ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಮತ್ತು ಡಿಎಆರ್ನಲ್ಲಿ ಖಾಲಿ ಇದ್ದ ಒಟ್ಟೂ 11 ಎಎಸ್ಐ, 11 ಸಿಎಚ್ಸಿ ಮತ್ತು 2 ಎಆರ್ಎಸ್ಐ ಹುದ್ದೆಗೆ ಹಲವರಿಗೆ ಭಡ್ತಿ ನೀಡಿ ನೇಮಕ ಮಾಡಲಾಗಿದೆ.
ಮುಖ್ಯ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಿಂದ ಎಸ್ಐ ಹುದ್ದೆಗೆ ಭಡ್ತಿ ಹೊಂದಿದವರೆಂದರೆ ಆನವಟ್ಟಿಯ ಬಸವರಾಜ್ ಅದೇ ಠಾಣೆಗೆ, ಶಿಕಾರಿಪುರ ನಗರ ಠಾಣೆಯ ಯು ಸದಾಶಿವಪ್ಪ ತುಂಗಾನಗರಕ್ಕೆ, ಭದ್ರಾವತಿಯ ಹಳೆನಗರದಲ್ಲಿದ್ದ ನಾಗಪ್ಪ ದೊಡ್ಡಪೇಟೆಗೆ, ಪೇಪರ್ಟೌನ್ನಲ್ಲಿದ್ದ ರಂಗನಾಥ ಕೋಟೆ ಠಾಣೆಗೆ, ಶಿಕಾರಿಪುರ ಗ್ರಾಮಾಂತರದಲ್ಲಿದ್ದ ಪುಟ್ಟಯ್ಯ ಜಯನಗರ ಠಾಣೆಗೆ, ಕೋಟೆಯಲ್ಲಿದ್ದ ಕುಮಾರಪ್ಪ ಕೋಟೆ ಠಾಣೆಗೆ, ಕೋಟೆಯಲ್ಲಿದ್ದ ಜಗದೀಶ ಅವರು ಸಿಇಎನ್ ಬ್ರಾಂಚ್ಗೆ, ಎಂ. ದಿವಾಕರ್ ಹೊಳೆಹೊನ್ನೂರಿನಿಂದ ಭದ್ರಾವತಿ ಗ್ರಾಮಾಂತರಕ್ಕೆ, ಪೇಪರ್ಟೌನ್ನಲ್ಲಿದ್ದ ಮಂಜೇಶ್ ಮಾಳೂರಿಗೆ, ಹೊಸನಗರದಲ್ಲಿದ್ದ ಕೇಶವ ನಗರಠಾಣೆಗೆ ದೊಡ್ಡಪೇಟೆಯಲ್ಲಿದ್ದ ರತ್ನಾಕರ್ ಕಾರ್ಗಲ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.
ಕಾನ್ಸ್ಟೇಬಲ್ ಹುದ್ದೆಯಿಂದ ಮುಖ್ಯ ಕಾನ್ಸ್ಟೇಬಲ್ಗೆ ಭಡ್ತಿ ಮತ್ತು ವರ್ಗಾವಣೆಗೊಂಡವರೆಂದರೆ- ದೊಡ್ಡಪೇಟೆಯಲ್ಲಿದ್ದ ಆನಂದ್ ಹೊಳೆಹೊನ್ನೂರಿಗೆ, ಶಿರಾಳಕೊಪ್ಪದಲ್ಲಿದ್ದ ಜಿ. ಪ್ರಕಾಶ್ ಆನವಟ್ಟಿಗೆ, ಪಶ್ಚಿಮ ಟ್ರಾಫಿಕ್ನ ಜೆ. ರವಿ ಕೋಟೆ ಠಾಣೆಗೆ, ಬೆಂಗಳೂರಿನಲ್ಲಿದ್ದ ಎಂ.ದೀಪಿಕಾ ಪೇಪರ್ಟೌನಿಗೆ, ಮೆಸ್ಕಾಂನಲ್ಲಿದ್ದ ಆಂಜನೇಯ ಪಾಟೀಲ್ ಮೆಸ್ಕಾಂ ಜಾಗೃತಿದಳಕ್ಕೆ ವರ್ಗಾವಣೆಯಾಗಿದ್ದಾರೆ.
ಹೊಸನಗರದಲ್ಲಿದ್ದ ಆದರ್ಶ ಅದೇ ಠಾಣೆಗೆ, ಕಾರ್ಗಲ್ನಲ್ಲಿದ್ದ ಆರ್. ಅರುಣ್ ಪೇಪರ್ಟೌನ್ಗೆ, ಶಿರಾಳಕೊಪ್ಪದಲ್ಲಿದ್ದ ಆರ್. ಪ್ರವೀಣ್ ಅದೇ ಠಾಣಗೆ, ಶಿಕಾರಿಪುರ ನಗರದಲ್ಲಿದ್ದ ಬಸವರಾಜ ಬಲಮುರಿ ಶಿಕಾರಿಪುರ ಗ್ರಾಮಾಂತರಕ್ಕೆ, ನ್ಯೂಟೌನ್ನಲ್ಲಿದ್ದ ನವೀನ್ ಅದೇ ಠಾಣೆಗೆ, ನ್ಯೂಟೌನ್ನಲ್ಲಿದ್ದ ಜಿ. ಹಾಲಪ್ಪ ಹಳೆನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಎಎಚ್ಸಿ ಹುದ್ದೆಯಿಂದ ಎಆರ್ಎಸ್ಐಗೆ ಭಡ್ತಿ ಪಡೆದವರೆಂದರೆ- ಆನಂದಕುಮಾರ್ ಮತ್ತು ಬಿ. ರಾಘವೇಂದ್ರ, ಎಪಿಸಿ ಹುದ್ದೆಯಿಂದ ಎಎಚ್ಸಿ ಹುದ್ದೆಗೆ ಬಿ.ಎನ್ ಗಿರೀಶ್ ಮತ್ತು ಎಸ್. ಕರಿಬಸಪ್ಪ ಬಡ್ತಿ ಹೊಂದಿದ್ದಾರೆ.