ನವದೆಹಲಿ, ಜು.೦೬:
ದೇಶದ ಪ್ರಮುಖ ನಗರಗಳಲ್ಲಿ ಜುಲೈ ೦೬ರಿಂದ ಜಾರಿಗೆ ಬರುವಂತೆ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ ಮಾಡಲಾಗಿದೆ. ಇಂದಿನಿಂದ ೧೪.೨ ಕೆಜಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ೫೦ ರು ಏರಿಕೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ಪ್ರಕಟಿಸಿವೆ.
ದೆಹಲಿಯಲ್ಲಿ ೧೪.೨ ಕೆ.ಜಿ ತೂಕದ ಸಿಲಿಂಡರ್ ದರ ೧,೦೫೩ಕ್ಕೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ೧೪.೨ ಕೆ.ಜಿ ತೂಕದ ಸಿಲಿಂಡರ್ ದರ ೧,೦೦೫.೫೦ ರಷ್ಟಿತ್ತು. ಇನ್ನು ಮುಂದೆ ೧೦೫೫.೫೦ ಆಗಲಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ದರ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಸಬ್ಸಿಡಿಯೇತರ ಎಲ್ಪಿಜಿ ಸಿಲಿಂಡರ್ ಬೆಲೆ ೧,೦೫೩ಕ್ಕೆ ತಲುಪಿದೆ.
ಇದೇ ವೇಳೆ ೫ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ ಕೂಡಾ ಪರಿಷ್ಕರಿಸಲಾಗಿದ್ದು, ೧೮ ರು. ಏರಿಕೆ ಕಂಡಿದೆ. ೧೯ ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ದರ ೮.೫ ರು ಪ್ರತಿ ಸಿಲಿಂಡರ್ ನಂತೆ ಇಳಿಕೆಯಾಗಿದೆ.