ಶಿವಮೊಗ್ಗ: ಕಲ್ಲಹಳ್ಳಿಯ ಶ್ರೀ ಅಭಿಷ್ಟವರದ ಮಹಾಗಣಪತಿ ದೇವಾಲಯದ ಹೊರ ಆವರಣದಲ್ಲಿ ಡಿ. 26 ರಿಂದ ಜ. 2 ರ ವರೆಗೆ ಶ್ರೀಮದ್ ಭಾಗವತ್ ಕಥಾ ವಾಚನ ಪ್ರವಚನ ಹಾಗೂ ಜ್ಞಾನ ಮಹಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿಯ ಕೆ.ಜಿ. ಕೃಷ್ಣಾನಂದ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ ಸಂತ ಚೋಟೆ ಬಾಪೂಜಿ ಅವರು ಪ್ರವಚನವನ್ನು ನಡೆಸಿಕೊಡಲಿದ್ದಾರೆ. ಪ್ರತಿದಿನ ಸಂಜೆ 5 ರಿಂದ 8.30 ರವರೆಗೆ ಪ್ರವಚನ ನಡೆಯಲಿದೆ. ಅವರು ಹಿಂದಿಯಲ್ಲಿ ಪ್ರವಚನ ನೀಡಲಿದ್ದು, ಕನ್ನಡದಲ್ಲಿ ಅನುವಾದಿಸಲಾಗುತ್ತದೆ. ಹಾಗೆಯೇ ಪ್ರತಿದಿನ ಬೆಳಗ್ಗೆ 9 ಗಂಟೆಗೆ ಮಹಾಯಾಗ ನಡೆಯಲಿದೆ ಎಂದರು.

ಡಿ. 26 ರಂದು ಬೆಳಗ್ಗೆ 9 ಗಂಟೆಗೆ ಕಳಸ ಯಾತ್ರೆಯೊಂದಿಗೆ ಮಹಾರಾಜರನ್ನು ಬರಮಾಡಿಕೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಡಿ. 26 ರಂದು ಬೆಳಗ್ಗೆ 9 ಗಂಟೆಗೆ ಕಳಸ ಯಾತ್ರೆಯೊಂದಿಗೆ ಮಹಾರಾಜರನ್ನು ಬರಮಾಡಿಕೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಚೋಟೆ ಬಾಪೂಜಿ(ರಮಾನಂದ ಶರ್ಪಾ) ಅವರು ಆಧ್ಯಾತ್ಮಿಕ ಜಗತ್ತನ್ನೇ ಬೆರಗುಗೊಳಿಸುವಂತೆ ಪ್ರವಚನ ನೀಡುತ್ತಾರೆ. ಅವರ ಧ್ವನಿ ಹೃದಯವನ್ನು ಶಾಂತಗೊಳಿಸುತ್ತದೆ. ಒಳ್ಳೆಯ ಭಾಷಣಕಾರರೂ ಹೌದು. ಇಂತಹ ಅಪರೂಪದ ಬಾಪೂಜಿ ಅವರು ಧರ್ಮ ಪ್ರಚಾರಕ್ಕಾಗಿ ಸತ್ಸಂಗವನ್ನು ನೀಡುತ್ತಾ ನಿರಂತರ ತಿರುಗಾಟ ನಡೆಸುತ್ತಿದ್ದಾರೆ. ಅವರ ಪ್ರವಚನ ಕೇಳಿಸಿಕೊಳ್ಳುವುದೇ ಒಂದು ಪುಣ್ಯದ ಕೆಲಸವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರವೀಣ್ ಸಿಂಗ್, ಬಿಂದುಕುಮಾರ್, ನವೀನ್ ಸಿಂಗ್, ಭಾಸ್ಕರ್, ನಿರಂಜನ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!