ಶಿವಮೊಗ್ಗ, ಆ.20:
ಜಿಲ್ಲಾ ಕೊರೊನಾ ವರದಿಯಂತೂ ಸರಿಯಾಗಿ ಅರ್ಥವಾಗುತ್ತಿಲ್ಲ. ಕೊರೊನಾ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡುವ ಜಿಲ್ಲಾ ಹಾಗೂ ರಾಜ್ಯವರದಿಗಳು ಭಿನ್ನವಾಗಿ ಬರುತ್ತಲೇ ಇವೆ.
ಜಿಲ್ಲಾ ವರದಿ:
ಜಿಲ್ಲೆಯಲ್ಲಿಂದು 179 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5236ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಜಿಲ್ಲಾಡಳಿತ ಈಗಷ್ಟೆ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಮೂವರು ಸಾವನ್ನಪ್ಪಿದ್ದರೆ, ಒಟ್ಟು 84 ಜನ ಸಾವುಕಂಡಿದ್ದಾರೆ. ಈ ದಿನ 35 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೂ 2113 ಕಂಟೈನ್ಮೆಂಟ್ ಝೋನ್’ಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್’ಗಳ ಸಂಖ್ಯೆ 735 ಆಗಿದೆ. ಇಂದು ಒಟ್ಟು 1797 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 1082 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2167 ಆಗಿದೆ ಎಂದು ಬುಲೆಟಿನ್ ತಿಳಿಸಿದೆ.
ತಾಲೂಕುವಾರು ವಿವರ:
ಶಿವಮೊಗ್ಗ: 114
ಭದ್ರಾವತಿ: 31
ಶಿಕಾರಿಪುರ: 11
ತೀರ್ಥಹಳ್ಳಿ: 1
ಹೊಸನಗರ: 2
ಸೊರಬ: 7
ಸಾಗರ: 6
ಇತರೆ ಜಿಲ್ಲೆ: 7
ರಾಜ್ಯ ವರದಿ ನಿನ್ನೆ ಹೊರಬಂದಾಗ ಜಿಲ್ಲಾಧಿಕಾರಿಗಳೇ ಜಿಲ್ಲಾ ವರದಿ ಸರಿ ಎಂದು ಹೇಳಿಕೆ ನೀಡಬೇಕಾಯ್ತು. ಕೊರೊನಾ, ಅದರ ಸೊಂಕಿತರು, ಅವರ ಚಿಕಿತ್ಸೆ, ಅವರ ವರ್ಗಿಕರಣ, ಆಧಾರ್ ಲಿಂಕ್ ಎಲ್ಲಾ ಅನುಮಾನದ ಗೂಡೊಳಗೆ ಬಂಧಿಯಾಗಿದೆ.
