ಶಿವಮೊಗ್ಗ, ಡಿ.04:
ರೈಲ್ವೇ ಓವರ್ ಬ್ರಿಡ್ಜ್ ನಿರ್ಮಿಸುವ ಕಾಮಗಾರಿಯನ್ನು ಯಾವುದೇ ಸೂಚನೆ ನೀಡದೇ ರಸ್ತೆಯಲ್ಲಿ ಭಾರೀ ಗುಂಡಿ ತೆಗೆದುದರ ಪರಿಣಾಮ ಇಂದು ಸವಳಂಗ ರಸ್ತೆ ಸಂಪೂರ್ಣ ಬ್ಲಾಕ್ ಆಗಿದ್ದು ನೂರಾರು ವಾಹನಗಳು ರಸ್ತೆಯಲ್ಲೇ ನಿಂತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸವಳಂಗ ರಸ್ತೆಯ ರೈಲ್ವೇ ಹಳಿಯಿಂದ ಇಂಜಿನಿಯರಿಂಗ್ ಕಾಲೇಜಿನವರೆಗೆ ವಾಹನಗಳು ನಿಂತಿದ್ದರೂ, ಟ್ರಾಪಿಕ್ ಪೊಲೀಸರನ್ನು ಬಿಟ್ಟು ಬೇರ್ಯಾರು ಸ್ಥಳಕ್ಕೆ ಆಗಮಿಸಿ ಪರಿಹಾರ ಮಾರ್ಗ ಹುಡುತ್ತಿಲ್ಲ.
ಕಾಮಗಾರಿ ನೆಪದಲ್ಲಿ ತಗೆದ ಗುಂಡಿಯಿಂದ ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಶಿಕ್ಷಕರು, ಡ್ಯೂಟಿಗೆ ಬರುವ ಅಧಿಕಾರಿಗಳು, ನೌಕರರು, ರೈತರು ನೂರಾರು ವಾಹನಗಳಲ್ಲಿ ಕುಳಿತು ಶಪಿಸುತ್ತಿದ್ದಾರೆ.


ಅನ್ಯ ರಸ್ತೆಯ ವ್ಯವಸ್ಥೆ ಮಾಡದೇ ಏಕಾಏಕೀ ಸವಳಂಗ ಮಾರ್ಗದ ರಸ್ತೆ ಬಂದ್ ಮಾಡಿದರೆ ಯಾವ ಮಾರ್ಗದಲ್ಲಿ ಹೋಗಬೇಕು. ಜಿಲ್ಕಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಈಗಲಾದರೂ ಗಮನಿಸುವರಾ?

By admin

ನಿಮ್ಮದೊಂದು ಉತ್ತರ

error: Content is protected !!