ಸುದ್ದಿ ವಾಹಿನಿಗಳ ಚಿತ್ರಗಳನ್ನು ನೀಡಲಾಗಿದೆ.
ಶಿವಮೊಗ್ಗ, ಡಿ.೦೩:
ಮದುವೆಯಾಗುವುದಾಗಿ ಹಾಗೂ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಯುವತಿಯೋರ್ವರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಶಿವಮೊಗ್ಗ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಮೇಲೆ ದೂರು ದಾಖಲಾಗಿರುವ ಸುದ್ದಿ ಇಂದು ರಾಜ್ಯದೆಲ್ಲೆಡೆ ಹೊಸ ತಿರುವು ಪಡೆದು ಹರಡುತ್ತಿದೆ.
ಹಾಲಿ ಶಿವಮೊಗ್ಗ ಅರಣ್ಯ ಇಲಾಖೆಯ ಸಿಸಿಎಫ್ (ಚೀಪ್ಕನ್ಸ್ಜವೇಟರ್ ಫಾರೆಸ್ಟ್) ಆಗಿರುವ ಐಎಫ್ಎಸ್ ಅಧಿಕಾರಿ ಅವರ ವಿರುದ್ಧ ಯುವತಿಯೋರ್ವರು ದೆಹಲಿಯಲ್ಲಿ ದೂರು ನೀಡಿರುವುದಾಗಿ ಸುದ್ದಿವಾಹಿನಿಗಳು ಹಾಗೂ ಇತರ ಸಾಮಾಜಿಕ ಜಾಲತಾಣಗಳು ಮಾಹಿತಿ ನೀಡುತ್ತಿವೆ.
ಕಳೆದ ಒಂದೂವರೆ ವರ್ಷದ ಹಿಂದಿನ ದೂರಿಗೆ ಇಂದು ಜೀವ ಕಳೆಬಂದಿರುವುದಾದರೂ ಹೇಗೆ ಎಂದು ಪ್ರಶ್ನಿಸಿರುವ ಸುದ್ದಿಮಾದ್ಯಮಗಳು ಈ ಹಿರಿಯ ಅಧಿಕಾರಿಯ ಲೈಂಗಿಕ ದೌರ್ಜನ್ಯದ, ಶ್ರೀರಾಮನ ಮೇಲೆ ಆಣೆ ಮಾಡಿ ವಂಚಿಸಿರುವ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆ ಕೇಳುತ್ತಿದ್ದಾರೆ.
ಈ ಅಧಿಕಾರಿಯ ವಿರುದ್ಧ ದೂರು ದಾಖಲಾಗಿದ್ದು, ಅಧಿಕಾರಿಯ ವಿರುದ್ಧ ಕ್ರಮಕೈಗೊಂಡಿದ್ದೀರಾ ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸುತ್ತಿವೆ. ಯುವತಿ ನೀಡಿದ ದೂರಿನಲ್ಲಿ ೨೦೧೮ರಿಂದ ೨೦೨೦ರವರೆಗೆ ದೈಹಿಕವಾಗಿ ನನ್ನನ್ನು ಬಳಸಿಕೊಂಡು ವಂಚಿಸಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ದಾಖಲಾಗಿತ್ತೆನ್ನಲಾದ ಈ ದೂರು ಈಗ ದಾರವಾಢದ ಚಾಲುಕ್ಯಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಹಳೆಯ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಈ ಮೊದಲು ಈ ಪ್ರಕರಣವನ್ನು ಹನಿಟ್ರಾಪ್ ಪ್ರಕರಣವೆಂದು ಹೇಳಲಾಗುತ್ತಿತ್ತು. ಯುವತಿಯ ಮೇಲೆ ಹತ್ತಾರು ಆರೋಪದ ಮಾತುಗಳು ಕೇಳಿ ಬಂದಿದ್ದವು. ೨೦೧೯ರ ಮೇ.೦೬ರಂದು ಲೋಹಿತ್ ಎಂಬುವವರು ಈ ಯುವತಿಯ ವಿರುದ್ಧ ಹನಿಟ್ರಾಪ್ ಪ್ರಕರಣದ ದೂರು ದಾಖಲಿಸಿದ್ದರು. ನಿನ್ನೆಯ ತಿರುವಿನಲ್ಲಿ ಈಗ ಚಾಲುಕ್ಯಪುರ ಪೊಲೀಸರು ವರುಷದ ಹಿಂದಿನ ಅತ್ಯಚಾರ ಪ್ರಕರಣದ ಬಂಗಲೆಯ ಬೆಡ್ರೂಂನಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಮೂಲದ ಈ ಅಧಿಕಾರಿ ಪ್ರಸ್ತುತ ಕಛೇರಿಯಲ್ಲಿ ಇರುವಂತಿಲ್ಲ. ಕಛೇರಿಯ ೦೮೧೮೨ ೨೪೦೩೮೫ನಂಬರ್ಗೆ ದೂರವಾಣಿ ಕರೆ ಮಾಡಿದರೆ ಫೋನ್ ರಿಸಿವ್ ಮಾಡಿ ಕಟ್ ಮಾಡುವ ಕಾಯಕ ಮಾಡುತ್ತಿದ್ದಾರೆ. ಈ ಅಧಿಕಾರಿ ವಿರುದ್ಧ ಮಾತನಾಡುವಂತೆಯೆ ಇಲ್ಲವೆ..? ಮಾದ್ಯಮಗಳ ಸುದ್ದಿಯ ಎಳಸುಗಳಿಗೆ ಸಮರ್ಪಕ ಮಾಹಿತಿಯನ್ನು ನೀಡುವುದಾದರೂ ಯಾರು..?
ನಾಳೆ ನಡೆಯಲಿರುವ ಅರಣ್ಯ ಇಲಾಖೆಯ ಗಾಡ್ಸ್ಗಳ ಆಯ್ಕೆ ಪರೀಕ್ಷೆ ಬಗ್ಗೆ ತಯಾರಿ ನಡೆಸುವ ಹೊತ್ತಿನಲ್ಲಿ ಇಡಿ ಇಲಾಖೆಗೆ ಕಪ್ಪು ಚುಕ್ಕೆಯಂತೆ ಅಧಿಕಾರಿಯ ದುರ್ವತನೆ ಸಾರ್ವನಿಕವಾಗಿ ಅಕ್ರೋಶಕ್ಕೆ ಒಳಗಾಗಿದೆ.