ಒಂದೇ ಇಲಾಖೆಗಳು ಎರಡು ಬಗೆಯ ವರದಿ ನೀಡುವುದಾದರೆ ಇದರ ಅಗತ್ಯವಾದರೂ ಏನು? ಕೊರೊನಾ ಯಾರಿಗೆ ಯಾವ ಲಾಭಕ್ಕೆ…ಯಾವ ನಷ್ಟಕ್ಕೆ ಗೊತ್ತಾಗುತ್ತಿಲ್ಲ?!
ಭಗವಂತನೇ ಉತ್ತರಿಸಬೇಕು.