ಶಿವಮೊಗ್ಗ, ಆ.25:
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ನಿರ್ದೇಶಕ,ಒಕ್ಕಲಿಗರ ಸಂಘದ ಪ್ರಮುಖರು ಹಾಗೂ ಖ್ಯಾತ ವಕೀಲರೂ ಆಗಿದ್ದ ಟಿ. ಗೋವಿಂದರಾಜು ಅವರು ನಿಧನ ಹೊಂದಿದರು.
ಅವರು ಕೆಲಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ನಿಧನಕ್ಕೆ ಆದಿಚುಂಚನಗಿರಿ ವಿದ್ಯಾಲಯ ಹಾಗೂ ಟ್ರಸ್ಟ ಸಂತಾಪ ಸೂಚಿಸಿದೆ.
ಅವರ ಅಂತ್ಯ ಸಂಸ್ಕಾರವು ನಗರದ ರೋಟರಿ ಚಿತಾಗಾರದಲ್ಲಿ ನೆರವೇರಿತು.