ಶಿಕಾರಿಪುರ ಪಟ್ಟಣದ ಶಾಲೆ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಗೆ(ಸಿದ್ಧಲಿಂಗೇಶ್ವರ) ಬಂತು ಸ್ಮಾರ್ಟ್ ಬೋರ್ಡ್, ಸಿಸಿಟಿವಿ  ,ವಿದ್ಯಾರ್ಥಿಗಳಿಗೆ ಲೋಟ ತಟ್ಟೆ, ಸ್ಮಾರ್ಟ್ ಟಿವಿ, ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಅವಶ್ಯಕವಾಗಿರುವ ಪರಿಕರಗಳನ್ನು ಒದಗಿಸಿ ಸರ್ಕಾರಿ ಶಾಲೆಯೂ ಖಾಸಗಿ ಶಾಲೆಗಳಿಗಿಂತ ಕಡಿಮೆ‌ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆ.

Cಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಪೇಟ್ಟೆ(ಸಿದ್ಧಲಿಂಗೇಶ್ವರ) ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ತಟ್ಟೆ ಮತ್ತು ಲೋಟಗಳನ್ನು ವಿತರಿಸಿ ಮಕ್ಕಳೊಂದಿಗೆ ಊಟ ಎನ್ನುವ ಕಾರ್ಯಕ್ರಮ ನಡೆಸಲಾಯಿತು.

ಸರ್ಕಾರಿ ಶಾಲೆಗಳಲ್ಲಿ ಓದಿ ಸರ್ಕಾರ ದಿಂದ ಬರುವ ಎಲ್ಲಾ ಸೌಲಭ್ಯ ಪಡೆದುಕೊಂಡರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸುವ ಈ ಕಾಲದಲ್ಲಿ ಸರ್ಕಾರಿ ಶಾಲೆಯನ್ನು ಉನ್ನತಿಕರಣ ಮಾಡಬೇಕು ಎಂದು ಒಂದಿಷ್ಟು ಸಮಾನ ಮನಸಿನ ತಂಡ ಪಕ್ಷಾತೀತವಾಗಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸೇವಾ ಕೈಂಕಾಲದಲ್ಲಿ ಮುಂದಾಗಿದೆ.

ಪ್ರಾಥಮಿಕ ಶಾಲಾ‌ ಮತ್ತು ಪ್ರೌಢ ಶಾಲಾ ಶಿಕ್ಷ‌ಣ ಇಲಾಖೆ ಸಚಿವರಾದ ಮಧು ಬಂಗಾರಪ್ಪ ರಾಜ್ಯಾದ್ಯಂತ ನಮ್ಮ‌ ಶಾಲೆ ನಮ್ಮ ಜವಾಬ್ದಾರಿ ಎನ್ನುವ ಶೀರ್ಷಿಕೆ ಅಡಿಯಲ್ಲಿ ಪ್ರತಿಯೊಬ್ಬರು ತಾವು ಓದಿದ ಶಾಲೆಗಳಿಗೆ ತಮ್ಮ ಕೈಯಲಿ ಆಗುವ ಸಹಕಾರ ನೀಡಿ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯಾಗಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆ ದೇಣಿಗೆ‌‌ ನೀಡಿ ಶಾಲೆಗಳ‌ ಅಭಿವೃದ್ಧಿಗಾಗಿ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದು ಅದಕ್ಕೂ ಮೊದಲೇ ಶಿಕಾರಿಪುರ 100 ಕ್ಕೂ ಹೆಚ್ಚು ಸದೃದಯಿ ದಾನಿಗಳು ರೂ.2.27 ಲಕ್ಷ ನಿಧಿ ಸಂಗ್ರಹಿಸಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿಸಿ ಉತ್ತಮ ಶಿಕ್ಷಣ ಸರ್ಕಾರಿ ಶಾಲೆ ಮಕ್ಕಳಿಗೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಪುಣ್ಯ ಕಾರ್ಯದಲ್ಲಿ ಕೈಂಕರ್ಯದಲ್ಲಿ ಯುವಕರ ತಂಡ ತೊಡಗಿದೆ‌ ಎಂದರು ತಪ್ಪಾಗಲಾರದು.

ಒಂದು ತಟ್ಟೆ ಲೋಟ ಕೊಟ್ಟರೆ ದೊಡ್ಡದಾಗಿ ಹೆಸರು ಹಾಕಿಸಿಕೊಳ್ಳುವ ಈ ದಿನಗಳಲ್ಲಿ ಈ ದಾನಿಗಳ‌ ತಂಡ ಎಲ್ಲಿಯೂ ಕೂಡ ತಮ್ಮ ಯಾರ ಹೆಸರು ಬಹಿರಂಗ ಪಡಿಸದೇ ತೆರೆ ಮರೆಯಲ್ಲಿ ತಮ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ.

 ಈ ಶಾಲೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಹಾಗೂ ದಾನಿಗಳ ಸಹಕಾರದಿಂದ ಈಗಾಗಲೇ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ.

ಈ‌ ರೀತಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿರು ಈ ತಂಡಕ್ಕೆ ಇನ್ನೂ ಹೆಚ್ಚಿನ ಸೇವಾ ಭಾಗ್ಯ ಮಾಡುವಂತಾಗಲಿ. ಈ ರೀತಿ ಇನ್ನೂ ಹೆಚ್ಚು ಜನರು ತಮ್ಮ ದುಡಿಮೆಯಲ್ಲಿ ಒಂದಿಷ್ಟು ಭಾಗ ಬಡ ಜನರ ಅದರಲೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುವ ರೀತಿಯಲ್ಲಿ ಸೇವೆವೆ ಮುಂದಾಗಬೇಕಿದೆ.

ಈ ಕಾರ್ಯಕ್ರಮದಲ್ಲಿ ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶರತ್,ಎಸ್ ಡಿ ಎಮ್ ಸಿ ಅಧ್ಯಕ್ಷರು ನಾಗರಾಜಪ್ಪ ಸಿ, SDMC ಗೌರವಾಧ್ಯಕ್ಷರಾದ   ಇಮ್ರಾನ್,ಉಪಾಧ್ಯಕ್ಷೆ ಸಹನ  ಪತ್ರಕರ್ತರಾದ G K ಹೆಬ್ಬಾರ್ , ಪಾಪಯ್ಯ ಬಾಪೂಜಿ ಸಂಸ್ಥೆ ಸಂಸ್ಥಾಪಕರು.ಮುಖ್ಯ ಶಿಕ್ಷಕರು ಜಬಿವುಲ್ಲಾ ಎಂ ಕೆ, ಹಾಗೂ ದಾನಗಳನ್ನು ಸಂಘಟಿಸಿ ನೇತೃತ್ವ ವಹಿಸಿದ ಮಾಲತೇಶ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!