ಶಿವಮೊಗ್ಗ, ಮೇ.೧೯:
ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ ರಾಘವೇಂದ್ರರವರು ಕೇಂದ್ರ ನಾಗರಿಕ ವಿಮಾನ ಖಾತೆಯ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಇವರನ್ನು ಭೇಟಿ ಮಾಡಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೇಂದ್ರ ವಿಮಾನಯಾನ ತಂಡವನ್ನು ಭೇಟಿ ಮಾಡಲು ಕೋರಿದ್ದರ ಪರಿಣಾಮವಾಗಿ ಇಡೀ ತಂಡ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಕಾಮಗಾರಿಗೆ ಮೆಚ್ಚುಗೆ ಸೂಚಿಸಿತು.
ಸೊಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿ ಹಾಗೂ ಇನ್ನಿತರ ವಿಷಯವನ್ನು ತಿಳಿಯಲು ಕೇಂದ್ರ ಅಧಿಕಾರಿಗಳ ತಂಡವು ಸ್ಥಳಕ್ಕೆ ಆಗಮಿಸಿ, ಕಾಮಗಾರಿಯನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದರು.
ಅಧಿಕಾರಿಗಳಾದ ರವೀಂದ್ರನಾಥ್ ಏರ್ಪೋರ್ಟ್ ಅತಾರೀಟಿ ಆಫ್ ಇಂಡಿಯಾ, ಬಾಲಾಜಿ, ಫೇರೋಜ್, ದೊರೈ ರಾಜು, ಅಂಟೋನಿ, ವೆಂಕಟಾಚಲಂ ಅವರುಗಳಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಸೆಲ್ವಮಣಿ, ಚೀಫ್ ಇಂಜಿನಿಯರ್ ಕಾಂತರಾಜ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಪತ್, ಎಇಇ ಕಿರಣ್, ಟೆಕ್ನಿಕಲ್ ಸಲಹೆಗಾರರಾದ ಬ್ರಿಗೇಡಿಯರ್ ಪೂರ್ವಿಮಠ್ ಮತ್ತಿತರರು ಉಪಸ್ಥಿತರಿದ್ದು ಮಾಹಿತಿ ನೀಡಿದರು.