ಶಿವಮೊಗ್ಗ
ಸರ್ಕಾರದ ಕಡೆಗಣನೆ ವಿರೋಧಿಸಿ ನೇರ ಪಾವತಿ ಪೌರ ಕಾರ್ಮಿಕರು ಜುಲೈ ೧ ರಂದು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ ಎಂದು ನೇರ ಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿ. ಪೆಂಚಾಲಯ್ಯ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಪೌರ ಕಾರ್ಮಿಕರ ನೇಮಕಾತಿ ವಿಚಾರವಾಗಿ ಮೌನವಾಗಿದೆ. ನಮ್ಮ ಕಡೆಗಣಿಸುತ್ತಿದೆ

. ಇದನ್ನು ವಿರೋಧಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ ೧ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ಈ ಪ್ರತಿಭಟನೆ ಅಂದಿಗೆ ನಿಲ್ಲುವು ದಿಲ್ಲ. ಜುಲೈ ೨ ರಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ(ಹಳೆಜೈಲು ಆವರಣ) ಮುಷ್ಕರ ಮುಂದುವರೆಲಸಾಗುತ್ತದೆ. ಈ ಮುಷ್ಕರದಲ್ಲಿ ಸುಮಾರು ೬೦೦ ಜನ ಪಾಲ್ಗೊಳ್ಳುತ್ತಿದ್ದಾರೆ ಎಂದರು.


ನಮ್ಮ ಬೇಡಿಕೆ ಈಡೇರುವವರೆಗೂ ನೇರ ಪಾವತಿ ಪೌರ ಕಾರ್ಮಿಕರಾದ ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್ ?ಕ್ಲೀನರ್ಸ್, ಹೆಲ್ಪರ್ಸ್, ಕಸದ ವಾಹನ ಚಾಲಕರು ಭಾವಹಿಸುತ್ತಾರೆ. ಪ್ರತಿಭಟ ನೆಯ ಸಂದರ್ಭದಲ್ಲಿ ತೊಂದರೆಯಾದರೆ ಸಾರ್ವಜನಿಕರು ಸಹಕರಿಸಬೇಕು. ನಮ್ಮ ಮುಷ್ಕರಕ್ಕೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.


ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಶ್ ಮಾತನಾಡಿ, ಸರ್ಕಾರ ಈಗ ನೀಡುತ್ತಿರುವ ವೇತನ ಮತತ್‌ಉ ಸೌಲಭ್ಯ ತುಂಬಾ ಕಡಿಮೆಯಾಗಿವೆ. ಅವರು ನೀಡುವ ೧೨ ಸಾವಿರ ರೂ. ವೇತನದಲ್ಲಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಸೌಲಭ್ಯಗಳು ಇಲ್ಲ. ನಮ್ಮ ಪ್ರತಿಭಟನೆಗೆ ರಾಜ್ಯ ಪೌರ ಕಾರ್ಮಿಕ ಮಹಾಸಂಘದ ಅಧ್ಯಕ್ಷ ನಾರಾಯಣ್ ಅವರು ಬೆಂಬಲ ನೀಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ನರಸಿಂಹಮೂರ್ತಿ ನಾಗರಾಜ್, ಅಣ್ಣಪ್ಪ, ಹನುಮಾನ್, ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!