ಶಿವಮೊಗ್ಗ ಸಂಸದ ರಾಘವೇಂದ್ರ ಅವರ ಗಮನಕ್ಕೆ…. ರೈಲ್ವೆ ಇಲಾಖೆಯ ಈ ಚಿತ್ರ ನೋಡಿ, ನಾಳಿನ ಪರಿಶೀಲನೆ ಪಕ್ವವಾಗಿರಲಿ

ಶಿವಮೊಗ್ಗ, ಜು. 10:
ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಂತೆ ಹತ್ತಾರು ಮಹತ್ತರ ಯೋಜನೆಗಳನ್ನು ತಂದ, ಕಾಮಗಾರಿ ನಡೆಸಿದ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ನಾಳೆ ಶಿವಮೊಗ್ಗ ಜಿಲ್ಲೆಯ ಹಲವು ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಮಾದ್ಯಮ ಮಿತ್ರರೊಂದಿಗೆ ವೀಕ್ಷಿಸಲು ಅಣಿಯಾಗಿದ್ದಾರೆ.
ಇಷ್ಟೇ ವಿಷಯ, ಮಾಮೂಲಿ ಸುದ್ದಿಯಾಗುತ್ತಿತ್ತು. ಶಿವಮೊಗ್ಗ ಸೋಮಿನಕೊಪ್ಪ ರಸ್ತೆ ಕಾಮಗಾರಿ ಹಾಗೂ ಸವಳಂಗ ರಸ್ತೆ ಕಾಮಗಾರಿ ವಿಚಾರದಲ್ಲಿ ಇಲ್ಲಿಯವರೆಗೆ ಜನ ಅನುಭವಿಸುತ್ತಿದ್ದ ನೋವನ್ನ, ಕಿರಿಕಿರಿಯನ್ನು ಗಮನಿಸದೇ ಇದ್ದ ಇಲಾಖೆ ಈಗ ಸಂಸದರು ಬರ್ತಾರೆ ಅಂದಾಕ್ಷಣ ಹಬ್ಬ ಮಾಡಲು, ಪುಕ್ಕಟ್ಟೆ ಪ್ರದರ್ಶನ ತೋರಿಸಲು ಮುಂದಾಗಿದ್ದಾರೆ.

ವಿಧಾನಸೌಧ ಪಡಸಾಲೆಯಲ್ಲಿನ ವರ್ಗಾವಣೆ “ದರ” ದ ಪತ್ರ ವೈರಲ್….?! ಏನಿದು ರಗಳೆ ಚೀಟಿ, ಗೊತ್ತಿದ್ದವರು ಮಾಹಿತಿ ನೀಡಿ https://tungataranga.com/?p=12998


ಆ ಎಲ್ಲಾ ಚಿತ್ರಗಳು ಇಲ್ಲಿವೆ ನೋಡಿ. ಇನ್ಮುಂದೆ ಡೈಲಿ ಸಂಸದರೇ ವೀಕ್ಷಿಸುವುದಾರೆ ಆಯಾ ಇಲಾಖೆ ಕೆಲಸವೇನು? ಇಂಜಿನಿಯರ್ ಗಳ ಜವಾಬ್ದಾರಿ ಏನು?
ಮದ್ಯದಲ್ಲಿ ಸಿಕ್ಕಿ ಹಾಕಿಕೊಂಡಿರುವ ಸ್ಮಾರ್ಟ್ ಸಿಟಿ ಹೆಸರಿನ ನಾಟಕೀಯ ಕೆಲಸದ ಪಾಡೇನು? ಸಂಸದರು ಇದಕ್ಕೆ ನಾಳೆ ಉತ್ತರಿಸಲಿ.

ನಾಳೆ ಸಂಸದ ರಾಘವೇಂದ್ರ ಅವರಿಂದ ಪರಿಶೀಲನೆ

ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಜು. 11 ರ ನಾಳಿನ ಸೋಮವಾರ ಪರಿಶೀಲನೆ ನಡೆಸಲಿದ್ದಾರೆ ಎಂದು ಲೋಕಸಭಾ ಸದಸ್ಯರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಸೋಮವಾರ ಬೆಳಿಗ್ಗೆ 8 ಗಂಟೆಗೆ ಭದ್ರಾವತಿ ಪಟ್ಟಣದ ಕಡದಕಟ್ಟೆ ಬಳಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯನ್ನು ಸಂಸದರು ವೀಕ್ಷಿಸಲಿದ್ದಾರೆ.
ಅಲ್ಲಿಂದ ಬೆಳಿಗ್ಗೆ 9.30 ಕ್ಕೆ ಶಿವಮೊಗ್ಗದ ವಿದ್ಯಾನಗರ ಫ್ಲೈಓವರ್, 10 ಗಂಟೆಗೆ ಸವಳಂಗ ರಸ್ತೆ ಹಾಗೂ 10.30 ಕ್ಕೆ ಕಾಶೀಪುರ ರೈಲ್ವೆ ಗೇಟ್ ಬಳಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ವೀಕ್ಷಿಸಲಿದ್ದಾರೆ.
ತದನಂತರ ಶಿವಮೊಗ್ಗ ನಗರದಲ್ಲಿ ರೈಲ್ವೆಗೆ ಸಂಬಂಧಿತ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!