ಪ್ರತಿಭಟನೆಗಿಳಿದ ರೈತರು

ಶಿವಮೊಗ್ಗ,ಮೇ.30:
ಜಿಲ್ಲೆಯ ಸಾಕಷ್ಟು ಹೆಣ್ಣು ಮಕ್ಕಳಿಗೆ ಕೆಲಸ ಕೊಟ್ಟಿರುವ ಶಾಹೀ ಗಾರ್ಮೆಂಟ್ಸ್ ನ ಕೆಲ ಅಧಿಕಾರಿಗಳ ಬೇಜವಬ್ದಾರಿತನಕ್ಕೆ ದುಮ್ಮಳ್ಳಿ ರೈತರು ಸಖತ್ ‘ಕಿಕ್’ ಕೊಟ್ಟಿರೋದೇಕೇ ಗೊತ್ತಾ?
ಸದ್ದು ಮಾಡದೇ ಅಲ್ಲಿ ಮೂವರು ಅಧಿಕಾರಿಗಳನ್ನು ದೇವಸ್ಥಾನದಲ್ಲಿ ಕುಳ್ಳಿರಿಸಿ ಸುತ್ತಲು ಸುತ್ತುವರೆದು ಮನುಜ ನಿರ್ಮಿತ ಬೇಲಿ ಹಾಕಿ ಬಂಧಿಸಿದ ಘಟನೆ ಈಗಷ್ಟೇ ನಡೆದಿದೆ. ತಪ್ಪು ಸರಿ ಮಾಡುವ ನಿಗಧಿತ ದಿನದ ಗಡುವಿನೊಂದಿಗೆ ರೈತರು ಅವರನ್ನು ಮರ್ವಾದೆಯಿಂದ ಕಳಿಸಿದ್ದಾರೆ.

ಏನ್ ತಪ್ಪು ಮಾಡಿದ್ರು ಗೊತ್ತಾ?

ಗಾರ್ಮೆಂಟ್ಸ್ ನ ಮೂವರು ಅಧಿಕಾರಿಗಳಿಗೆ ರೈತರು ದಿಗ್ಬಂಧನ ಹಾಕಿದ್ದಾರೆ. ಬೆಳಗ್ಗಿನಿಂದ ಎಲ್ಲೂ ಹೋಗಲು ಬಿಡದೆ ದುಮ್ಮಳ್ಳಿ ಗ್ರಾಮದ ಸೇವಾಲಾಲ್ ಮರಿಯಮ್ಮ ದೇವಸ್ಥಾನದಲ್ಲಿ ಕೂರಿಸಿದ್ದಾರೆ.
ಕಾರ್ಖಾನೆಯ ಹತ್ತಿರ ಇರುವ ಉಚ್ಚಂಗಿ ಕೆರೆಗೆ ಕಲುಷಿತ ನೀರನ್ನ ಬಿಡಲಾಗಿದ್ದು ಇದರಿಂದ ದುಮ್ಮಳ್ಳಿಯಲ್ಲಿ ಹರಿಯುವ ಭದ್ರಾ ಚಾನೆಲ್ ನಲ್ಲಿ ಕಲುಷಿತ ನೀರು ಹರಿದುಬಂದಿದೆ. ಈ ನೀರಿನಿಂದ ಜಾನುವಾರುಗಳು ಸತ್ತಿವೆ. ಅಲ್ಲದೆ ಚಾನೆಲ್ ನಲ್ಲಿ ಇಳಿದರೆ ಮೈಕೈ ಕಡಿತ ಆರಂಭವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.


ಗ್ರಾಮಸ್ಥರು ಶಾಹೀ ಗಾರ್ಮೆಂಟ್ಸ್ ನ ಪಿಆರ್ ಒ ಅಧಿಕಾರಿಗಳಾದ ಸಿದ್ದಲಿಂಗಪ್ಪರನ್ನ ಸ್ಥಳಕ್ಕೆ ಕರೆಯಿಸಿದ್ದಾರೆ. ನಂತರ ಅವರನ್ನ ಮುತ್ತಿಗೆ ಹಾಕಿ ಘೇರಾವ್ ಮಾಡಿದ್ದು, ನಂತರ ಫ್ಯಾಕ್ಟರಿಯ ಇಟಿಪಿ ಅಧಿಕಾರಿ ಸುನೀಲ್ ಜೋಷಿ, ಸಿವಿಲ್ ಇಂಜಿನಿಯರ್ ಶಿವುಕುಮಾರ್ ರನ್ನ ಕರೆಯಿಸಿದ್ದಾರೆ.
ಫ್ಯಾಕ್ಟರಿಯಲ್ಲಿನ ಇಟಿಪಿಯಿಂದ ಬಿಡುಗಡೆ ಮಾಡಿದ ನೀರು ಶೋಧಿಸದೆ ಕೆರೆಗೆ ನೀರು ಬಿಡಲಾಗುತ್ತಿದ್ದು ಗ್ರಾಮಗಳಿಗೆ ಚಾನೆಲ್ ಮೂಲಕ ಅದೇ ನೀರು ಹರಿದು ಬರುತ್ತಿದೆ. ಇದನ್ನ ಶನಿವಾರದೊಳಗೆ ಸರಿ ಮಾಡಿಸಿಕೊಡುವುದಾಗಿ ಪಿಆರ್ ಒ ಸಿದ್ದಲಿಂಗಪ್ಪ ತಿಳಿಸಿದ್ದು ನಂತರ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.
ಜೂ.2 ರಂದು ಇಟಿಪಿ ನಿಯಂತ್ರಿತ ಯಂತ್ರ ಹೊಸದನ್ನ ಅಳವಡಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.‌ ಸ್ಥಳಕ್ಕೆ ಮಾಲಿನ್ಯ ಅಧಿಕಾರಿಗಳು ಹರೀಶ್ ತುಂಗನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಪ್ರಸಾದ್ ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ.


ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಹಾಗೂ ಗ್ರಾಪಂ ಸದಸ್ಯ ಆನಂದ್‌ನಾಯ್ಕ, ಕಾಂಗ್ರೆಸ್ ನ ವಿಜಯಕುಮಾರ್,ಗ್ರಾಪ ಅಧ್ಯಕ್ಚ ಹೇಮೇಶ್ ನಾಯ್ಕ, ನೀರುಬಳಕೆದಾರರ ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!