ಭದ್ರಾವತಿ:
ಭದ್ರಾವತಿ,ಸೆ.02:ಪಕ್ಷದ ವಿಪ್ ಉಲ್ಲಂಘಿಸಿದ ಮೂವರು ನಗರಸಭೆಯ ಸದಸ್ಯರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ನಗರಸಭೆಯ ಸದಸ್ಯರಾದ ವಿ. ಕದಿರೇಶ್, ಅನಿತಾ ಮಲ್ಲೇಶ್ ಹಾಗೂ ಶಶಿಕಲಾ ನಾರಾಯಣ ಅವರುಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ.
ಈ ಕುರಿತಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕಳೆದ ಆಗಸ್ಟ್ 28 ಭದ್ರಾವತಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಆದರೆ, ಪಕ್ಷ ಜಾರಿಗೊಳಿಸಲಾಗಿದ್ದ ವಿಪ್ ಉಲ್ಲಂಘಿಸಿ ಚುನಾವಣೆಗೆ ಹಾಜರಾಗದೇ ಇರುವ ಕಾರಣದಿಂದಾಗಿ ಮೂವರು ಸದಸ್ಯರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಟೋಟಲ್ ಬಿಜೆಪಿ ಜಿಲ್ಲೆಯಲ್ಲಿ ಅಸ್ಥಿತ್ವಕ್ಕೆ ಹುಡುಕ್ತಿದೆ.



ಉಚ್ಛಾಟನೆಗೆ ಕಾರಣವೇನು?


By admin

ನಿಮ್ಮದೊಂದು ಉತ್ತರ

You missed

error: Content is protected !!