ತುಂಗಾತರಂಗ ಹುಡುಕಾಟದ ವರದಿ, ಶಿವಮೊಗ್ಗ

ಶಿವಮೊಗ್ಗ, ಜು.17:
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ನ ಹಿರಿಯ ವಿದ್ಯಾರ್ಥಿನಿಗೆ ಸಹ ಪ್ರಾದ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದ ಸುದ್ದಿ ಸದ್ದಿಲ್ಲದೇ ಇಡೀ ಸಿಮ್ಸ್ ಕ್ಯಾಂಪಸ್ ಆವರಣದಲ್ಲಿ ಹರಿದಾಡುತ್ತಿದ್ದು, ಅದನ್ನು ಆಡಳಿತ ಮಂಡಳಿ ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆಯೇ? ಅಥವಾ ತಳ್ಳುವ ಪ್ರಯತ್ನದಲ್ಲಿದೆಯೇ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಿನ್ನೆಯಷ್ಟೇ ಅಂದರೆ ಜುಲೈ 15 ರಂದು ತನ್ನ ಐದೂವರೆ ವರುಷದ ವೈದ್ಯಕೀಯ ವ್ಯಾಸಾಂಗ ಹಾಗೂ ಸೂಕ್ತ ತರಬೇತಿ ನಂತರದ ವೈದ್ಯ ವೃತ್ತಿ ಪೂರೈಸಿದ್ದ ಸಿಮ್ಸ್ ನ ವಿದ್ಯಾರ್ಥಿನಿ ತನ್ನ ಗುರುವಿನ ಬಳಿ ಎನ್ ಓ ಸಿ ಪಡೆಯಲು ಹೋದಾಗ ಸರ್ಜರಿ ವಿಭಾಗದ ಸಹ ಪ್ರದ್ಯಾಪಕರೊಬ್ಬರು ತನ್ನ ಶಿಷ್ಯೆ ಎಂದೂ ಚಿಂತಿಸಿದೆ, ಗುರು ಹಾಗೂ ವೈದ್ಯರಾಗದೆ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವ ಆರೋಪ ಬಂದಿದ್ದರೂ ಆಡಳಿತ ಮಂಡಳಿ ಏಕೆ ಸುಮ್ಮನಿದೆ ಎಂದು ಅಲ್ಲಿನ ಕ್ಯಾಂಪಸ್ ನಲ್ಲಿ ಪರಸ್ಪರ ಪ್ರಶ್ನಿಸಿಕೊಳ್ಳುತ್ತಿದ್ದಾರೆಂದು ನಿಖರ ಮೂಲಗಳು “ತುಂಗಾತರಂಗ ಪತ್ರಿಕೆ” ಗೆ ಲಭ್ಯವಾಗಿವೆ.

ಈ ಸುದ್ದಿಗಳನ್ನೂ ಓದಿ

ಜು.18 -19 : ನಗರದ ಇಲ್ಲೆಲ್ಲ ಬೆಳ್ಳಗ್ಗೆ 10 ರಿಂದ ಸಂಜೆ ವರೆಗೂ ಕರೆಂಟ್ ಇರಲ್ಲ !. https://tungataranga.com/?p=13246

shimoga / ಅಪರೂಪದ ಬಿಳಿನಾಗರ ಪತ್ತೆ ಎಲ್ಲಿ !..ನೀವೇ ನೋಡಿ https://tungataranga.com/?p=13239


