ಶಿವಮೊಗ್ಗ, ಮೇ.20:
ಬಾರೀ ಮಳೆಯ ಹಿನ್ನೆಲೆಯಲ್ಲಿ ನಾನಾ ಅವಾಂತರಗಳಾಗಿವೆ. ಮನೆಯೊಳಗೂ ಬಿಡದೇ ಇಡೀ ನಗರದಲ್ಲಿ ಜಲ ನರ್ತನವಾಗಿದೆ. ಇದರ ನಡುವಿನ ಸಮಸ್ಸೆಗಳ ಜೊತೆ ಇಂದು ಮತ್ತು ನಾಳೆ ಶಿವಮೊಗ್ಗ ನಗರದ ಬಹಳಷ್ಟು ಭಾಗಗಳಲ್ಲಿ ಕುಡಿಯವ ನಲ್ಲಿ ನೀರಿನ ಸರಬರಾಜು ಕಷ್ಟವಾಗಿದೆ.
ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಹೊಳೆಯಲ್ಲಿ ಅಳವಡಿಸಿರುವ ಪಂಪ್ ಸೆಟ್ ಗಳನ್ನು ಮೇಲಕ್ಕೆತ್ತಲಾಗಿದೆ. ಆರ್.ಎಂ. 8 ಹಾಗೂ 9 ಕ್ಕೆ ಅಳವಡಿಸಿರುವ ಪರಿವರ್ತಕವು ದುರಸ್ತಿಯಲ್ಲಿರುವುದರಿಂದ ಹಾಗೂ ಎಲ್ ಟಿ ಎಸ್ ನಗರದಲ್ಲಿ ಪಂಪ್ ಗಳು ಮುಳುಗಡೆಯಾಗಿರುವುದರಿಂದ ಇಂತಹ ಸಮಸ್ಸೆಯಾಗಿದೆ.


ಇದರ ಜೊತೆಗೆ ಆರ್.ಎಂ.ಎಲ್. ನಗರದಲ್ಲಿ ಐದು ಕೊಳವೆ ಮಾರ್ಗ ಹಾಳಾಗಿರುವುದರಿಂದ ಈ ಕೆಳಕಂಡ ಸ್ಥಳಗಳಲ್ಲಿ ನೀರು ಬರೋದು ಕಷ್ಟ.
ನಗರದ ವಾದಿ ಎ. ಹುದಾ, ಊರುಗಡೂರು, ಸೂಳೆಬೈಲು, ಸಹ್ಯಾದ್ರಿ ನಗರ, ಗುಡ್ಡೇಕಲ್, ನವುಲೆ, ಡಿಡಿ ಅರಸು, ಬಸವೇಶ್ವರ ನಗರ, ಬೊಮ್ಮನಕಟ್ಟೆ, ಶಾಂತಿನಗರ, ಆರ.ಎಂ.ಎಲ್. ನಗರ, ತುಂಗಾನಗರ, ರವೀಂದ್ರ ನಗರ, ಜಿಲ್ಲಾ ಪಂಚಾಯತ್, ಮಿಳಘಟ್ಟ, ಬಸ್ ಸ್ಟಾಂಡ್, ಪಿಡಬ್ಲೂಡಿ ಕ್ವಾಟ್ರಸ್, ಸ್ಟೇಡುಯಂ ಟ್ಯಾಂಕ್, ಶಿವಮೂರ್ತಿ ಸರ್ಕಲ್ ನಲ್ಲಿರುವ ಜಲಸಂಗ್ರಹಗಾರಗಳಿಂದ ನೀರು ಸರಬರಾಜು ಮೇ 20 ರ ಇಂದು ಹಾಗೂ ಮೇ.21 ರ ನಾಳೆ ವ್ಯತ್ಯಯವಾಗುತ್ತದೆ ಎಂದು ಕನನೀಸ ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!