ಶಿವಮೊಗ್ಗ, ಆ.19:
ದಿನ ಕಳೆಯುತ್ತಿರುವುದು ಅರ್ಥವಾಗುತ್ತಿಲ್ಲ. ಕ್ಷಣ ಕ್ಷಣವೂ ಕೊರೊನಾ ಕಂಟಕ ಯಮಹಿಂಸೆ ರೂಪಕ್ಕೆ ತಿರುಗಿ ದೇಶ ಹಾಗೂ ರಾಜ್ಯವನ್ನು ಬೆಚ್ಚಿಬೀಳಿಸುತ್ತಿದೆ. ಅದೇ ಸಾಲಿನಲ್ಲಿ ಸೇರುತ್ತಿರುವ ಶಿವಮೊಗ್ಗ ಜಿಲ್ಲೆ ಇಂದು 5000 ಗಡಿ ದಾಟಿದೆ.
ಜಿಲ್ಲೆಯಲ್ಲಿ ಇಂದು 291 ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 5057 ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ಮಾಹಿತಿ ಪ್ರಕಟಿಸಿದೆ.

ಇಂದು ಸಹ ಸೋಂಕಿನಿಂದ 2 ಜನ ಸಾವುಕಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 81 ಕ್ಕೇರಿದೆ. ಶತಕದ ಸನಿಹಕ್ಕೆ ತಲುಪಿದ ಸಾವಿನ ಸಂಖ್ಯೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 45725 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, 35898 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. 5057 ಜನರಿಗೆ ಕೊರೋನ ಪಾಸಿಟಿವ್ ಎಂದು ವರದಿ ಪ್ರಕಟವಾಗಿದೆ. ಇಂದು 72 ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ಗಳಿಂದ ಬಿಡುಗಡೆಗೊಂಡಿದ್ದಾರೆ.
ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ 2950 ಕ್ಕೇರಿದೆ. 237 ಜನ ಕೊರೋನ ಸೋಂಕಿತರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 975 ಜನ ಕೊರೋನ ಕೇರ್ ಸೆಂಟರ್ ನಲ್ಲಿ, 247 ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, 439 ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ 128 ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯಗೊಂಡ ಕೊರೋನ ಪಾಸಿಟಿವ್ ಸಂಖ್ಯೆ 2026 ಎಂದು ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್ ಗಳು ಸಹ ಹೆಚ್ಚಾಗಿವೆ. ನಿನ್ನೆಯವರೆಗೆ 1885 ಕಂಟೈನ್ಮೆಂಟ್ ಜೋನ್ ಗಳಿದ್ದ ಜಿಲ್ಲೆಯಲ್ಲಿ ಇಂದು 1939 ಕ್ಕೇರಿದೆ. 654 ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳು 682 ಎಂದು ಬುಲಿಟಿನ್ ಪ್ರಕಟಿಸಿವೆ.
ತಾಲೂಕುವಾರು ವಿವರ:
ಜಿಲ್ಲೆಯಲ್ಲಿ 291 ಕೊರೋನ ಪಾಸಿಟಿವ್ ಎಂದು ಪ್ರಕಟಗೊಂಡ ಬೆನ್ನಲ್ಲೇ ತಾಲೂಕವಾರು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಹೀಗಿವೆ. ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ-158 ಭದ್ರಾವತಿಯಲ್ಲಿ-56 ಶಿಕಾರಿಪುರ-27, ತೀರ್ಥಹಳ್ಳಿ-06, ಹೊಸನಗರ-1, ಸಾಗರದಲ್ಲಿ-13 ಹಾಗೂ ಸೊರಬದಲ್ಲಿ 18 ಪ್ರಕರಣಗಳು ಪತ್ತೆಯಾಗಿದ್ದರೆ, ಇತರೆ ಜಿಲ್ಲೆಯಿಂದ ಬಂದು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 12 ಜನ ಎಂದು ಹೆಲ್ತ್ ಬುಟಿಲಿಟಿನ್ ಪ್ರಕಟಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!