ಬೆಂಗಳೂರು,ಜು.09:
ಸರ್ಕಾರ ರಾಜ್ಯಾಧ್ಯಂತ ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಇದೊಂದು ವ್ಯವಹಾರ ಎಂಬ ಆರೋಪವೂ ಕೇಳಿ ಬರುತ್ತಿದೆ. ಇದರ ನಡುವೆ ವಿಧಾನ ಸೌಧ ಸೇರಿದಂತೆ ಹಲವೆಡೆ ಹರಿದಾಡುತ್ತಿರುವ ಪತ್ರ ವೈರಲ್ ಆಗಿದೆ.
ವಿಧಾನಸೌಧದ ಪಡಸಾಲೆಯಲ್ಲಿ ಹರಿದಾಡುತ್ತಿರುವ ಈ ಪತ್ರದಲ್ಲಿನ ವಿಷಯ ಮಾತ್ರ ಅತ್ಯಂತ ಭಯಾನಕ ಹಾಗೂ ಬೀಕರವಾಗಿದೆ ಎಂದರೆ ಅಚ್ಚರಿಪಡದಿರಿ.
ಕಳೆದ ಮಾರ್ಚ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಈ ಪತ್ರದಲ್ಲಿ ಸರ್ಕಾರ ಅದರಲ್ಲೂ ಹಲವರನ್ನು ಮುಂದಿಟ್ಟುಕೊಂಡು ಸರ್ಕಾರದ ವರ್ಗಾವಣೆಯ ವಿಚಾರದ ಲೆಕ್ಕಾಚಾರ ನೀಡಿದ್ದಾರೆ.
ಇಲ್ಲಿ ಡಿಸಿಯಿಂದ ಹಿಡಿದು ವಿ.ಎ. ವರೆಗಿನ ಎಲ್ಲಾ ವರ್ಗಾವಣೆ ಧರಗಳ ಪಟ್ಟಿ ನೀಡಲಾಗಿದೆ.
ಇಂಜಿನಿಯರ್ ಗಳು, ತಹಸಿಲ್ದಾರರು, ಆರ್ ಐ. ವಿಎ, ಅಬಕಾರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಕಂದಾಯ, ಸಮಾಜಕಲ್ಯಾಣ, ತೋಟಗಾರಿಕೆ ಇಲಾಖೆ ವರ್ಗಾವಣೆ ದರ ನಿಗಧಿಯಾಗಿದೆ.
ವಿಶೇಷವಾಗಿ ಪೊಲೀಸ್ ಇಲಾಖೆಯ ವರ್ಗಾವಣೆ ಪಟ್ಟಿಯೂ ಇದೆ. ಯಾರ ಪತ್ರವಿದು…? ಯಾರದಿಲ್ಲಿ ವ್ಯವಹಾರ? ಇದು ದೂರಾಗಿದೆಯಾ? ಅನುಮಾನಗಳ ಸುತ್ತ ಈ ಪತ್ರವನ್ನು ಯಥಾವತ್ತಾಗಿ ನೀಡುತ್ತಿದ್ದೇವೆ.