Tungataranga, April,13, 2022 | KS Eshwrappa issue News
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ವಿರುದ್ದ ಮುಗಿಬಿದ್ದಿರುವ ಸಂತೋಷ್ ಕುಟುಂಬ, ರಾಜ್ಯವ್ಯಾಪಿ ಕಾಂಗ್ರೆಸ್, ಎಎಪಿ, ಗುತ್ತಿಗೆದಾರರ ಸಂಘ ಹಾಗೂ ಸಾಮಾಜಿಕ ಕಳಕಳಿಯ ಪ್ರಗತಿಪರರ ಹೋರಾಟ ಹಾಗೂ ಪ್ರತಿಭಟನೆಗೆ ಒಮ್ಮೆಯಷ್ಟೇ ನನಗವರು ಗೊತ್ತೇ ಇಲ್ಲ ಎಂದು ಹೇಳಿದ್ದ ಈಶ್ವರಪ್ಪ ಪರ, ವಿರುದ್ದದ ದ್ವನಿ ಬಿಜೆಪಿಯಿಂದ ಕೇಳಿ ಬರದಿರುವುದು ದುರಂತವೇ ಹೌದು. ಇನ್ನು ಸರ್ಕಾರ ತನಿಖೆ ನಡೆಯುತ್ತಿದೆ ಎಂದು ಸದ್ಯದ ಮಟ್ಟಿಗೆ ಕೈ ತೊಳೆದುಕೊಂಡಿದೆ.
ಈಶ್ವರಪ್ಪ ವಿರುದ್ದ ದೂರು ದಾಖಲಾಗಬೇಕು, ಅವರನ್ನು ಬಂಧಿಸಬೇಕೆಂಬ ಆಗ್ರಹ ಬಲವಾಗಿದ್ದರೆ, ಪೊಲೀಸರ ತನಿಖೆ ಸರ್ಕಾರದ ನಿಲುವನ್ನೇ ಪ್ರಶ್ನಿಸುತ್ತಿದೆ.
ನಲವತ್ತು ಪರ್ಸೆಂಟ್ ಕಮೀಷನ್ ಆರೋಪ ಬಂದಾಕ್ಷಣ ಸಮಗ್ರ ತನಿಖೆ ನಡೆದಿದ್ದರೆ ಅದೂ ಬಿಜೆಪಿಯ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಸಾವಿನ ಸುದ್ದಿ ಬರುತ್ತಿರಲಿಲ್ಲವೇನೋ? ಇಲ್ಲಿ ಮಾನನಷ್ಟ ಮೊಕದ್ದಮೆ ಸಂತೋಷ್ ಗೆ ಹೆದರಿಸಿತಾ?

ಈಶ್ವರಪ್ಪ Don’t Care, ಸರ್ಕಾರ ಮೌನ!
ಈಶ್ವರಪ್ಪ ವಿರುದ್ದ ಅದೆಷ್ಟೇ ರಾಜಕಾರಣ ನಡೆದರೂ ಅದಕ್ಕೆ ಈಶ್ವರಪ್ಪ Don’t Care ಎಂದಿದ್ದಾರೆ. ರಾಜಕಾರಣಕ್ಕಾಗಿ ರಾಜಕಾರಣ ಮಾಡದಿರಿ ಎಂದಿದ್ದಾರೆ. ಸರ್ಕಾರ ತನಿಖೆ ನೆಪದಲ್ಲಿ ಮೌನವಾಗಿದೆ. ಇನ್ನು ಈಶ್ವರಪ್ಪರ ಬೆಂಗಾವಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಜೆಪಿ ಮುಖಂಡರು ಈ ವಿಷಯದಿಂದ ನಾಪತ್ತೆಯಾಗಿದ್ದಾರೆ..!

