ಶಿವಮೊಗ್ಗ,ಆ.19:

ಪಾಠದ ಜೊತೆಗೆ ಆಟವನ್ನೂ ಆಡಿಕೊಂಡು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಂತರಾಗಿರ ಬೇಕೆಂದು ಉಡುಪಿ ಸ್ಟೋರ್ಸ್ ನ ಗುರುರಾಜ್ ಭಟ್  ತಿಳಿಸಿದರು. 

ಅವರು ಶಿವಮೊಗ್ಗ ನಗರದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಸಂಸ್ಕೃತ ಭಾರತಿ ಮತ್ತು ಉಡುಪಿ ಸ್ಟೋರ್ಸ್‌ನ ಸಹಯೋಗದಲ್ಲಿ ವಿನೋಬ ನಗರದಲ್ಲಿ ಇರುವ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ಸಂಸ್ಕೃತ ವಿದ್ಯಾರ್ಥಿಗಳ ಕ್ರೀಡೋತ್ಸವದ

ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡುತ್ತಾ ಮಕ್ಕಳು ಓದಿನ ಜೊತೆಗೆ  ಆಟದ ಕಡೇ ಕೂಡ ಹೆಚ್ಚಿನ ಗಮನವನ್ನು ಕೊಡಬೇಕು ಇದರಿಂದ ಅವರಿಗೆ ಏಕಾಗ್ರತೆ, ಸೋಲು ಗೆಲುವಿನ ಪರಿಚಯ, ದೈಹಿಕ ಸಾಮರ್ಥ, ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು. 

ಕ್ರೀಡೆಗಳಲ್ಲಿ ಹಲವಾರು ಬಗೆಗಳನ್ನು ನಾವು ಕಾಣುತ್ತೇವೆ ಒಳಾಂಗಣ, ಹೊರಾಂಗಣ, ಜಾಣತನ, ಸಮೂಹ, ಜಾನಪದ ಕ್ರೀಡೆಗಳು ಇತ್ಯಾದಿ ಇವೆಲ್ಲವೂ ನಮ್ಮ ವೈಯುಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು. ‌

ಕಳೆದ 15 ವರ್ಷಗಳಿಂದ ನಮ್ಮ ಸಂಸ್ಥೆ ಸಂಸ್ಕೃತ ವಿದ್ಯಾರ್ಥಿಗಳಿಗೆ ಸಂಸ್ಕೃತೋತ್ಸವದಲ್ಲಿ ಏಳು ದಿನಗಳ ಕಾಲ ವಿವಿಧ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮುಖಾಂತರ ಸಂಸ್ಕೃತ ಭಾಷಾ ಪ್ರಚಾರಕ್ಕೆ ಒತ್ತು ಕೊಡುತ್ತಿದೆ ಏಕೆಂದರೆ ಇಂದಿನ ಸನ್ನಿವೇಶದಲ್ಲಿ ನಮ್ಮ ಮಕ್ಕಳಿಗೆ ಸಂಸ್ಕೃತ ಅದ್ಯಯನ ಅವಶ್ಯಕ ಎಂಬುದನ್ನು ತಿಳಿಸುವ ಸಲುವಾಗಿ ಹಾಗೂ

ವಿದ್ಯಾರ್ಥಿಗಳು ಸೋಲೂ ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳುವ ಎನ್ನುವ ಸಂದೇಶ ನಮ್ಮ ಆಶಯ ಎಂದರು.

ಸಂಸ್ಕೃತ ಭಾರತಿ  ಶಿವಮೊಗ್ಗ ನಗರ ಸಂಯೋಜಕ ವಿಮಲಾ ರೇವಣಕರ್ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಮನು ಚೌಹಾಣ್ ಕಾರ್ಯಕ್ರಮ ನಿರೂಪಿಸಿದರು ಮೀನಾ ಸ್ವಾಗತಿಸಿದರು, ವರಲಕ್ಷ್ಮಿ ವಂದಿಸಿದರು, 

ಸಂಸ್ಕೃತ ಶಿಕ್ಷಕ ಪ್ರಶಾಂತ್, ಕಾರ್ಯಕರ್ತರಾದ ಗೌತಮ, ಶ್ರೀವತ್ಸ, ದೀಪಿಕ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Join ತುಂಗಾತರಂಗ ವಾಟ್ಸಪ್ ಗ್ರೂಪ್ ಲಿಂಕ್

https://chat.whatsapp.com/7SMCGIpYxv13TPhwElOoLe

By admin

ನಿಮ್ಮದೊಂದು ಉತ್ತರ

You missed

error: Content is protected !!