ಶಿವಮೊಗ್ಗ,ಆ.21:
ಇದು ನಮ್ಮಲ್ಲೇ ಮೊದಲು
ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂದರೆ ಶೇಕಡ 100ರಷ್ಟು ಫಲಿತಾಂಶ ಪಡೆದದ್ದು ನಾವೇ ಎಂದು ಬೀಗುವ ಕೆಲ ಖಾಸಗೆ ಶಾಲೆಗಳ ಅವ್ಯವಹಾರ ನಿಮಗೆ ಗೊತ್ತಿರಲಿಕ್ಕಿಲ್ಲ.
ಒಂದರಿಂದ 9ನೇ ತರಗತಿಯರೆಗೆ ಇದೇ ಶಾಲೆಯಲ್ಲಿ ಚೆನ್ನಾಗಿ ಓದಿಸಿದಂತೆ ಆಟವಾಡುತ್ತಾ ಡೊನೇಷನ್ ಹಾಗೂ ಪೀಜು ವಸೂಲಿಯ ನಡುವೆ ಹಾಳಮೂಳ ಕಥೆ ಕಟ್ಟಿ ನಾಟಕವಾಡುವ ಕೆಲ ಖಾಸಗಿ ಶಾಲೆಗಳು 9ನೇ ತರಗತಿ ಸಮಯದಲ್ಲಿ ಈ ವ್ಯವಹಾರ ಮಾಡುತ್ತವೆ. ಅಂದರೆ 9ನೇ ತರಗತಿಯ ಅತ್ಯಂತ ಕಡಿಮೆ ಅಂಕ ಪಡೆದ ಮಕ್ಕಳನ್ನು ಗುರುತಿಸಿ ಬೇರೆಡೆ ಕಳಿಸುವ ವ್ಯವಹಾರ ನಡೆಸುತ್ತಾರೆ. ಇಲ್ಲಿ ಮಾತ್ರ ಯಾವುದೇ ಮುಲಾಜಿಲ್ಲ ಎಂಬಂತೆ ಆ ಮಗುವಿನ ಟಿಸಿಕೊಟ್ಟು ಕಳಿಸುತ್ತಾರೆ. ಆ ಹೊತ್ತಿನಲ್ಲಿ ವಿದ್ಯಾರ್ಥಿ ಹೇಗೆ ತಾನೆ ತನ್ನ ಮುಂದಿನ ವ್ಯಾಸಂಗವನ್ನು ಎಲ್ಲಿ ಮಾಡಬೇಕು?
ಅದೂ ಎಸ್ಎಸ್ಎಲ್ಸಿ ಹೊತ್ತಿನಲ್ಲಿ ಮಾತ್ರ ಖಾಸಗಿ ಶಾಲೆಗಳಿಗೆ ಈ ಪ್ರಶ್ನೆ ಮೂಡುತ್ತದೆ. ಏಕೆಂದರೆ ನಮ್ದು ನೂರು ಎಂದು ಬೀಗಿಸಿಕೊಳ್ಳಲು, ಬ್ಯಾನರ್ ಗಳಲ್ಲಿ ತಮ್ಮ ಪೋಟೋಗಳನ್ನ ಹಾಕಿಕೊಂಡು ಮಿಂಚುವ ಕಾಯಕದ ಕೆಲ ಶಾಲೆಗಳಲ್ಲಿದು ನಿತ್ಯನಿರಂತರ. ಕೇವಲ ಅತ್ಯಧಿಕ ಫಲಿತಾಂಶ ಹೊಂದಿರುವವರನ್ನು ಶಾಲೆಯಲ್ಲಿ ಇಟ್ಟುಕೊಂಡು ಉಳಿದ ಹತ್ತಾರು ವಿದ್ಯಾರ್ಥಿಗಳನ್ನು ಟಿಸಿ ಕೊಟ್ಟು ಕಳುಹಿಸುವ ಕಿರಾತಕ ಸಂಸ್ಥೆಗಳು ತಮ್ಮದೇ ಕೋಡಿನ ಮೂಲಕ ಶೇಕಡ 100ರಷ್ಟು ಫಲಿತಾಂಶ ಪಡೆದ ಎಂದು ಎಲ್ಲೆಂದರಲ್ಲಿ ಪೋಸು ನೀಡುತ್ತಾ ಮಕ್ಕಳಿಗೆ ಮಾಡಿದ ಮೋಸವನ್ನು ಮುಚ್ಚಿ ಹಾಕುತ್ತಾರೆ.
