ಶಿವಮೊಗ್ಗ,ಆ.19:
ಶಿವಮೊಗ್ಗ ಮಹಾನಗರ ಪಾಲಿಕೆ ಇವತ್ಯಾಕೋ ಎದ್ದಿರುವಂತಿದೆ. ತುಂಬಾ ದಿನಗಳ ನಂತರ ತನ್ನ ಜಾಗ ಹುಡುಕಹತ್ತಿದೆ.ಅದೇ ಬಗೆಯಲ್ಲಿ ಪ್ಲಾಸ್ಟಿಕ್ ನಿಷೇಧವಿದೆ ಎಂದು ತೋರಿಸಲು ನೆಪಮಾತ್ರದ ದಾಳಿ ನಡೆಸಿದೆ.
ಪಾಲಿಕೆ ತನ್ನ ಹೆಸರಿನಲ್ಲಿರುವ ಜಾಗದಲ್ಲಿ ನಿರ್ಮಿಸಿರುವ ಗೂಡಂಗಡಿಗಳ ತೆರವು ಹಾಗೂ ಪ್ಲಾಸ್ಟಿಕ್ ದಾಳಿ ನಡೆಸಿದೆ.
ಇಲ್ಲಿನ ವಿನೋಬ ನಗರದ 60 ಅಡಿ ರಸ್ತೆಯಲ್ಲಿರುವ ಶುಭಮಂಗಳ ಕಲ್ಯಾಣ ಮಂಟಪದ ಬಳಿ ಇರುವ ಮೂರು ಗೂಡಂಗಡಿಗೆ ಮುಂದಾಗಿದ್ದು ಗೂಡಂಗಡಿ ತೆರವಿಗೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ.
ಪಾಲಿಕೆಯ ವಾರ್ಡ್ ನಂಬರ್ 34 (ಈಗ ಅದು ವಾರ್ಡ್ ನಂಬರ್ 18) ರಲ್ಲಿ ಪಾಲಿಕೆಯ ಖಾಲಿ ನಿವೇಶನ 1048, 1049 ಹಾಗೂ 1050 ರಲ್ಲಿ ನಿರ್ಮಿಸಿರುವ ಗೂಡಂಗಡಿಗಳನ್ನ ಪಾಲಿಕೆ ಇಂದು ಪೊಲೀಸ್ ರಕ್ಷಣೆಯಲ್ಲಿ ತೆರವು ಗೊಳಿಸಲು ಮುಂದಾಗಿದೆ.
ಅದರಂತೆ ಗಣಪತಿ ಹಬ್ಬ ಹತ್ತಿರದಲ್ಲಿರುವಾಗಲೇ ಪಾಲಿಕೆ ಹೂವಿನ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ತಳ್ಳುವ ಗಾಡಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದೆ. ಹಾಗೇ ಪ್ಲಾಸ್ಟಿಕ್ ನಿಷೇಧವಿದೆ ಎಂದು ನೆನಪಿಸಿದೆ.
ಸುಮಾರು 50 ಅಂಗಡಿಯ ಮೇಲೆ ದಾಳಿ ನಡೆಸಿದ ಪಾಲಿಕೆ ಅಧಿಕಾರಿಗಳು 30 ಕೆ.ಜಿ ಪ್ಲಾಸ್ಟಿಕ್ ಚೀಲಗಳನ್ನ ವಶಕ್ಕೆ ಪಡಿಸಿಕೊಂಡಿದೆ. ಆದರೆ ಪ್ಲಾಸ್ಟಿಕ್ ಬಳಕೆ ದಾರರಿಗೆ ಇನ್ನೂ ದಂಡ ವಿಧಿಸದೆ ಇರುವುದರಿಂದ ಇದು ಪುನರ್ಬಳಕೆ ಆಗುವ ಭಯವೂ ಇದೆ.
ಪ್ಲಾಸ್ಟಿಕ್ ಬಳಕೆ ನಿಷೇಧ ವಿದ್ದರೂ ಸಹ ಎಲ್ಲಾ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಗಳು ದೊರೆಯುತ್ತವೆ ಎಂದರೆ ಇದರ ಜಾಲವನ್ನು ಯಾರು ತಾನೇ ಮೆಟ್ಟಿನಿಲ್ಲಲು ಸಾಧ್ಯ.