ಶಿವಮೊಗ್ಗ, ಜೂ.17:
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ* ಯೋಜನೆಯಲ್ಲಿ ಎಲ್ಲವೂ ಇದೆ. ಆದರೆ ಇರಬೇಕಾದುದಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಪಾಲಿಕೆಯ ಮಾಜಿ ಸದಸ್ಯ ಐಡಿಯಲ್ ಗೋಪಿ ಆರೋಪಿಸಿದ್ದಾರೆ.
ಈ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ಫುಟ್ಬಾತ್ ನಲ್ಲಿ ಇರುವ ಗಿಡಗಳನ್ನು ತೆಗೆದು ಹಾಕುವುದನ್ನು ನಾವು ನೋಡುತ್ತಿದ್ದೇವೆ.
ಇಲ್ಲಿ ಹಳೆಯ ಕಾಲದ ಟೆಲಿಫೋನ್ ಕಂಬಗಳನ್ನು ಮಾತ್ರ ತೆರವು ಮಾಡುತ್ತಿಲ್ಲ ಹಳೆಯ ಟೆಲಿಫೋನ್ ಕಂಬಗಳನ್ನು ಹಾಗೆಯೇ ಉಳಿಸಿಕೊಂಡು ಫುಟ್ಪಾತ್ ನಿರ್ಮಾಣ ಮಾಡುತ್ತಿದ್ದಾರೆ ಇದರಿಂದ ಪಾದಚಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇವರಿಗಿಲ್ಲದಿರುವುದು ದುರಂತವೇ ಹೌದು.
ಸುಪ್ರೀಂಕೋರ್ಟ್ ನಿಂದ ನಿಷೇಧಗೊಂಡರೂ ಸಹ ಸ್ಮಾರ್ಟ್ ಸಿಟಿಯಲ್ಲಿ ಫ್ಲೆಕ್ಸ್ ಅಳವಡಿಸಲು ಅವಕಾಶವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲಲ್ಲಿ ಫ್ಲೆಕ್ಸ್ ಅಳವಡಿಸಿದ್ದರು ಸಹ ಅದಕ್ಕೆ ಅವಕಾಶ ನೀಡಿ ಫುಟ್ಪಾತ್ ನಿರ್ಮಾಣ ಮಾಡುತ್ತಿದ್ದಾರೆ ಇದು ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ ಎಂದಿದ್ದಾರೆ.
ಸ್ಮಾರ್ಟ್ ಸಿಟಿ ಅಧಿಕಾರಿಗಳು ಎಚ್ಚೆತ್ತುಕೊಂಡು ಫುಟ್ಪಾತ್ ಮೇಲೆ ಇರುವ ಪಾದಚಾರಿಗಳಿಗೆ ತೊಂದರೆಯಾಗುವ ಅನಧಿಕೃತ ಫ್ಲೆಕ್ಸಗಳನ್ನು, ಹಳೆಯ ಕಾಲದ ಟೆಲಿಫೋನ್ ಕಂಬಗಳನ್ನು ಮತ್ತು ಅಂಗಡಿಗಳ ಮುಂದೆ ಅಳವಡಿಸಿರುವ ನಾಮಫಲಕಗಳನ್ನು ತೆಗೆದುಹಾಕುವರೇ…? ಅವರಿಗೆ ಈ ಬಗ್ಗ ಜ್ಞಾನೋದಯ ಆಗುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.
ದಯಮಾಡಿ ಪುಟ್ ಪಾತ್ ನ ಅಲ್ಲಲ್ಲಿ ಗಿಡಗಳನ್ನು ಬೇಕಾದರೆ ಬೆಳೆಸಿ ಎಂದೂ ಸಹ ಐಡಿಯಲ್ ಗೋಪಿ ಸಲಹೆ ನೀಡಿದ್ದಾರೆ.




