ಇದನ್ನೂ ಓದಿ :
https://tungataranga.com/?p=33785
ಕೆಟ್ಟ ಕಂಗಳಿಂದ ದೂರ ಇರ್ರೀ/ ಗಜೇಂದ್ರಸ್ವಾಮಿ ಅವರ ಇಂದಿನ ನೆಗಿಟೀವ್ ಥಿಂಕಿಂಗ್! -9 ಅಂಕಣ ಓದಿ
ಲಿಂಕ್ ಬಳಸಿ ಅಂಕಣ ಓದಿ,
ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಇಲ್ಲಿ ಸೇರಿ
https://chat.whatsapp.com/JPToOk9Z1Q64q9rweteDmf
ತುಂಗಾ ತಂಗಾ ಕನ್ನಡ ದಿನಪತ್ರಿಕೆಯಲ್ಲಿ ಪ್ರತಿ ಶನಿವಾರ ಬರುತ್ತಿರುವ ನೆಗೆಟಿವ್ ವಾರದ ಅಂಕಣ ಎಂಟು ವಾರ ಪೂರೈಸಿದ ಬೆನ್ನಲ್ಲೇ ಓದುಗರ ಅಭಿಪ್ರಾಯಗಳು, ಸಲಹೆಗಳು, ಪ್ರಶಂಸೆಗಳು ನಿಜಕ್ಕೂ ಅತ್ಯಂತ ಆನಂದವನ್ನು ತಂದಿದೆ. ಇದು ಬರಹದ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಈ ನಡುವೆ ಪತ್ರಿಕೆಯ ನಿರಂತರ ಓದುಗರು, ಹಿರಿಮೆಯ ಸಾಹಸಿ, ಆತ್ಮೀಯ ಹಿರಿಯ ಓದುಗರೊಬ್ಬರು ಮಾತನಾಡುತ್ತಾ, “ನಾನು ಕೇಳಿದಾಕ್ಷಣ ಸಾಕಷ್ಟು ಜನರು ಅರ್ಜೆಂಟ್ ಕೈಗಡ ಸಾಲ ಕೊಡುತ್ತಿದ್ದರು. ಆದರೆ, ನಿನ್ನ ನೆಗೆಟಿವ್ ಥಿಂಕಿಂಗ್ ಬಂದ ಮೇಲೆ ಸಾಲ ಕೊಡಲ್ಲ ಎನ್ನುತ್ತಿದ್ದಾರೆ. ನಿನ್ನ ಮೇಲೆ ನಂಬಿಕೆ ಇದೆಯೋ ಇಲ್ಲವೋ ಯೋಚಿಸುತ್ತೇನೆ ಎನ್ನುತ್ತಿದ್ದಾರೆ. ನೀನು ಎನ್ ಓ ಸಿ ಕೊಡಬೇಕಂತೆ” ಎಂದು ನಗುತಲೇ ಹೇಳಿದರು.
ನೆಗೆಟಿವ್ ಥಿಂಕಿಂಗ್ ನ ವಾರದ ಅಂಕಣದಲ್ಲಿ ಕೈಗಡ ಎಂದು ಪಡೆದ ಸಾಲವನ್ನು ವಾಪಾಸ್ ಕೊಡದವರ ವಿಕೃತ ಮನಸ್ಸು ಹಾಗೂ ಯಾವುದೋ ಹೊಂದಾಣಿಕೆಗೆ ಇಟ್ಟುಕೊಂಡಿದ್ದ ಹಣವನ್ನು ಕೈಗಡ ಕೊಟ್ಟು ಆ ಹಣಕ್ಕೆ ಪರದಾಡುವ ಪರಿಸ್ಥಿತಿಗೆ ತಂದುಕೊಂಡ ಸಾಲಕೊಟ್ಟವನ ಸಮಸ್ಯೆಯನ್ನು ಸಕಾರಾತ್ಮಕವಾಗಿ ಹಲವು ಉದಾಹರಣೆಗಳೊಂದಿಗೆ ನೆಗೆಟಿವ್ ಥಿಂಕಿಂಗ್ ನಿಮ್ಮ ಮುಂದೆ ನಿರಂತರವಾಗಿ ನೀಡುತ್ತಿದೆ.