ಈ ವಿದ್ಯಾರ್ಥಿನಿ ತನ್ನ ಐದೂವರೆ ವರುಷದ ವ್ಯಾಸಾಂಗ ಮುಗಿಸಿ ಸಂತಸದಿಂದ ತನ್ನ ತವರು ರಾಜ್ಯಕ್ಕೆ ಹೋಗಬೇಕೆಂದಿರುವಾಗ ಗುರುಗಳ ಸ್ಥಾನದ ಗೌರವ ಮರೆತ ಸಹ ಪ್ರಾಧ್ಯಾಪಕನ ವರ್ತನೆ ವಿರುದ್ಧ ಸಿಡಿದೆದ್ದ ಈ ವಿದ್ಯಾರ್ಥಿನಿ ಈಗಾಗಲೇ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆನ್ನಲಾಗಿದ್ದು, ಆ ಪ್ರಾದ್ಯಾಪಕನ ಅಮಾನತಿಗೆ ಆಗ್ರಹಿಸಿದ್ದಾರೆನ್ನಲಾಗಿದೆ.
ಇಲ್ಲಿ ಸಮರ್ಪಕ ನ್ಯಾಯ ಸಿಗದಿದ್ದರೆ, ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆಂದು ಕ್ಯಾಂಪಸ್ ತುಂಬಾ ಬಿಸಿಬಿಸಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಇಂತಹ ಪ್ರಕರಣವನ್ನು ಮುಚ್ವಿಹಾಕಲು ಆಡಳಿತ ಮಂಡಳಿ ನಾನಾ ಪ್ರಯತ್ನ ಮಾಡುತ್ತಿದೆಯೇ? ಅಥವಾ ಇಡೀ ಘಟಬೆಯನ್ನು ತಳ್ಳಿ ಹಾಕುವ ಪ್ರಯತ್ನ ಮಾಡಿದೆಯೇ? ಹೀಗಾದರೆ ಇಲ್ಲಿ ನಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಇಲ್ಲಿಗೆ ಕಲಿಯಲು ಬರುವ ಮಕ್ಕಳ ಕಥೆ ಏನು? ಆಯಾ ಮಕ್ಕಳ ಪೋಷಕರಿಗೆ ಇಲ್ಲಿಯ ಬಗ್ಗೆ ಯಾವ ನಂಬಿಕೆ ಬರಲಿಕ್ಕೆ ಸಾಧ್ಯ? ಇಲ್ಲಿನ ಗುರುಗಳ ಬಗ್ಗೆ ಗೌರವ ಹೇಗೆ ತಾನೇ ಮೂಡೀತು!


ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಈ ಮಾಹಿತಿ ತಿಳಿದಿಲ್ಲವೇ? ಸಿಮ್ಸ್ ಮಗ್ಗುಲಲ್ಲೇ ಇರುವ ಜಿಲ್ಲಾ ರಕ್ಷಣಾಧಿಕಾರಿಗಳ ಕಿವಿಗೆ ಈ ಸುದ್ದಿ ಬಂದಿಲ್ಲವೇ ಎಂಬ ಖಾರದ ಪ್ರಶ್ನೆ ಇಲ್ಲಿ ಮೂಡಿದೆ. ವೈದ್ಯಕೀಯ ಸಚಿವ ಡಾ. ಸುಧಾಕರ್, ಸ್ಥಳೀಯ ಶಾಸಕರು ಹಾಗೂ ಗೃಹಸಚಿವರಾದ ಆರಗ ಜ್ಞಾನೇಂದ್ರ ಅವರು ಇತ್ತ ಗಮನಿಸುವುದು ಒಳಿತು. ಇಲ್ಲದಿರೆ ಕಲಿಕೆಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಚಾರವಾಗಿ ಈ ಘಟನೆ ನಾನಾ ಹೊಸ ತಿರುವು ಪಡೆಯುವ ಸಾದ್ಯತೆಗಳಿವೆ ಎನ್ನಲಾಗಿದೆ.
ಸಿಮ್ಸ್ ನಿರ್ದೇಶಕರಾದ ಸಿದ್ದಪ್ಪ ಹಾಗೂ ಆಡಳಿತ ಮಂಡಳಿ ಈ ವಿಚಾರವಾಗಿ ಬಾಯಿ ಮುಚ್ಚಿಕೊಂಡಿದ್ದರೆ ತಪ್ಪನ್ನ ಮೈಮೇಲೆ ಎಳೆದುಕೊಂಡಂತಾಗುತ್ತದೆಯಲ್ಲವೇ? ಅವರೇ ಈ ಸದ್ದು ಮಾಡುವ ಸುದ್ದಿಗೆ ಆಹಾರವಾಬಹುದು. ಸತ್ಯಾಸತ್ಯತೆ ಬಗ್ಗೆ ಕ್ರಮ ಕೈಗೊಂಡು ವಿವರ ನೀಡುವುದೊಳಿತಲ್ಲವೇ? ಇಲ್ಲದಿರೆ ಗೌರವಾನ್ವಿತ ಹೆಸರು ಹೊಂದಿರುವ ಸಿಮ್ಸ್ ದೇಶದಲ್ಲಿ ಹೊಸ ಕಪ್ಪು ಚುಕ್ಕೆ ಹೊಂದಬೇಕಾಗುತ್ತದೆ ಎಂದು ಕ್ಯಾಂಪಸ್ ಹಾಗೂ ಮೆಗಾನ್ ಆವರಣದಲ್ಲಿನ ಗುಸುಗುಸು ಸುದ್ದಿ.

By admin

ನಿಮ್ಮದೊಂದು ಉತ್ತರ

error: Content is protected !!