ತಾಯಿಯಿಂದ ಮಕ್ಕಳ ಕೊಲೆ ಏಕೆ….?

ನಿಗೂಢವಾಗಿಯೇ ಉಳಿದ ಸತ್ಯಾಂಶ!

ಶಿವಮೊಗ್ಗ,ಜ.8:
ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ ಇದೇ ಜ. 4ರಂದು ಗಾಂಧಿ ಪಾರ್ಕ್ ನಲ್ಲಿ ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳಿಗೆ ಜೂಸ್ ನಲ್ಲಿ ವಿಷ ಬೆರೆಸಿ ಕುಡಿಸಿ ಮಕ್ಕಳ ಸಾವಿಗೆ ಕಾರಣವಾಗಿದ್ದ ಪ್ರಕರಣ ತಾಯಿ ಇಂದು ಸಾವು ಕಂಡಿದ್ದಾಳೆ.
ಅಂದು ಜ್ಯೂಸ್ ಕುಡಿದಿದ್ದ ಮಕ್ಕಳು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಇಂದು ಮಕ್ಕಳ ಬಳಿಕ ತಾಯಿ ಕೂಡ ಸಾವನ್ನಪ್ಪಿದ್ದಾಳೆ. ಕಾರಣ ಲೋ ಬಿಪಿ…!
ಗಾಂಧಿ ಪಾರ್ಕ್ ಗೆ ತಾಯಿ ಗೀತಾಳೊಂದಿಗೆ ಜ. 4ರಂದು ಅಶ್ವಿನ್(8) ಹಾಗೂ ಆಕಾಂಕ್ಷಾ(4) ಬಂದಿದ್ದರು. ಪಾರ್ಕಿನ ಬಳಿ ಜೂಸ್ ಕುಡಿದ ನಂತರ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಜೂಸ್ ನಲ್ಲಿ ವಿಷ ಬೆರೆಸಿ ತಾಯಿಯೇ ಮಕ್ಕಳನ್ನು ಕೊಲ್ಲಲಾಗಿದೆ. ಜೂಸ್ ನಿಂದ ಪುಡ್ ಪಾಯಿಸನ್ ಆಗಿ ಮಕ್ಕಳು ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಜೂಸ್ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
ಮಕ್ಕಳ ಸಾವಿನ ಬಳಿಕ ತಾಯಿ ಗೀತಾಳನ್ನು ಮೆಗ್ಗಾನ್ ಆಸ್ಪತ್ರೆಯ ಸಾಂತ್ವಾನ ಕೇಂದ್ರದಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಮಕ್ಕಳು ಅಸ್ವಸ್ಥಗೊಂಡ ನಂತರ ತಾಯಿ ಗೀತಾ ಕೂಡ ಅಸ್ವಸ್ಥಳಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದಳು.
ಈ ಸಮಯದಲ್ಲಿ ಗೀತಾ ಊಟ ತ್ಯೆಜಿಸಿದ್ದರಿಂದಾಗಿ, ಇಂದು ಲೋ ಬಿಪಿಯಾಗಿ ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳ ಬಳಿಕ, ತಾಯಿ ಗೀತಾ ಕೂಡ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಜೂಸ್ ಕುಡಿದು ಮಕ್ಕಳು ಅಸ್ವಸ್ಥರಾಗಿ ಸಾವನ್ನಪ್ಪಿದ ಪ್ರಕರಣದ ನಂತರ ಪೊಲೀಸರು ದೂರು ದಾಖಲಿಸಿಕೊಂಡು, ತಾಯಿಯನ್ನು ವಿಚಾರಣೆ ನಡೆಸುವುದು ಬಾಕಿ ಇತ್ತು. ತಾಯಿ ಗೀತಾ ಅಸ್ವಸ್ಥಳಾಗಿದ್ದರಿಂದಾಗಿ ವಿಚಾರಣೆ ನಡೆಸಿರಲಿಲ್ಲ. ಮಕ್ಕಳು ಸತ್ತಿದ್ದೇಗೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗಗೊಳ್ಳುವ ಮುನ್ನವೇ ಈಗ ತಾಯಿ ಕೂಡ ಸಾವನ್ನಪ್ಪಿದ್ದಾಳೆ. ಈಗಾಗಿ ಮಕ್ಕಳ ಸಾವಿಗೆ ಕಾರಣ ಏನು ಎನ್ನುವುದು ಮತ್ತಷ್ಟು ನಿಗೂಢವಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!