ನಲವತ್ತು ಪರ್ಸೆಂಟ್ ಗುತ್ತಿಗೆದಾರ ಆತ್ಮಹತ್ಯೆ, Dont Care ಎಂದ ಸಚಿವ ಈಶ್ವರಪ್ಪ https://tungataranga.com/?p=10013


ಸಂತೋಷ್ ಪತ್ನಿ ಹೇಳುವ ಪ್ರಕಾರ ಇದೊಂದು ಕೊಲೆ ಪ್ರಕರಣ, ನನ್ನ ಗಂಡ ದೈರ್ಯವಂತ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ. ಅವರ ಸಾವಿಗೆ ಸಚಿವ ಈಶ್ವರಪ್ಪ ಕಾರಣ, ಅವರನ್ನು ಬಂಧಿಸಬೇಕು ಎಂದಿದ್ದಾರೆ.
ಅಂತೆಯೇ, ಸಂತೋಷ್ ಸಹೋದರ ಹಾಗೂ ಅಲ್ಲಿನ ಜಿಲ್ಲಾ ಗುತ್ತಿಗೆದಾರರ ಸಂಘ ಸಹ ಈಶ್ವರಪ್ಪ ವಿರುದ್ಧ ಹರಿಹಾಯ್ದಿದೆ.
ಕಾಂಗೈ ಮುಖಂಡರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದೆಲ್ಲೆಡೆ ಈಶ್ವರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಬಂಧನಕ್ಕೆ ಆಗ್ರಹಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಈಶ್ವರಪ್ಪ ವಿರುದ್ದ ತೀವ್ರವಾಗ್ಧಾಳಿ ನಡೆಸಿ ಪ್ರತಿಭಟನೆಗಿಳಿದಿದೆ.

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಸಚಿವ ಈಶ್ವರಪ್ಪ ಮನೆಗೆ ಮುತ್ತಿಗೆ – ಲಾಟಿ ಏಟಿಗೆ ಕಾರ್ಯಕರ್ತನಿಗೆ ಗಂಬೀರ ಗಾಯ

ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣವಾದ ಸಚಿವ ಕೆಎಸ್ ಈಶ್ವರಪ್ಪ ರವರ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಬೇಕು ಹಾಗೂ ಸಂಪುಟದಿಂದ ವಜಾ ಮಾಡಲು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಸಚಿವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ವೇಳೆ ಪೊಲೀಸರು ಯುವ ಕಾಂಗ್ರೆಸ್ 45ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದು , ಪ್ರತಿಭಟನೆ ವೇಳೆ ಪೊಲೀಸರ ಲಾಟಿ ಏಟಿಗೆ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್ ಶಾಮ್ ಗೆ ತೀವ್ರ ಗಾಯವಾಗಿದೆ.
ಈ ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಪಿ ಗಿರೀಶ್ , ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ , ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ , ಕೆಪಿಸಿಸಿಯ ಮುಖಂಡರುಗಳಾದ ಎಚ್.ಸಿ. ಯೋಗೇಶ್ , ದೇವೇಂದ್ರಪ್ಪ , ಮಹಾನಗರ ನಗರಪಾಲಿಕೆ ವಿರೋಧ ಪಕ್ಷ ನಾಯಕಿ ಯಮುನಾ ರಂಗೇಗೌಡ ,NSUI ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಾಜಿ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ , ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಂದ್ಲೆ, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್. ಕುಮರೇಶ್ , INTUC ಪಿ. ಅರ್ಜುನ್ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಪುಷ್ಪಕ್ ಕುಮಾರ್, ಕೆ. ಎಲ್ ಪವನ್, ರಾಹುಲ್, ಚಿನ್ಮಯ್, ಪುರಲೆ ಮಂಜು , ಪಕ್ಷದ ಮುಖಂಡರಾದ ಚಂದ್ರಪ್ಪ ಪುರಲೆ , ರಂಗೇಗೌಡ, ಹಾಗೂ ಯುವ ಕಾಂಗ್ರೆಸ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.

