ಶಿವಮೊಗ್ಗ, ಜೂ.17:
ಕುಪ್ಪಳ್ಳಿಯಿಂದ ಬೆಂಗಳೂರಿಗೆ ಹೊರಟಿರುವ ವಿಶ್ವಮಾನವ ಜಾಗೃತ ಜ್ಯೋತಿ ಶಿವಮೊಗ್ಗಕ್ಕೆ ಆಗಮಿಸಿತು.
ನಗರದ ಕೆ. ಎಸ್. ಆರ್.ಟಿ.ಸಿ ಬಸ್ಸುನಿಲ್ದಾಣದ ಎದುರು ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು. ಭಾಗವಹಿಸಿದ್ದ ಗಣ್ಯರು ಜಾಗೃತ ಜ್ಯೋತಿ, ಪ್ರತಿಭಟನೆ ಮಹತ್ವದ ವಿಚಾರವಾಗಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ, ಸಾಹಿತಿಗಳು, ಚಿಂತಕರಾದ ಪ್ರೊ. ರಾಜೇಂದ್ರ ಚನ್ನಿ, ಬಿ. ಚಂದ್ರೇಗೌಡ, ಡಾ. ಎಚ್. ಟಿ. ಕೃಷ್ಣಮೂರ್ತಿ, ರೈತನಾಯಕ ಕೆ. ಟಿ. ಗಂಗಾಧರ, ಹಿರಿಯ ಹೋರಾಟಗಾರ ಟಿ. ಕೃಷ್ಣಪ್ಪ, ಡಿ.ಎಸ್.ಎಸ್. ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಕಾಂಗ್ರೆಸ್ ಮುಖಂಡ ರಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀಕಾಂತ, ಮಹಿಳಾ ವಿಭಾಗದ ಭಾರತಿ ರಾಮಕೃಷ್ಣ, ಚುಂಚಾದ್ರಿ ವೇದಿಕೆಯ ರಾಜೀವಿ, ಡಾ. ಶಾಂತಾಸುರೇಂದ್ರ, ಶಾರದಾ ಶೇಷಗಿರಿಗೌಡ, ಡಾ. ಶೇಖರ್ ಗೌಳೇರ್, ನೆಂಪೆ ದೇವರಾಜ್, ನಿಶ್ಚಲ್ ಜಾದೂಗಾರ್, ಕಜಾಪ ಜಿಲ್ಲಾ ಉಪಾಧ್ಯಕ್ಷರಾದ ಡಿ. ಸಿ. ದೇವರಾಜ್, ಅಶಿತ್, ಗೋ. ರಮೇಶ್ ಗೌಡ, ಸುಂದರೇಶ್, ನಾಗರಾಜ್, ಕೊಳಿಗೆ ವಾಸಪ್ಪ ಗೌಡ, ಅನುರಾಧ, ಲೀಲಾವತಿ, ನಾಗೇಶ್, ರಾಜಪ್ಪ, ಸೋಮಿನಕಟ್ಟಿ, ವನಮಾಲ ಮೋಹನ್, ಸುಶೀಲಾ ಷಣ್ಮಗಂ, ಬಿ.ಟಿ. ಅಂಬಿಕಾ, ಮಮತಾ ಶಿವಣ್ಣ, ಡಾ. ಭಾಗ್ಯಲಕ್ಷ್ಮಿ, ಎ.ಕೆ. ಚಂದ್ರಪ್ಪ, ಮಲ್ಲಿಕಾರ್ಜುನ ಕಾನೂರು, ಸುಜಾತ, ನೇತ್ರಾಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು. ಶಿವಮೊಗ್ಗ ದಿಂದ ಭದ್ರಾವತಿ ಕಡೆಗೆ ಪ್ರಯಾಣ ಬೆಳಸಿತು.



