ಸಾಗರ,
ರಾಜಸ್ತಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ಎಂಬುವವರನ್ನು ಮತಾಂಧರು ಅಮಾನುಷವಾಗಿ ಹತ್ಯೆ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಒಡ್ಡಿರುವ ಘಟನೆಯನ್ನು ಖಂಡಿಸಿ, ತಪ್ಪಿತಸ್ತರಿಗೆ ಅತಿ ಘೋರ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾ ಡಿದ ಶಾಸಕ ಎಚ್.ಹಾಲಪ್ಪ ಹರತಾಳು, ಕನ್ನಯ್ಯ ಲಾಲ್ ಅವರನ್ನು ಹತ್ಯೆ ಮಾಡಿರುವ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮತಾಂಧ ಶಕ್ತಿಗಳು, ಹೇಡಿಗಳಿಂದ ಇಂತಹ ಘನಘೋರ ಕೃತ್ಯ ನಡೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಪ್ಪಿತಸ್ತರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಇಂತಹ ಕೃತ್ಯ ನಡೆಸಿದವರಿಗೆ ಬ್ಲೂಸ್ಟಾರ್
, ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಹುಡುಕಿ, ಹುಡುಕಿ ಹೊಡೆಯಬೇಕು. ಇಂತಹ ದೇಶವಿರೋಧಿ, ಮನುಕುಲ ವಿರೋಧಿಗಳು ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಒತ್ತಾಯಿಸುವ ಕಾಲಘಟ್ಟ ಇದಾಗಿದೆ. ಐಸಿಸ್‌ನಂತಹ ರಾಕ್ಷಸ ಸಂಘಟನೆಗಳ ಬೆಂಬಲದಿಂದ ಇಂತಹ ಕೃತ್ಯ ನಡೆದಿದೆ ಎನ್ನುವ ದೂರುಗಳು ಇರುವ ಹಿನ್ನೆಲೆಯಲ್ಲಿ ಅಂತಹವರ ನೆಲೆಯನ್ನು ಗುರುತಿಸಿ, ಬೇರು ಸಹಿತ ಕಿತ್ತು ಹಾಕಬೇಕು. ಹೇಡಿಗಳಂತೆ ಕೃತ್ಯ ಎಸಗಿದ್ದಾರೆ. ಇದರ ಹಿಂದೆ ದೇಶವಿರೋಧಿಗಳ ಕೈವಾಡವಿದ್ದು, ಅಂತಹವರಿಗೆ ಸರ್ಕಾರ ಗುಂಡಿನ ಮೂಲಕವೇ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ನಗರ ಬಿಜೆಪಿ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರ ವಿಂದ ರಾಯ್ಕರ್, ಟೈಲರ್ ಅಸೋಶಿ ಯೇಷನ್‌ನ ಕೆ.ಎಸ್.ಶ್ರೀಧರ್ ಇತರರದ