ಶಿವಮೊಗ್ಗ, ಮೇ.೧೬:
ಜಿಲ್ಲೆಯನ್ನು ಡೇಂಗ್ಯೂ ರೋಗ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವಲ್ಲಿ ಜಿಲ್ಲೆಯ ನಾಗರೀಕರು ಸಹಕಾರ ನೀಡುವುದರ ಜೊತೆಗೆ ಸಂಕಲ್ಪ ಮಾಡಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.


ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಡೇಂಗ್ಯೂ ದಿನಾಚರಣೆ ಅಂಗ ವಾಗಿ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಿಂದ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಸೊಳ್ಳೆಗಳಿಂದ ಡೇಂಗ್ಯೂ ಸೇರಿದಂತೆ ಇತರೆ ಅನೇಕ ಕಾಯಿಲೆಗಳು ಹರಡಬ ಹುದಾದ ಸಾಧ್ಯತೆ ಇದೆ. ಅವುಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸುವಂತೆ ಅವರು ಸೂಚಿಸಿದರು.


ಡೇಂಗ್ಯೂ ಗುಣಪಡಿಸಬಹುದಾದ ಕಾಯಿಲೆಯಾಗಿ ದ್ದರೂ, ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವು ದಕ್ಕಿಂತ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಪ್ರಮುಖವಾಗಿದೆ. ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಬಹು ಮುಖ್ಯ ಎಂದ ಅವರು, ಸೋಂಕು ಹರಡದಂತೆ ಇರಲು ಸೊಳ್ಳೆಗಳ ನಿಯಂತ್ರಣ ವೇ ಪರಿಹಾರದ ಪ್ರಥಮ ಕ್ರಿಯೆಯಾಗಿದೆ. ಇದರೊಂದಿಗೆ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕೆಂದವರು ನುಡಿದರು.


ಈ ಸಂದರ್ಭದಲ್ಲಿಮ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಪ್ರಪಂಚದಾದ್ಯಂತ ಪ್ರತಿವರ್ಷ ಸುಮಾರು ೪೦ಕೋಟಿ ಡೇಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಲ್ಲಿ ಶೇ.೮೦ರಷ್ಟು ಪ್ರಕರಣಗಳಲ್ಲಿ ಸೋಂಕಿತ ವ್ಯಕ್ತಿಯಲ್ಲಿ ಯಾವುದೇ ಗುಣಲಕ್ಷಣಗಳು ಗೋಚರಿಸದಿರುವುದು ಸವಾಲಾಗಿ ಪರಿಣಮಿಸಿದೆ ಎಂದರು.


ಸೊಳ್ಳೆ ನಿರೋಧಕಗಳು, ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಸ್ವಯಂ ರಕ್ಷಣಾ ವಿಧಾನಗಳನ್ನು ಕೈಗೊಳ್ಳಬೇಕು. ಇಲಾಖೆಯ ಸಿಬ್ಬಂಧಿಗಳು ಲಾರ್ವಾ ಸಮೀಕ್ಷೆಗೆ ಬಂದಲ್ಲಿ ಸಹಕರಿಸಬೇಕು. ಯಾವುದೇ ಜ್ವರ ಕಂಡುಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಂಡು ವೈದ್ಯಕೀಯ ಸಲಹೆ ಪಡೆಯುವುದು ಸೂಕ್ತವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಡಾ|| ಗುಡದಪ್ಪ ಕುಸಬಿ, ಡಾ|| ಚಂದ್ರಶೇಖರ ಜಿ.ಬಿ., ಶ್ರೀಮತಿ ಪ್ರತಿಮಾ ಡಾಕಪ್ಪ, ಡಾ|| ದಿನೇಶ್, ವಿಜಯಕುಮಾರ್ ಸೇರಿದಂತೆ ಸುಬ್ಬಯ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು, ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!