ಶಿವಮೊಗ್ಗ
ಕಳೆದ ಮೂರು ದಿನದ ಹಿಂದೆ ಮೊಟ್ಟ ಮೊದಲು ಅತ್ಯಂತ ನಿರ್ಭಯವಾಗಿ ಶಿವಮೊಗ್ಗ ವೈದ್ಯಕೀಯ ವಿದ್ಯಾ ಸಂಸ್ಥೆ(ಸಿಮ್ಸ್)ನಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ಸಹ ಪ್ರಾದ್ಯಾಪಕನೋರ್ವ ಅತ್ಯಾಚಾರ ಎಸಗಿದ್ದ ಪ್ರಕರಣವನ್ನು ಬಯಲಿ ಗೆಳೆದಿದ್ದ ತುಂಗಾತರಂಗ ದಿನಪತ್ರಿಕೆಯ ಸುದ್ದಿ ಜಾಲತಾದ ಸುದ್ದಿಯಂತೆ ಸಿಮ್ಸ್ ನ ಆಡಳಿತಮಂ ಡಳಿ ಇಡೀ ಪ್ರಕರಣಕ್ಕೆ ತಿಲಾಂಜಲಿ ಇಟ್ಟಿದೆ.
ತುಂಗಾತರಂಗ ಯಾವತ್ತೂ ಯಾರ ಮರ್ಜಿಗೂ ಬಲಿಯಾಗದೇ, ಸುದ್ದಿ ಹುಡುಕಿ ಮದ್ಯರಾತ್ರಿ ಸಂಗ್ರಹಿಸಿದ್ದ ಮಾಹಿತಿ ಬೆಳಿಗ್ಗೆ ಪ್ರಚುರವಾದಾಕ್ಷಣ ಗಡಗಡ ನಡುಗಿದ್ದ ಆಡಳಿತ ಮಂಡಳಿ ಹಾಗೂ ವಿಶೇಷವಾಗಿ ನಿರ್ದೇಶಕರು ಅಂದೇ ಪತ್ರಿಕೆ ಹೇಳಿದ್ದಂತೆ ಈಗ ಸ್ಪಷ್ಟನೆ ನೀಡಿ ನಿರ್ದೇಶಕರು “ಗ್ರೇಟ್ ಸ್ಪಷ್ಟನೆ ನೀಡಲಷ್ಟೇ ಸೀಮಿತವಾದ ಅಧಿಕಾರಿ” ಎನಿಸಿಕೊಂಡಿದ್ದಾರೆ.
ಜಮ್ಮು ಮೂಲದ ಈ ವಿದ್ಯಾರ್ಥಿನಿ ಚಿಕ್ಕ ಮಗುವೇನಲ್ಲ. ಇಲ್ಲಿಯವರೆಗೆ ಶಿವಮೊಗ್ಗ ಬಗ್ಗೆ ಹೊಂದಿದ್ದ ಎಲ್ಲಾ ಪ್ರೀತಿ ವಿಶ್ವಾಸಕ್ಕೆ ಬೆಂಕಿ ಹಾಕಿ ಸಹಜವಾಗಿ ಸಹ ಪ್ರಾದ್ಯಾಪಕನ ಬಗ್ಗೆ ಸಿಡಿದೆದ್ದಿದ್ದವರು.
ಡಿಸಿ, ಗೃಹಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳವರೆಗೂ ಹೋರಾಟ ಮಾಡಿ ಗುರುವಿನ ಹೆಸರಿಗೆ ಕಪ್ಪುಚುಕ್ಕಿ ತಂದ ಕಿರಾತಕ ಮನಸಿನ ವೈದ್ಯನಿಗೆ ತಕ್ಕ ಶಿಕ್ಷೆ ಕೊಡಿಸಲು ಮುಂದಾಗಿದ್ದರು.
ಇಷ್ಟೇಲ್ಲಾ ಘಟನೆ ನಡೆದರೂ ನನಗೇನು ಗೊತ್ತಿಲ್ಲ ಎಂದು ಎಸಿ ರೂಮಿನಲ್ಲೇ ಜಾಲಿಯಾಗಿ ಕುಳಿತಿದ್ದ ನಿರ್ದೇಶಕ ಮಹಾತ್ಮರು ಒಂದ್ ಟೀಮ್ ಮಾಡಿದರಂತೆ., ಅದರ ಪರಿಶೀಲನೆ ನಂತರ ಇಡೀ ಪ್ರಕರಣ ಮಿಸ್ ಗೈಡ್ ನಿಂದ ಆಯ್ತಂತೆ. ಇಲ್ಲಿ ಯಾರೂ ಏನೂ ಮಾಡಿಲ್ವಂತೆ. ಆ ವಿದ್ಯಾರ್ಥಿನಿ ತಪ್ಪು ಗ್ರಹಿಕೆಯಿಂದ ದೂರು ಕೊಟ್ಟಿದ್ದಳಂತೆ. ವಾಪಾಸ್ ಪಡೆದಳಂತೆ….. ಎಂಬಂತೆ ಚಿಕ್ಕ ಮಕ್ಕಳ ಕಥೆ ಕಟ್ಟಿಬಿಟ್ಟಿದ್ದಾರೆ.
ಡಾ. ರೇಖಾ ಅವರ ತಂಡದ ಪರಿಶೀಲನೆ ಹೆಸರಲ್ಲಿ ಇಡೀ ಪ್ರಕರಣಕ್ಕೆ ಶಾಶ್ವತ ತಿಲಾಂಜಲಿ ಇಡಲಾಗಿದೆ.