ತೀರ್ಥಹಳ್ಳಿ :

 ಕನ್ನಡ ಧ್ವಜವನ್ನು ಅಪಮಾನ ಮಾಡಿರುವವರನ್ನು ಖಂಡಿಸುತ್ತೇನೆ. ಈ ರೀತಿ ಪ್ರತಿಭಟನೆಯಲ್ಲಿ ಕನ್ನಡ ಬಾವುಟ ವನ್ನು ತೆಗೆದುಕೊಂಡು ಹೋಗಲು ಶಕ್ತಿ ಇಲ್ಲದಿದ್ದರೆ ಮತ್ತು ಜನ ಇಲ್ಲದಿದ್ದರೆ ಬಾವುಟವನ್ನು ಯಾಕೆ ತೆಗೆದುಕೊಂಡು ಹೋಗಬೇಕು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಪ್ರತಿಭಟನಾ ಪಾದಯಾತ್ರೆಯಲ್ಲಿ ಕನ್ನಡ ಧ್ವಜವನ್ನು ನೆಲಕ್ಕೆ ಬೀಳಿಸಿ ಅವಮಾನ ಮಾಡಿರುವ ಕುರಿತು ದೂರವಾಣಿ ಮೂಲಕ ಮಾತನಾಡಿದ ಸಚಿವರು, ಇದು ಅನವಶ್ಯಕ ರಾಜಕೀಯ ನೆಡೆ. ರಾಜಕೀಯ ಹುನ್ನಾರಕ್ಕೋಸ್ಕರ ಮಾಡಿದ ಪ್ರತಿಭಟನೆ ಇದಾಗಿದೆ. ಹೋರಾಟಕ್ಕೂ ಕನ್ನಡದ ಪಠ್ಯಕ್ಕೂ ಸಂಬಂಧವೇ ಇಲ್ಲ. ಕನ್ನಡದ ಪಠ್ಯ ಪುಸ್ತಕವೆಲ್ಲವೂ ಚೆನ್ನಾಗಿಯೇ ಬಂದಿವೆ. ಈಗಾಗಲೇ ಅದರ ಬಗ್ಗೆ ವಿವರ ವಾಗಿ ಶಿಕ್ಷಣ ಸಚಿವರು ವಿವರಣೆ ಕೊಟ್ಟಿದ್ದಾರೆ

ಅನಾವಶ್ಯಕವಾಗಿ ಮೆರವಣಿಗೆ ಮಾಡಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು..

By admin

ನಿಮ್ಮದೊಂದು ಉತ್ತರ

error: Content is protected !!