Tunga Taranga News, April,12, 2022 | crime issue Udupi
ಇತ್ತೀಚೆಗಷ್ಟೇ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ದ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದ, ಅದಕ್ಕಾಗಿ ಮಾನನಷ್ಟ ಮೊಕದ್ದಮೆ ನೋಟೀಸ್ ಪಡೆದಿದ್ದ ಬೆಳಗಾಂ ಗುತ್ತಿಗೆಗಾರ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನನ್ನ ಸಾವಿಗೆ ಕೆ. ಎಸ್. ಈಶ್ವರಪ್ಪ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಈ ಬಿಜೆಪಿ ಮುಖಂಡ ಕಂ ಗುತ್ತಿಗೆದಾರ ಸಂತೋಷ ಪಾಟೀಲ್ ಆರೋಪ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದು ಕಾಂಗ್ರೆಸ್ ಈಶ್ವರಪ್ಪ ಅವರನ್ಬು ಸಂಪುಟದಿಂದ ವಜಾ ಮಾಡಬೇಕು, ಅವರನ್ಬು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ನನಗೆ ಸಂತೋಷ್ ಅಂದರೆ ಯಾರು ಅಂತ ಗೊತ್ತೆ ಇಲ್ಲ. ನನ್ನತ್ರ ಅವ ಬಂದೇ ಇಲ್ಲ.

  • ಕೆಎಸ್ ಈ ತಿರುಗೇಟು


ವಿವರ ನೋಡಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40% ಕಮಿಷನ್ ಆರೋಪ ಮಾಡಿ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ರವರು ಉಡುಪಿಯ ಶಾಂಭವಿ ವಸತಿಗೃಹ ದಲ್ಲಿ ನೇಣಿಗೆ ಶರಣಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸಾವಿಗೆ ಗ್ರಾಮೀಣಾಭಿರುದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆ. ಎಸ್. ಈಶ್ವರಪ್ಪ ಕಾರಣ. ಈ ಸಚಿವರಿಗೆ ಶಿಕ್ಷೆಯಾಗಬೇಕು, ನನ್ನೆಲ್ಲಾ ಅಸೆ ಬದಿಗೊತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು ಹಾಗೂ ಬಿ. ಎಸ್. ಯಡಿಯೂರಪ್ಪ ಸಹಾಯ ಮಾಡಬೇಕು ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಸಂದೇಶ ವಿಚಾರ ತಿಳಿದ ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿರುವುದಾಗಿ ಅಲ್ಲದೇ ಸಂತೋಷ ಪಾಟೀಲ್ ಕಳೆದ ಎರಡು ವಾರಗಳಿಂದ ಮನೆಯತ್ತ ಹೋಗಿದ್ದಿಲ್ಲ ಎನ್ನುವುದು ತಿಳಿದುಬಂದಿದೆ. ಹೀಗಾಗಿ ಪೊಲೀಸರು ಸಂತೋಷ ಪಾಟೀಲ್ ಫೋನ್ ಟ್ರೇಸ್ ಔಟ್ ಮಾಡಿದಾಗ ಉಡುಪಿಯಲ್ಲಿ ಲೊಕೇಶನ್ ತೋರಿಸುತ್ತದೆ ಎನ್ನಲಾಗುತ್ತಿದೆ.
ಅಂತಿಮವಾಗಿ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರರಾದ ಸಂತೋಷ ಪಾಟೀಲ್ ರವರು ಉಡುಪಿಯ ಶಾಂಭವಿ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಪೊಲೀಸ್ ಇಲಾಖೆ ತನಿಖೆ ಚುರುಕು ಗೊಂಡಿದೆ.

ಈಶ್ವರಪ್ಪ ಸ್ಪಷ್ಟನೆ
ಈಶ್ವರಪ್ಪ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನನ್ನ ವಿರುದ್ದ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಟಿವಿ 18 ಹಾಗೂ ಸಂತೋಷ್ ವಿರುದ್ದ ದೂರು ದಾಖಲಿಸಿದ್ದೆ. ಅವರಿಗೆ ನೋಟೀಸ್ ಹೋಗಿದೆ. ಮಿಕ್ಕ ಯಾವ ವಿಚಾರವೂ ನನಗೆ ಗೊತ್ತಿಲ್ಲ ಎಂದರು.

ಸೂಕ್ತ ತನಿಖೆ: ಸಿಎಂ
ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಸೂಕ್ತ ತನಿಖೆ ನಡೆಸಲು ಸಿದ್ದ. ಯಾವುದೇ ಹಸ್ತಕ್ಷೇಪ ನಡೆಯುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!