ಶಿವಮೊಗ್ಗ: ಆಶ್ರಯ ಮನೆಗಳ ಫಲಾನುಭವಿಗಳ ಸಮಸ್ಯೆ ಪರಿಹಾರಕ್ಕೆ ನಗರಕ್ಕೆ ಬರುವಂತೆ ವಸತಿ ಸಚಿವ ಜಮೀರ್ ಅಹಮ್ಮದ್ ಅವರಿಗೆ ನಾಲ್ಕು ಬಾರಿ ಆಹ್ವಾನ ನೀಡಲಾಗಿತ್ತು. ಆದರೆ ಬಂದಿಲ್ಲ.

ಈಗ ವಕ್ಫ್ ಭೂಮಿ ಸಂಬಂಧವಾಗಿ ಅವರನ್ನು ನಗರಕ್ಕೆ ಕರೆ ತರುತ್ತೇವೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ಅರ್ಥವಿಲ್ಲದ್ದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ಬಂದರೆ ಜಮೀರ್ ಅವರಿಗೆ ಹೊಡೆಯವುದಾಗಿ ಎಲ್ಲಿಯೂ ಹೇಳಿಲ್ಲ. ಬದಲಾಗಿ ರಾಜ್ಯದಾದ್ಯಂತ ದೇವಸ್ಥಾನ, ಮಠ, ಮಂದಿರ, ಸರ್ಕಾರಿ ಜಮೀನು, ಸ್ಮಶಾನ ಭೂಮಿಯನ್ನು ವಕ್ಫ್ ಗೆ ಸೇರಿಸುತ್ತಾ ಹೋದರೆ ಜಮೀರ್

ಅಹಮ್ಮದ್ ರಾಜ್ಯದಲ್ಲಿ ಓಡಾಟ ಮಾಡುವುದು ಕಷ್ಟವಾಗುತ್ತದೆ ಎಂದು ಹೇಳಿರುವುದಾಗಿ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

ಪ್ರಕೃತಿ ಸಹಜವಾಗಿರುವ ಝರಿ ನೀರಿನ ಬಳಸುವವರಿಗೆ ಶೇ.3 ರಷ್ಟು ಹಸಿರು ಸೆಸ್ ಹಾಕುವುದಾಗಿ ಹೇಳಿರುವ ಅರಣ್ಯ ಸಚಿವರ ಹೇಳಿಕೆ

ಹೊಣೆಗೇಡಿತನದಿಂದ ಕೂಡಿದೆ. ಆದಾಯವಿಲ್ಲ ಎಂಬ ಕಾರಣಕ್ಕೆ ಈ ರೀತಿ ಸೆಸ್ ಹಾಕುವುದಕ್ಕಿಂತ ಶಬರಿ ಮಲೈನಂತಹ ದೊಡ್ಡ ದೇವಸ್ಥಾನಗಳ ಮುಂದೆ ಕುಳಿತು ಭಿಕ್ಷೆ ಬೇಡುವುದು ಒಳ್ಳೆಯದೆಂದು ಸರ್ಕಾರದ ವಿರುದ್ಧ ಹರಿಹಾಯ್ದರು. 

By admin

ನಿಮ್ಮದೊಂದು ಉತ್ತರ

You missed

error: Content is protected !!