ಇಂದು ಬೃಹತ್ ಪ್ರತಿಭಟನೆ
ಜಿಲ್ಲಾ ಕಾಂಗ್ರೆಸ್ ಇಂದು ಈಶ್ವರಪ್ಪ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಜಿಲ್ಲಾಧ್ಯಕ್ಷ ಸುಂದರೇಶ್, ಮಾಜಿ ಶಾಸಕರಾಸ ಕೆಬಿ ಪ್ರಸನ್ನಕುಮಾರ್, ಆರ್ ಪ್ರಸನ್ನಕುಮಾರ್, ಹೆಚ್ ಎಂ ಚಂದ್ರಶೇಖರಪ್ಪ ಸೇರಿದಂತೆ ಹಲವರು ಈ ಪ್ರತಿಭಟನೆ ನೇತೃತ್ವ ವಹಿಸಲಿದ್ದಾರೆ.

ಈಶ್ವರಪ್ಪ ವಿರುದ್ದ ದೂರುದಾಖಲಿಸಿ ತನಿಖೆಗೆ ಎಂ. ಶ್ರೀಕಾಂತ್ ಆಗ್ರಹ

ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಜೆಡಿಎಸ್​ನ ಎಂ.ಶ್ರೀಕಾಂತ್​ರವರು ಈ ಸಂಬಂಧ ತಕ್ಷಣವೇ ಎಫ್​ಐಆರ್​ ದಾಖಲಾಗಬೇಕು. ನ್ಯಾಯಯುತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮೃತ ಪಟ್ಟವ್ಯಕ್ತಿಯೇ ಡೆತ್ ನೋಟ್ ಬರೆದಿರೋದ್ರಿಂದ ಮೊದಲು ಈಶ್ವರಪ್ಪನವರ ವಿರುದ್ಧ ಎಫ್ಐಆರ್ ದಾಖಲಾಗಬೇಕು. ಆನಂತರ ತನಿಖೆ ನ್ಯಾಯಯುತವಾಗಿ ನಡೆಯಬೇಕು ಹಾಗೂ ಸರ್ಕಾರ ಮೃತ ಸಂತೋಷ್​ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ರು.
ಇದೇ ವೇಳೆ ಕಮಿಷನ್​ ದಂಧೆಗೆ ಸರ್ಕಾರ ಕಡಿವಾಣ ಹಾಕಬೇಕು. ಬಿಜೆಪಿ ಸರ್ಕಾರದಲ್ಲಿ ಅವರಿಗೆ ಯಾರಿಗೆ ಬೇಕೋ ಅವರಿಗೆ ಕೆಲಸಗಳನ್ನ ಗುತ್ತಿಗೆ ನೀಡಲಾಗುತ್ತಿದೆ. ಇವರನ್ನ ನಂಬಿ, ಬಡ್ಡಿಗೆ ದುಡ್ಡು ತಂದು ಕೆಲಸ ಮಾಡುತ್ತಿದ್ದಾರೆ, ಅಲ್ಲದೆ ಕಮಿಷನ್ ನೀಡುತ್ತಿದ್ದಾರೆ. ಆದರೆ ಮಾಡಿದ ಕೆಲಸದ ಬಿಲ್​ಗಳೇ ಸಾಕ್ಷ್ಯನ್​ ಆಗೋದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇನ್ನಷ್ಟು ಅಮಾಯಕರು ಬಲಿಯಾಗೋದನ್ನತಪ್ಪಿಸುವ ಕೆಲಸ ಮೊದಲು ಆಗಬೇಕಿದೆ.
ಇದೀಗ ಸಂತೋಷ್​ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಕುಟುಂಬಕ್ಕೆ ಇನ್ಯಾರು ದಿಕ್ಕು ಎಂದು ಪ್ರಶ್ನಿಸಿದ ಎಂ.ಶ್ರೀಕಾಂತ್​, ಸರ್ಕಾರ ಘಟನೆ ಸಂಬಂಧ ನ್ಯಾಯಯುತವಾದ ತನಿಖೆ ನಡೆಸಬೇಕು ಹಾಗೂ ಕಮಿಷನ್​ ದಂಧೆಗೆ ಕಡಿವಾಣ ಹಾಕಲೇಬೇಕು ಎಂದು ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!