ಶಿವಮೊಗ್ಗ : ಕೊರೊನಾ ಮಾಹಿತಿ ಕುರಿತು ಈಗಷ್ಟೆ ಜಿಲ್ಲಾ ವರದಿ ಬಿತ್ತರವಾಗಿದ್ದು ಜಿಲ್ಲೆಯಲ್ಲಿಂದು 175 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ5828 ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಜಿಲ್ಲಾಡಳಿತ ಈಗಷ್ಟೆ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ನಾಲ್ವರು ಸಾವನ್ನಪ್ಪಿದ್ದರೆ, ಒಟ್ಟು 97 ಜನ ಸಾವುಕಂಡಿದ್ದಾರೆ. ಈ ದಿನ 352 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೂ 2317 ಕಂಟೈನ್ಮೆಂಟ್ ಝೋನ್’ಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್’ಗಳ ಸಂಖ್ಯೆ 814 ಆಗಿದೆ. ಇಂದು ಒಟ್ಟು 424 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 294 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2105 ಆಗಿದೆ ಎಂದು ಬುಲೆಟಿನ್ ತಿಳಿಸಿದೆ.
ತಾಲೂಕುವಾರು ವಿವರ:
ಶಿವಮೊಗ್ಗ: 55
ಭದ್ರಾವತಿ: 57
ಶಿಕಾರಿಪುರ: 57
ತೀರ್ಥಹಳ್ಳಿ: 01
ಸೊರಬ: 04
ಇತರೆ ಜಿಲ್ಲೆ: 01
ರಾಜ್ಯ ವರದಿಗಿಂತ ಜಿಲ್ಲಾ ವರದಿ ಸಕಾಲಿಕ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಂಕಿಅಂಶ ವೀಕ್ಷಣೆಗೆ ಪತ್ರವನ್ನು ಒಮ್ಮೆ ಗಮನಿಸಿ ಮಾಹಿತಿ ಪಡೆಯಿರಿ.
ಇದು ಸಿಹಿಮೊಗೆಯ ದೌರ್ಭಾಗ್ಯ!
ಈ ದುರಂತವೊಂದು ಮಾಮೂಲಿಯಾಗಿದೆ. ಶಿವಮೊಗ್ಗದ ಪಾಲಿಗಂತೂ ಅದು ಸತ್ಯ. ಈಗಷ್ಟೆ ಬಿಡುಗಡೆಯಾದ ರಾಜ್ಯ ವರದಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊಂಕಿತರ ಸಂಖ್ಯೆ 246, ಸಾವು ಕಂಡವರ ಸಂಖ್ಯೆ ಇಂದು 4, ಒಟ್ಟು 90,…
ಈ ವರದಿಗಳು ಸರಿ ಆಗೋದ್ಯಾವಾಗ…?