ಎಸ್.ಕೆ.ಗಜೇಂದ್ರಸ್ವಾಮಿ
, ಆ.16;
ಶಿವಮೊಗ್ಗ ಜಿಲ್ಲೆಯಾದ್ಯಂತ ಇಂದು ಧಾರಾಕಾರ ಮಳೆಯಾಗುತ್ತಿದ್ದು ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದೆ ಕಳೆದ ಎರಡು ದಿನಗಳಿಂದ ಒಂದಿಷ್ಟು ಬಿಡುವು ನೀಡಿದ್ದ ಮಳೆರಾಯ ನಿನ್ನೆ ರಾತ್ರಿ ಹಾಗೂ ಇಂದು ಬೆಳಿಗ್ಗೆಯಿಂದ ಮತ್ತದೇ ಧಾರಾಕಾರವಾಗಿ ಬರುತ್ತಿದೆ.
ಜಿಲ್ಲೆಯ ಹಳ್ಳಕೊಳ್ಳಗಳು ಮತ್ತೆ ತುಂಬಿ ತುಳುಕುತ್ತಿವೆ. ಜಿಲ್ಲೆಯಲ್ಲೇ ಅತ್ಯದಿಕ ಮಳೆ ಹೊಸನಗರ ತಾಲ್ಲೂಕಿನಲ್ಲಿ ಬಿದ್ದಿದ್ದು ಅಲ್ಲಿ 54.8 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕು ಎರಡನೇ ಸ್ಥಾನ ಹೊಂದಿದ್ದು ಅಲ್ಲಿ 22.2 ರಷ್ಟು ಮಳೆ ಬಿದ್ದಿದೆ. ಅಂತೆಯೇ ಶಿವಮೊಗ್ಗ ತಾಲೂಕಿನಲ್ಲಿ ಅದರಲ್ಲೂ ಶಿವಮೊಗ್ಗ ನಗರದಲ್ಲಿ ಈ ದಿನ ಬಾರಿ ಪ್ರಮಾಣದ ಮಳೆಯಾಗಿದ್ದು ಇಂದು ಮಧ್ಯಾಹ್ನ ದೊರತ ವರದಿ ಅನುಸಾರ ಇಂದು ಶಿವಮೊಗ್ಗ ತಾಲೂಕಿನಲ್ಲಿ 20.4 ಮಿಲಿಮೀಟರ್ ಮಳೆಯಾಗಿದೆ. ನಂತರದ ಸ್ಥಾನವನ್ನು ಸೊರಬ ಪಡೆದಿದ್ದು, ತಾಲೂಕಿನಲ್ಲಿ 14.2ರಷ್ಟು ಮಳೆಯಾಗಿದೆ. ಮಲೆನಾಡಿನ ಜೀವನಾಡಿ ಎಂದೇ ಕರೆಸಿಕೊಳ್ಳುವ ಸಾಗರ ತಾಲೂಕಿನಲ್ಲಿ ಇಂದೂ ಸಹ ಸಾಕಷ್ಟು ಮಳೆಯಾಗಿದ್ದು, ಅಲ್ಲಿ 13.2 ಮಿ.ಮೀ ಮಳೆಯಾಗಿದೆ ಉಳಿದಂತೆ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿಪುರದಲ್ಲಿ 7.4 ಮಿ.ಮೀ ಮಳೆಯಾಗಿದ್ದರೆ, ಭದ್ರಾವತಿ ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತಿ ಕಡಿಮೆ ಮಳೆ ಬಿದ್ದಿದ್ದು ಈ ದಿನ 3.8 ಮಿ. ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಶಿವಮೊಗ್ಗ ನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಿಂದಾಗಿ ಮತ್ತೆ ಸೊರಗಿದ್ದ ತುಂಗೆ ಮತ್ತೆ ಉಕ್ಕಿ ಹರಿಯುತ್ತಿದ್ದಾಳೆ.
ಜಲಾಶಯಗಳು ಸೊಗಸಿನ ಮಂತ್ರ ಪಠಿಸುತ್ತಿವೆ. ಶರಾವತಿ ನದಿಯ ಲಿಂಗನಮಕ್ಕಿ ಭದ್ರಾ ಜಲಾಶಯ ಹಾಗೂ ತುಂಗಾ ಅಣೆಕಟ್ಟೆಗಳು ತುಂಬುವ ಸನಿಹದಲ್ಲಿ ಕಂಗೊಳಿಸುತ್ತಿವೆ.
ಇಂದಿನ ಮಳೆ ಪ್ರಮಾಣ ಮಿಮಿಗಳಲ್ಲಿ ಇಂತಿದೆ.
Smg 20.4
Bdvt 3.8
Tth 22.2
Sgr 13.02
Srb 14.2
Skp 7.4
Hos 54.8
ಕಳೆದ ಆಗಸ್ಟ್ 1 ರಿಂದ 15 ರವರೆಗೆ ಜಿಲ್ಲಾಡಳಿತ ನೀಡಿರುವ ವರದಿಯಲ್ಲಿ ಮಳೆಯ ಪ್ರಮಾಣದ ಜೊತೆಗೆ ಶಿವಮೊಗ್ಗೆಯ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ವಿವರವನ್ನು ನೀಡಿದೆ.
ಈ ವಿವರಗಳನ್ನು ಗಮನಿಸಿದಾಗ ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದ ನೀರು ದಾಖಲಾಗಿದ್ದು, ಈ ಬಾರಿ ಬಿದ್ದ ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆ ಎಂದು ಹೇಳಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ ಸಾವಿರ 1819 ಅಡಿ ಗರಿಷ್ಠ ಅಳತೆಯಿದ್ದು ಕಳೆದ ವರ್ಷ ಆಗಸ್ಟ್ 15 ರ ಹೊತ್ತಿಗೆ 1813 ಅಡಿ ನೀರಿತ್ತು. ಪ್ರಸಕ್ತ ವರ್ಷ 1796.49 ಯಷ್ಟು ನೀರಿದೆ. ಇನ್ನು ಭದ್ರಾ ಜಲಾಶಯ 186 ಅಡಿ ಗರಿಷ್ಟ ಪ್ರಮಾಣವನ್ನು ಹೊಂದಿದ್ದರೆ ಕಳೆದ ವರ್ಷ ಆಗಸ್ಟ್ 15 ರ ಹೊತ್ತಿಗೆ ಈ ಜಲಾಶಯದಲ್ಲಿ 182.11 ಅಡಿ ನೀರಿತ್ತು. ಈ ವರ್ಷ ಆಗಸ್ಟ್ 15 ಹೊತ್ತಿಗೆ 177.60 ಅಡಿ ನೀರಿದೆ. ತುಂಗಾ ಜಲಾಶಯ ಎಂದಿನಂತೆ ಈ ಬಾರಿಯೂ ತುಂಬಿದೆ 588.24 ಅಡಿ ಎಷ್ಟು ನೀರಿನ ಪ್ರಮಾಣ ವಾಗಿದ್ದು ಕಳೆದ ವರ್ಷವೂ ಇಷ್ಟೇ ನೀರಿತ್ತು. ಇವತ್ತು ಇಲ್ಲಿಂದ 17986 ನೀರು ಒಳ ಬರುತ್ತಿದ್ದು ಅಷ್ಟೇ ನೀರು ಹೊರಬಿಡಲಾಗುತ್ತಿದೆ.
ಚಿತ್ರ: ವಿದ್ಯಾ