Hosanagara Maralu

ಶಿವಮೊಗ್ಗ: ಅಕ್ರಮ ಮರಳು ಶೇಖರಣೆ ಸ್ಥಳಕ್ಕೆ ಹೊಸನಗರದ ತಹಶೀಲ್ದಾರ್ ರಾಜೀವ್ ನೇತೃತ್ವದ ತಂಡ ಇಂದು ಬೇಟಿ ನೀಡಿ ಪರಿಶೀಲಿಸಿ ಮರಳು ಶೇಖರಣೆ ಮಾಡಿರುವುದು ದೃಡವಾಗಿದ್ದು, ಶಿವಮೊಗ್ಗ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ನೋಟಿಸ್ ನೀಡಿ ಪೋಲೀಸ್ ಇಲಾಖೆಯವರಿಗೆ ರಕ್ಷಣೆ ನೀಡಬೇಕೆಂದು ಪತ್ರ ಬರೆದಿದ್ದಾರೆ.
ಹೊಸನಗರ ತಾಲ್ಲೂಕಿನಲ್ಲಿ ಮರಳು ಕ್ವಾರೆಯಲ್ಲಿ ಅಕ್ರಮವಾಗಿ ಸುಮಾರು ೫೦೦ ಲೋಡ್ ಮರಳು ಆಕ್ರಮವಾಗಿ ಶೇಖರಣೆ ಮಾಡಲಾಗಿದೆ ಎಂದು ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎರಡು ದಿನಗಳ ಹಿಂದೆ ಮರಳು ಶೇಖರಣೆ ಮಾಡಿದ ಸ್ಥಳದಲ್ಲಿ ಪ್ರತಿಭಟನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶಿರಾಸ್ಥೆದಾರ್ ಸುಧೀಂದ್ರಕುಮಾರ್, ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಆರ್.ಐ ವೆಂಕಟೇಶ್ ಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ನವೀನ್, ಕೌಶಿಕ್, ಗಣೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಅಕ್ರಮ ಮರಳುಗಾರಿಕೆಯ ವಿರುದ್ಧ ಕ್ರಮ: ಹೊಸನಗರ ತಾಲ್ಲೂಕಿನಲ್ಲಿ ಮಳೆಗಾಲ ಪ್ರರಂಭವಾಗಿದ್ದು, ಕ್ವಾರೆಗಳಿಂದ ರಸ್ತೆ ಬದಿಗಳಿಗೆ ಮರಗಳ ಕೆಳಗೆ ಎಂಪಿಎಂ ಪ್ಲಾಂಟೀಶನ್‌ಗಳಲ್ಲಿ ಹಾಗೂ ಕಾಡು ಮರ ಬೆಳೆದ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡಿರುವ ಬಗ್ಗೆ ದೂರು ನೀಡಿದ್ದಲ್ಲಿ ಮರಳನ್ನು ತಾಲ್ಲೂಕು ಆಡಳಿತ ವಶಕ್ಕೆ ಪಡೆದು ಶೇಖರಣೆ ಮಾಡಿರುವವರ ವಿರುದ್ಧ ಕೇಸು ಹಾಕಲಾಗುವುದು ಎಂದು ತಹಶೀಲ್ದಾರ್ ರಾಜೀವ್ ತಿಳಿಸಿದ್ದು ಸಾರ್ವಜನಕರು ಶೇಖರಣೆ ಮಾಡಿರುವುದು ಕಂಡು ಬಂದಲ್ಲಿ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!