ಬೆಂಗಳೂರು, ಜೂ.೧೮:
ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸುದ್ದಿಗೋಷ್ಠಿ ನಡೆಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಗಳಿಸಿದೆ. ರಾಜ್ಯದಲ್ಲಿ ಒಟ್ಟು ಶೇ೬೧.೮೮ ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಜಿಲ್ಲಾವಾರು ಫಲಿತಾಂಶ
1 ದಕ್ಷಿಣ ಕನ್ನಡ:88.02.2ಉಡುಪಿ:86.38.3 ವಿಜಯಪುರ77.14.4 ಬೆಂಗಳೂರು ದಕ್ಷಿಣ:76.24.5 ಉತ್ತರ ಕನ್ನಡ: ೭೪.೩೩, ೬ ಕೊಡಗು: ೭೩.೨೨, ೭ ಬೆಂಗಳೂರು ಉತ್ತರ: ೭೨.೦೧, ೮ ಶಿವಮೊಗ್ಗ: ೭೦.೧೪, ೯ ಚಿಕ್ಕಮಗಳೂರು: ೬೯.೪೨, ೧೦ ಬಾಗಲಕೋಟೆ: ೬೮.೬೯, ೧೧ ಚಿಕ್ಕೋಡಿ: ೬೮.೦೦, ೧೨ ಬೆಂಗಳೂರು ಗ್ರಾಮಾಂತರ: ೬೭.೮೬, ೧೩ ಹಾಸನ: ೬೭.೨೮, ೧೪ ಹಾವೇರಿ: ೬೬.೬೪, ೧೫ ಧಾರವಾಡ: ೬೫.೬೬, ೧೬ ಚಿಕ್ಕಬಳ್ಳಾಪುರ: ೬೪.೪೯, ೧೭ ಮೈಸೂರು: ೬೪.೪೫, ೧೮ ಚಾಮರಾಜನಗರ: ೬೩.೦೨, ೧೯ ದಾವಣಗೆರೆ: ೬೨.೭೨, ೨೦ ಕೊಪ್ಪಳ: ೬೨.೦೪, ೨೧ ಬೀದರ್: ೬೦.೭೮, ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರೇ ಮೇಲುಗೈ, ೨೨ ಗದಗ: ೬೦.೬೩, ೨೩ ಯಾದಗಿರಿ: ೬೦.೫೯, ೨೪ ಕೋಲಾರ; ೬೦.೪೧, ೨೫ ರಾಮನಗರ: ೬೦.೨೨, ೨೬ ಬೆಳಗಾವಿ ೫೯.೮೮, ೨೭ ಕಲಬುರಗಿ: ೫೯.೧೭, ೨೮ ತುಮಕೂರು: ೫೮.೯೦, ೨೯ ಮಂಡ್ಯ: ೫೮.೭೭, ೩೦ ರಾಯಚೂರು: ೫೭.೯೩, ೩೧ ಬಳ್ಳಾರಿ: ೫೫.೪೮, ೩೨ ಚಿತ್ರದುರ್ಗ: ೪೯.೩೧
ಆದಿಚುಂಚನಗಿರಿ ಪ್ರಥಮಪ್ರಸಕ್ತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ ಎಂಟನೇ ಸ್ಥಾನ ಪಡೆದಿದ್ದು, ಲಬ್ಯವಿರುವ ಮಾಹಿತಿ ಪ್ರಕಾರ ಶರಾವತಿ ನಗರ
ಆದಿಚುಂಚನಗಿರಿ ಪಿಯು ಕಾಲೇಜಿನ ದ್ರಶಿತ್ ಎಂ.ಎಸ್ ೫೯೪, ತನುಶ್ರೀ ೫೯೪, ಚಿನ್ಮಯಿ ಡಿ. ೫೯೩, ಅಪೇಕ್ಷ ೫೯೨, ಗೌರಿ ಭಾರಧ್ವಜ್ ೫೯೧, ರಿಯಾ ಡಿಸೋಜ ೫೯೦, ಸುಪ್ರಿತ್ ಹೆಚ್.ಎಸ್. ೫೯೦ ಅಂಕ ಪಡೆದಿದ್ದು, ಭದ್ರಾವತಿಯ ಬಿಜಿಎಸ್ ಗುರುಕುಲ ಸ್ವತಂತ್ರ ಪಿಯು ಕಾಲೇಜಿನ ಬೆಳ್ಳಿ ಬಿ.ಯು ಅವರು ೫೯೩ ಅಂಕ ಪಡೆದಿದ್ದಾರೆ.
ರಿಯಾ ಡಿಸೋಜಾಗೆ ೫೯೦ ಅಂಕ
ಶಿವಮೊಗ್ಗ, ಜೂ.೧೮:
ದ್ವಿತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಪಿಯು ಕಾಲೇಜ್ ವಿದ್ಯಾರ್ಥಿನಿ
ರಿಯಾ ಡಿಸೋಜ (೫೯೦) ಅಂಕ ಗಳಿಸಿದ್ದಾರೆ.
ಈ ಪ್ರತಿಭಾನ್ವಿತೆ ಪತ್ರಕರ್ತ ರಾಕೇಶ್ ಡಿಸೋಜ ಮತ್ತು ಅಸುಂತ ಸಿಕ್ವೇರ ಇವರ ಪುತ್ರಿ.
ಪಿಯುಸಿ: ಎನ್. ವಿಶ್ವಗೆ ೫೨೭ ಅಂಕ
ಶಿವಮೊಗ್ಗ, ಜೂ.೧೮:
ಅಂಚೆ ಇಲಾಖೆಯಲ್ಲಿ ಜಿಡಿಎಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಎನ್.ವಿಶ್ವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೫೨೭ ಅಂಕ ಗಳಿಸಿದ್ದಾರೆ.
ಪ್ರಸ್ತುತ ಭದ್ರಾವತಿ ಪೇಪರ್ ಟೌನ್ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವ ಕರಸ್ಪಾಂಡೆನ್ಸ್‌ನಲ್ಲಿ ಪರೀಕ್ಷೆ ಕಟ್ಟಿ ಶೇ.೮೯ರಷ್ಟು ಅಂಕ ಪಡೆದಿದ್ದು, ಅಂಚೆ ಕಚೇರಿಯ ಸಿಬ್ಬಂದಿ, ಬಂಧುಗಳು, ಸ್ನೇಹಿತರು ಅಭಿನಂದಿಸಿದ್ದಾರೆ.