ನನ್ನ ಎನ್ ಓ ಸಿ ಎಂದದ್ದು ತಮಾಷೆಗೆ ಆಗಿದ್ದರೂ ಸಹ ನೆಗೆಟಿವ್ ಥಿಂಕಿಂಗ್ ನ ವಿಷಯ ಬಹುತೇಕ ಓದುಗರಿಗೆ ಅಚ್ಚುಮೆಚ್ಚಿನ ವಿಷಯವಾಗಿರುವುದು ಮತ್ತೊಂದು ಪಾಸಿಟಿವ್ ಥಿಂಕಿಂಗ್. ಏಕೆಂದರೆ ಬಹಳಷ್ಟು ಜನ ಮೆಚ್ಚಿಕೊಳ್ಳುವುದು ಅವರ ಮುಗ್ಧ ಮನದಲ್ಲಿ ಅನುಭವಿಸಿದ ಕಷ್ಟಗಳ ,ಹಿಂಸೆಗಳ ಉದಾಹರಣೆಗಳನ್ನು ಅನುಭವಗಳನ್ನು ಈ ಅಂಕಣ ನಿಮ್ಮ ಮುಂದೆ ನೀಡುತ್ತಿದೆ.
ಒಳ್ಳೆಯ 99 ರಷ್ಟು ಮನಸ್ಸುಗಳ ನಡುವೆ ಇರುವ ಕೇವಲ ಒಂದರಷ್ಟಿರುವ ವಿಕೃತ ವ್ಯಕ್ತಿಗಳ ಬದುಕಿನ ಬಂಡವಾಳವನ್ನು ಎಳೆ ಎಳೆಯಾಗಿ ನೀಡುವ ಪ್ರಯತ್ನ ಇದು.
ಕೆಲವರಂತೂ ಕೊಟ್ಟ ಸಾಲ ಕೊಟ್ಟವನಿಗೆ ಮರೆಯುವ ತನಕ ಏನೂ ಗೊತ್ತಿಲ್ಲದಂತೆ ಸುಮ್ಮನಿರುತ್ತಾರೆ. ಅವರ ಎಲ್ಲಾ ಬೇಳೆಗಳನ್ನು ಚೆನ್ನಾಗಿ ಬೇಯಿಸಿಕೊಳ್ಳುತ್ತಾರೆ. ಮತ್ತೆ ಹೊಸ ಹೊಸ ಸಾಲ ಕೊಡುವ ಗಿರಾಕಿಗಳನ್ನು ಎತ್ತುವ ಗಿರಾಕಿಗಳನ್ನು ಹುಡುತ್ತಾರೆ.
ಎತ್ತುವಳಿಗೆ ಕಾಯುತ್ತಾರೆ ಎಂಬುದೇ ಇಂದಿನ ದುರಂತಗಳಲ್ಲಿ ಅತಿ ಕಡಿಮೆ ಎಣಿಕೆಯಲ್ಲಿ ಕಾಣಿಸುವ ವಿಕೃತ ಮನಸ್ಸುಗಳು ಹೊಂದಿರುವ ದೇಹಗಳು ಎಂದರೆ ತಪ್ಪಾಗಲಿಕ್ಕಿಲ್ಲ.
ನಾಚಿಕೆ ಎಂಬುದೇ ಇಲ್ಲದಿದ್ದಾಗ ಅವರ ಬಗ್ಗೆ ಹೇಗೆ ತಾನೇ ನಮ್ಮ ನಂಬಿಕೆ ಸರಿಯಾಗುವುದು ಸಾಧ್ಯ ಅಲ್ಲವೇ?
-ಲೇಖಕರು
ಸಂಪಾದಕೀಯ ನುಡಿ
ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.
ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಅಂಕಣದ ಒಂಬತ್ತನೇ ಅಂಕಣದ ಮತ್ತೊಂದು ವಿಶೇಷ. “ಕೆಟ್ಟ ಕಣ್ಣುಗಳಿಂದ ದೂರ ಇರ್ರಿ” ಓದಿ.
ನೆಗೆಟಿವ್ ಥಿಂಕಿಂಗ್ ಕಾಲಂಗೆ ಓದುಗರಿಂದ ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು,
ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.
ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ”, “ಒಳ್ಳೆಯವರಾದ್ರೆ ನಾಕಾಣೆ ಸಾಲ ಸಿಗೊಲ್ಲ” ಹಾಗೂ “ನಂಬಿಕೆ ದ್ರೋಹದ ಮನಸುಗಳೇ ಹೊಲಸು” ಓದಿದ್ದೀರಿ. ಇಂದು ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
– ಸಂ