ಶಿವಮೊಗ್ಗ, ಆ.27:
ನಲುಮೆಯ ಸಿಹಿಮೊಗೆಯ ವಿಶ್ವವಿಖ್ಯಾತ ಜೋಗ ಇನ್ಮುಂದೆ ಅಪ್ಸರೆಯಂತೆ ಕಂಗೊಳಿಸುವ ಎಲ್ಲಾ ಲಕ್ಷಣಗಳು ಎದ್ದುಕಾಣುತ್ತಿವೆ. ಸುಂದರ ಪ್ರಕೃತಿ ಮಾತೆಯ ಮಡಿಲಲ್ಲಿರುವ ಜೋಗೆಯನ್ನು ಜೋಗಾ ಅಭಿವೃದ್ಧಿ ಪ್ರಾಧಿಕಾರ ನೋಡಿಕೊಳ್ಳುತ್ತಿದ್ದು, ಅಲ್ಲಿನ ವ್ಯವಸ್ಥೆಗಳನ್ನು ಇನ್ನಷ್ಟು ಉನ್ನತಿಕರಣ ಗೊಳಿಸಲಾಗುತ್ತದೆ. ಜೋಗೆಯನ್ನು ಅತಿ ಮುಖ್ಯ ಪ್ರವಾಸಿಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಬಹುದೊಡ್ಡ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ.
ಇದರ ಬೆನ್ನಲ್ಲೇ ಎಲ್ಲ ಬಗೆಯ ಕಾಮಗಾರಿಗಳ ಅಗತ್ಯದ ಚಟುವಟಿಕೆಗಳು ನಡೆಯುತ್ತಿವೆ. ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ಜೋಗದ ಸಮಗ್ರ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಇದರ ಸಂಪೂರ್ಣ ಕ್ರೆಡಿಟ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.
ನಿನ್ನೆಯಷ್ಟೇ ಸಂಸದ ಬಿ.ವೈ. ರಾಘವೇಂದ್ರ ಅವರು ವಿಶ್ವವಿಖ್ಯಾತ ಜೋಗವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿಸುವ ಮಹತ್ತರ ಯೋಜನೆ ವಿಷಯ ಹೇಳಿದ್ದ ಬೆನ್ನಲ್ಲೇ ಇಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹಾಗೂ ಇತರ ಅಧಿಕಾರಿಗಳ ತಂಡ ಭೇಟಿ ನೀಡಿ ಇಂದು ಬೆಳಿಗ್ಗೆ ಜೋಗಕ್ಕೆ ಹೋದ ಜಿಲ್ಲಾಧಿಕಾರಿಗಳು ಮುಂದೆ ಆಗಬಹುದಾದ ಕಾಮಗಾರಿಗಳ ಸ್ಥೂಲ ನೀಲನಕ್ಷೆಯನ್ನು ತಯಾರಿಸುವ ಹಿನ್ನೆಲೆಯಲ್ಲಿ ಹಾಗೂ ಆಗಬೇಕಾದ ಅನಿವಾರ್ಯ ಕಾರ್ಯಗಳ ಬಗ್ಗೆ ಮತ್ತು ಅತ್ಯುತ್ತಮ ಪ್ರವಾಸಿ ತಾಣವಾಗಿ ರೂಪಿಸುವ ಅಗತ್ಯಗಳ ಬಗ್ಗೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಎಂಜಿನಿಯರ್ ಗಳು, ಕೆಪಿಸಿಯ ಅಧಿಕಾರಿಗಳು, ವಿಶೇಷವಾಗಿ ಶಿವಮೊಗ್ಗ ಜಿಲ್ಲಾರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್ ಅವರು ಉಪಸ್ಥಿತರಿದ್ದರು.