ಶಿವಮೊಗ್ಗ ಜು.01:
ಶಿವಮೊಗ್ಗ ಸಮೀಪದ ಲಕ್ಕಿನಕೊಪ್ಪ ಬಳಿ ಎರಡು ಬಸ್ ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಎರಡೂ ಬಸ್ ಚಾಲಕರೂ ಸೇರಿ ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ಬಸ್ ಕೆಕೆಬಿ ಅನ್ಪೂರ್ಣೇಶ್ವರಿ ಮತ್ತು ಸರ್ಕಾರಿ ಕೆಂಪು ಬಸ್ ನಡುವೆ ಮುಖಾಮುಖಿ ಡಿಕ್ಕಿ ಆಗಿದ್ದು 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನ ಶಿವಮೊಗ್ಗ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಂಗಾ ನಗರ ಪೊಲೀಸರು ಸ್ಥಳಕ್ಕೆಭೇಟಿ ನೀಡಿದ್ದಾರೆ. ಮುಖಾಮುಖಿ ಡಿಕ್ಕಿಯಲ್ಲಿ ಸರ್ಕಾರಿ ಬಸ್ ನ ಮುಂಭಾಗ ನುಜ್ಜುಗುಜ್ಜಾಗಿದೆ.
ತುಂಗ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುಖಾಮುಖಿ ಡಿಕ್ಕಿಯಲ್ಲಿ ಕೆಂಪು ಬಸ್ ನ ಮುಂಭಾಗ ನುಜ್ಜುಗುಜ್ಜಾಗಿದೆ.
ಸಮಗ್ರ ಇಲಾಖಾ ಮಾಹಿತಿ ಇಲ್ಲಿದೆ ನೋಡಿ
ದಿನಾಂಕಃ-01-07-2022 ರಂದು ಸಂಜೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕಿನಕೊಪ್ಪ ಕ್ರಾಸ್ ನ ತೋಟದ ಕೆರೆಯ ಹತ್ತಿರ ಶೃಂಗೇರಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ನೋಂದಣಿ ಸಂಖ್ಯೆ KA17F1528 KSRTC ಬಸ್ ಮತ್ತು ಶಿವಮೊಗ್ಗದಿಂದ ಕೊಪ್ಪಕ್ಕೆ ಹೋಗುತ್ತಿದ್ದ ನೋಂದಣಿ ಸಂಖ್ಯೆ KA18B4759 KKB Travels ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾದ ಪರಿಣಾಮ KSRTC ಬಸ್ ಚಾಲಕನಾದ ಮಲ್ಲೇಶ್, 34 ವರ್ಷ ಮತ್ತು KKB Travels ನ ಚಾಲಕನಾದ ಶ್ರೀಧರ್ ಭಟ್, ಕುಂಚೆಬೈಲು, ಶೃಂಗೇರಿ ಹಾಗೂ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ 40 ಜನ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿರುತ್ತದೆ.






