ಶಿವಮೊಗ್ಗ, ಆ.23:
ಶಿವಮೊಗ್ಗ ಹಿಂದೂ ಮಹಾಸಭಾ ಗಣಪನ ಉತ್ಸವವೇ ಅದರಲ್ಲೂ ವಿಸರ್ಜನಾ ಪೂರ್ವ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಾ ಹೆಸರುವಾಸಿಯಾಗಿತ್ತು. ಕೊರೊನಾ ಗಣಪನಿಗೂ ಶಿವಮೊಗ್ಗದಲ್ಲಿ ONE DAY MATCH ಆಡಿಸಿ ಗೆಲ್ಲಿಸಿ ಕಳಿಸಿದಂತೆ ಮಾಡುಬಿಟ್ಟ…,!
ಈ ಪೀಠಿಕೆ, ನಿನ್ನೆಯಷ್ಟೆ ಅಂಕಣಕ್ಕೆ ಬಂದಿದ್ದ ಹಿಂದೂ ಮಹಾಸಭಾ ಗಣಪ ರಾತ್ರಿ ಹೆಚ್ಚು ಸದ್ದುಮಾಡದೆ ತಾಯಿಯ ಮಡಿಲು ಸೇರಿದ ವಿಚಾರದ್ದು.
ಹಾರ ತುರಾಯಿ, ಕಲಾತಂಡಗಳ ವೈಭವದೊಂದಿಗೆ ದಿನವಿಡೀ ಭರ್ಜರಿ ಮೆರವಣಿಗೆಯ ಮೂಲಕ ವಿಸರ್ಜನೆಗೊಳ್ಳುತ್ತಿದ್ದ ಹಿಂದೂ ಮಹಾಸಭಾ ಗಣಪತಿ ಈ ಬಾರಿ ಕೊರೋನ ಕಿರಿಕ್ ನಿಂದಾಗಿ ಮೆರವಣಿಗೆ ಇಲ್ಲದೆ ಸರಳವಾಗಿ ಮನೆಗೆ ಹೋಗಿದ್ದು ಕಂಡುಬಂದಿತು.
ಗಣಪತಿ ಹಬ್ಬದಿಂದ 12 ದಿನಕ್ಕೆ ಸರಿಯಾಗಿ ಬರುವ ಅನಂತನ ಚತುರ್ಥಿಗೆ ಅದ್ಧೂರಿ ಮೆರವಣಿಗೆಯ ಮೂಲಕ ಗಣಪತಿ ವಿಸರ್ಜನೆ ನಡೆಸಲಾಗುತ್ತಿದ್ದ ಹಿಂದೂ ಮಹಸಭಾ ಗಣಪತಿಯನ್ನ ಪ್ರತಿಬಾರಿ ಮಧ್ಯರಾತ್ರಿ 2 ಗಂಟೆಗೆ ಬಿಡಲಾಗುತ್ತಿತ್ತು. ಆದರೆ ಈ ಬಾರಿ ರಾತ್ರಿ 10 ಗಂಟೆಗೆ ತುಂಗಾ ನದಿಗೆ ವಿಸರ್ಜಿಸಲಾಗಿದೆ.
ರಾತ್ರಿ 9-30 ರ ಸಮಯಕ್ಕೆ ಗಣಪತಿಯನ್ನ ಭೀಮೇಶ್ವರ ದೇವಾಲಯಲದಿಂದ ಗಣಪತಿಯನ್ನ ಹೊತ್ತ ಭಕ್ತರು ದೇವರಿಗೆ ಮೂರು ಪ್ರದಕ್ಷಿಣೆಯನ್ನ ಹಾಕಿ. ಭೀಮೇಶ್ವರ ದೇವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಂಟಪದ ಬಳಿ ಗಣಪತಿಯನ್ನ ಹೊತ್ತು ತರಲಾಯಿತು. ಮಂಟಪದ ಬಳಿಯ ಗಂಗಾಪರಮೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನದಿಯಲ್ಲಿ ಗಣಪನನ್ನ ವಿಸರ್ಜಿಸಲಾಯಿತು.
ಹರ ಹರ ಮಹದೇವ, ಗಣಪತಿ ಬಪ್ಪ ಮೋರೆಯಾ, ಬೋಲೋ ಭಾರತ್ ಮಾತಕೀ, ವಂದೇ ಮಾತರಂ, ಹೀಗೆ ಘೋಷಣೆಗಳ ಮೂಲಕ ಗಣಪತಿಯನ್ನ ಹೊತ್ತು ತರಲಾಯಿತು.


ಕೊರೊನಾ ಜನರಿಗಷ್ಟೆ ಅಲ್ಲದೇ ದೇವಾನುದೇವತೆಗಳಿಗೂ ಕಿರಿಕ್ ಉಂಟುಮಾಡುತ್ತಿರುವುದು ದುರಂತವೇ ಹೌದು.
ಅದೇ, ಮೊದಲಾಗಿದ್ದರೆ ಹಿಂದೂ ಮಹಾಸಭಾ ಗಣಪ ಮೆರವಣಿಗೆ ಎಂದರೆ ಶಿವಮೊಗ್ಗ ಅತ್ಯಂತ ಕಟ್ಟುನಿಟ್ಟಿನ ಬನದ್ರ ಸ್ಥಳವಾಗುತ್ತಿತ್ತು. ಪೊಲೀಸ್ ಇಲಾಖೆ ನೆರವಿನೊಂದಿಗೆ ಜಿಲ್ಲಾಡಳಿತ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾವಲು ಕಾಯಬೇಕಿತ್ತು. ಇಡೀ ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು. ಒಂದೆಡೆ ಸಂಭ್ರಮ, ಮತ್ತೊಂದೆಡೆ ಭದ್ರತೆ ನಡುವೆ ಭಕ್ತರ ಭಾವಪೂರ್ಣ ಮನಸು ಇಡೀ ನಗರಕ್ಕೆ ಹೊಸಕಳೆ ನೀಡುತ್ತಿದ್ದವು. ಜಿಲ್ಲಾಡಳಿತ ನಿಲುವಿಗೆ ಬದ್ದರಾದ ಹಿಂದೂ ಮಹಾಸಭಾ ಸೇವಾ ಸಮಿತಿ ಕೊರೊನಾ ಕಿರಿಕ್ ತಪ್ಪಿಸಲು ನಿಯಮದಂತೆ ಆದೇಶ ಪಾಲಿಸಿ ಆಡಳಿತದ ಹಾಗೂ ಜನಮೆಚ್ಚುಗೆಗೆ ಪಾತ್ರವಾಯಿತು.

By admin

ನಿಮ್ಮದೊಂದು ಉತ್ತರ

You missed

error: Content is protected !!