9 ತರಗತಿಯ ಕಿಕ್ ಔಟ್ ಜಾಡು ಹುಡುಕುತ್ತಿರುವ ತುಂಗಾತರಂಗ
ಬುದ್ಧಿವಂತರಿಗೆ ಮಾತ್ರ ಪಾಠಹೇಳಲು ಶಾಲೆಗಳು ಬೇಡ . ಮಾಡುವುದಿದ್ದರೆ ಮೊದಲು ಪಡೆದ ಡೊನೇಷನ್ ಪೀಜು ವಾಪಾಸ್ ಕೊಡ್ತಾರಾ?ಇಂತಹ ಕಿಡಿಗೇಡಿ ವರ್ತನೆಯ ಶಾಲೆಗಳ ವ್ಯವಹಾರದ ಮಾಹಿತಿ ಹಾಗೂ ಕಳೆದ ವರ್ಷವಷ್ಟೇ ಎಸೆಸೆಲ್ಸಿಯಲ್ಲಿ ಸುಮಾರು ಎಂಟು ಜನರನ್ನು ಕಳುಹಿಸಿದ ಪುಕ್ಕಟ್ಟೆ ಸಂಸ್ಥೆಯೊಂದರ ವ್ಯವಹಾರವನ್ನು ತುಂಗಾತರಂಗ ಸಿದ್ದಪಡಿಸುತ್ತಿದೆ. ಸದ್ಯದಲ್ಲೇ 9 ಕ್ಲಾಸಿಂದ ಒಂದು ಪ್ರಖ್ಯಾತ ಎಂದುಕೊಳ್ಳುವ ಶಾಲೆ ನೀಡಿದ ಟಿಸಿ, ಅದರ ಪೋಷಕರ ಮಾಹಿತಿಯನ್ನು ಕಲೆ ಹಾಕುತ್ತಿದೆ. ದಾಖಲೆ ಸಹಿತ ಸುದ್ದಿ ಉತ್ತಮವಲ್ಲವೇ?
ಇದಕ್ಕೊಂದು ಉದಾಹರಣೆಯೆಂದರೆ ಕಳೆದ ವರ್ಷ 9ನೇ ತರಗತಿ ಯಿಂದ ಕಿತ್ತು ಹಾಕಿದ್ದ ಮಗುವನ್ನು ಇದೇ ತುಂಗಾತರಂಗ ದಿನಪತ್ರಿಕೆ ರೋಟರಿ ವಿದ್ಯಾಲಯಕ್ಕೆ ಅತ್ಯಂತ ಪ್ರೀತಿಯಿಂದ ಕೇಳಿ ಕಳುಹಿಸಿದ್ದು ಅಲ್ಲಿ ಪ್ರವೇಶ ಪಡೆದಿದ್ದ ಈ ವಿದ್ಯಾರ್ಥಿ ಎಸೆಸೆಲ್ಸಿಯಲ್ಲಿ ಇಂದು ಶೇಕಡ 80ರಷ್ಟು ಫಲಿತಾಂಶ ಪಡೆದಿದ್ದಾರೆ. ಈಗ ಅವರು ಶಿವಮೊಗ್ಗದ ಖ್ಯಾತ ಇಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ನೀಡುವ ಜೊತೆಗೆ ಬುದ್ಧಿವಂತರಿಗೆ ಪಾಠ ಹೇಳಿಕೊಡುವಂತಹ ನಾಟಕವಾಡುವ ಇಂತಹ ಶಿಕ್ಷಣ ಸಂಸ್ಥೆಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತುಂಗಾತರಂಗ ಸಂಗ್ರಹಿಸಲಾಗಿದೆ. ಇದನ್ನು ಹಂತಹಂತವಾಗಿ ಯಾವುದೇ ಮುಲಾಜಿಲ್ಲದೆ ಯಾರದೇ ಹಂಗಿಲ್ಲದೆ ಅರ್ವಜನಿಕವಾಗಿ ನೀಡುವ ಕೆಲಸವನ್ನು ಮಾಡುತ್ತಿದೆ. ಶಿಕ್ಷಣ ಇಲಾಖೆ ತನ್ನ ಕರ್ತವ್ಯವೆಂಬಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಮಾಡುವ ರಿನಿವಲ್ ಸಹ ನಾಟಕದ ಕಾಯಕವಾಗಿದೆ ಹಿರಿಯ ಅಧಿಕಾರಿಗಳ ಎದುರು ನಾಟಕ ಮಾಡಿದವರಿಗೆ ಮಾನ್ಯತೆ ಕೊಡುವ ಶಿಕ್ಷಣ ಇಲಾಖೆಯ ವ್ಯವಸ್ಥೆ 9ನೇ ತರಗತಿಯ ಹೊತ್ತಿನಲ್ಲಿ ಮಕ್ಕಳನ್ನು ಹೊರಗೆ ಕಳಿಸುವ ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಯಾಕೆ ಇಲ್ಲಿಯವರೆಗೆ ಕ್ರಮಕೈಗೊಂಡಿಲ್ಲ? ಇದನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಅಗತ್ಯ ಎದ್ದು ಕಾಣುತ್ತಿದೆ.