ಶಿವಮೊಗ್ಗ, ಜ.11:
ಆಸ್ತಿಗಾಗಿ ಮಗನೇ ತಂದೆಯ ಮೇಲೆ ಮಚ್ಚಿನಿಂದ ಹೊಡೆದ ಘಟನೆ ಮಂಡಗದ್ದೆ ಹೋಬಳಿ ಸಿಂಗಬಿದರೆಯ ಮೂರು ಕೈನಲ್ಲಿ ನಡೆದಿದೆ.
ಮೂರು ಕೈ ವಾಸಿ ರಂಗಪ್ಪ ಎಂಬುವರ ಮೇಲೆ ಮಗ ನವೀನ ಎಂಬಾತನೇ ಹಲ್ಲೆ ನಡೆಸಿದ್ದು ಹೆಚ್ಚಿನ ಆಸ್ತಿಗಾಗಿ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಮಗನ ದಾಳಿಯಿಂದ ಅದೃಷ್ಠವಶಾತ್ ರಂಗಪ್ಪ ಬದುಕಿ ಉಳಿದಿದ್ದು ಶಿವಮೊಗ್ಗದ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬೈಯಲ್ಲಿದ್ದ ನವೀನ ಕಳೆದ ನಾಲ್ಕು ವರ್ಷಗಳ ಹಿಂದೆ ಮನೆಗೆ ವಾಪಾಸಾಗಿದ್ದಾನೆ.
ಕಳೆದ ಎರಡು ವರ್ಷಗಳ ಹಿಂದೆ ಸಿಂಗನಬಿದರೆ ಗ್ರಾಪಂನ ಮೂಲಕ ಮಾಳೂರು ಪೊಲೀಸ್ ಠಾಣೆಯಲ್ಲಿ ರಂಗಪ್ಪ ಗೌಡರ 2 ಎಕರೆ 18 ಗುಂಟೆ ಆಸ್ತಿ ಪಾಲಾಗಿತ್ತು.
ಹಿರಿಯ ಮಗ ಮೋಹನ್, ಕಿರಿಯ ಮಗ ನವೀನ್ ಗೆ ತಲಾ ಅರ್ಧ ಅರ್ಧ ಎಕರೆ ಆಸ್ತಿ ಪಾಲಾಗಿತ್ತು. ಉಳಿದ ಅರ್ಧವನ್ನ ತಮ್ಮ ಹೆಸರಿಗೆ ಉಳಿದ ಅರ್ಧವನ್ನ ತಮ್ಮ ಪತ್ನಿಯ ಹೆಸರಿಗೆ ರಂಗಪ್ಪ ಗೌಡ ಪಾಲು ಮಾಡಿಕೊಂಡಿದ್ದರು.
ಆದರೆ ಮೊನ್ನೆ ತಂದೆ ರಂಗಪ್ಪ ಹಾಗೂ ಪತ್ನಿ ಹೆಸರಿಗೆ ಒಂದು ಎಕರೆ ಪಾಲಾಗಿದ್ದು ಇದು ನವೀನನ ಕಣ್ಣು ಬಿದ್ದಿದೆ.
ಒಂದು ಎಕರೆಯಲ್ಲಿ ನನಗೂ ಆಸ್ತಿ ಬೇಕು ಎಂಬುದು ನವೀನನ ಆಸೆ ಎಂಬುದು ಕುಟುಂಬಸ್ಥರ ಹೇಳಿಕೆಯಾಗಿದೆ.
ಆದರೆ ಹೆಚ್ಚಿನ ಆಸ್ತಿ ನೀಡಲು ರಂಗಪ್ಪ ನಿರಾಕರಿಸಿದ್ದಾರೆ. ನವೀನ ತಾಯಿಯ ಮೂಲಕ ರಂಗಪ್ಪನವರ ಆಸ್ತಿ ನೀಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಮೊನ್ನೆ ರಂಗಪ್ಪ ರಾತ್ರಿ ಊಟ ಮುಗಿಸಿಕೊಂಡು ಮಲಗಿದಾಗ ನವೀನ ಮಚ್ಚಿನಿಂದ ರಂಗಪ್ಪನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ನಾಲ್ಕೈದು ಬಾರಿ ಮಚ್ಚಿನಿಂದ ಬೀಸಿದ್ದಾನೆ ಎನ್ನಲಾಗಿದೆ. ಟವಲ್ ನಿಂದ ರಂಗಪ್ಪನ ಕುತ್ತಿಗೆ ಹಿಸುಕಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ. ರಂಗಪ್ಪ ಗೌಡ ಅರಚಿಕೊಂಡ ಪರಿಣಾಮ ಗ್ರಾಮಸ್ಥರು ಒಂದಾಗಿ ಬಚಾವ್ ಮಾಡಿರುವುದು ತಿಳಿದುಬಂದಿದೆ. ಈ ಘಟನೆ ಜ.8 ರಂದು ನಡೆದಿದೆ. ನಿನ್ನೆ ಮಾಳೂರು ಠಾಣೆಯಲ್ಲಿ ನವೀನನ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

By admin

ನಿಮ್ಮದೊಂದು ಉತ್ತರ

error: Content is protected !!