ಚುನಾವಣಾ ಸ್ಪೆಷಲ್ 2 – ತುಂಗಾತರಂಗ
ಶಿವಮೊಗ್ಗ, ಮಾ.28:
ಮತದಾನ ಎಂಬುದು ಅತ್ಯಂತ ಗೌಪ್ಯವಾಗಿ ಮನದ ಮೂಲೆಯಲ್ಲಿ ಬಚ್ಚಿಟ್ಟುಕೊಂಡು ಹಾಕುವ, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ರೀತಿಯಲ್ಲಿ ಬದುಕುವ ಸಂವಿಧಾನ ನಮ್ಮದು. ಚುನಾವಣಾ ಆಯೋಗ ಈ ಬಗ್ಗೆ ಯಾರಾದರೂ ಮತದಾನದ ಬಗ್ಗೆ ಬಹಿರಂಗ ಮಾಹಿತಿ ಕೇಳಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಶಿಕ್ಷೆ ವಿಧಿಸಬಹುದು ಎಂಬ ಸತ್ಯ ಅಧಿಕಾರಿಗಳಿಗೆ ಇರುವಂತಿಲ್ಲ.
ಆಯಾ ಜಗತ್ತಿನ ಅಂದರೆ ಆಯಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜ್ಯಗಳ ದೃಶ್ಯ ಮಾಧ್ಯಮಗಳು, ಅದರಲ್ಲೂ ಕೆಲ ಟಿವಿ ಚಾನೆಲ್ ಗಳು ಮತ್ತು ವಿಶೇಷವಾಗಿ ಆರಂಭಗೊಂಡ ಯಾವುದೇ ಲೆಕ್ಕ, ದಾಖಲೆ ಹೊಂದಿರದ ಯುಟ್ಯೂಬ್ ಚಾನೆಲ್ ಗಳು ಹಾದಿ ಬೀದಿಯಲ್ಲಿ ಹೋಗುತ್ತಾ ನೀವು ಯಾರಿಗೆ ಮತ ಹಾಕುತ್ತೀರಿ ಎಂದು ಬೊಂಬಾಡಾ ಬಜಾಯಿಸುತ್ತಿದ್ದಾರೆ. ಇದು ಚುನಾವಣಾಧಿಕಾರಿಗಳಿಗೆ ಗೊತ್ತಿಲ್ಲವೇ?
ಮುದ್ರಣ ಮಾಧ್ಯಮಗಳು ಚಿಕ್ಕದೊಂದು ತಪ್ಪು ಮಾಡಿದರೆ, ಸೂಚನೆ, ನೋಟಿಸ್ ಜಾರಿ ಮಾಡುವ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಈ ಟಿವಿ ಹಾಗೂ ಯೌಟ್ಯೂಬ್ ಚಾನೆಲ್ ಗಳ ಮಾಹಿತಿ ಗೊತ್ತಿಲ್ಲವೇ?
ಪ್ರತಿ ಹಳ್ಳಿ ಹಳ್ಳಿಗಳಲ್ಲಿ, ನಗರ ಪ್ರದೇಶಗಳಲ್ಲಿ ಕ್ಯಾಮರಾ ಜೊತೆಗೆ ಮೈಕ್ ಹಿಡಿದುಕೊಂಡು ನೀವು ಯಾರಿಗೆ ಮತ ಹಾಕುತ್ತೀರಿ ಎಂದು ಪ್ರಶ್ನಿಸುತ್ತಾರೆ. ಸ್ವಲ್ಪ ಧೈರ್ಯ ತೋರಿದವರು ಯಾರ ಹೆಸರನ್ನು ಹೇಳಬೇಕು ಅದನ್ನು ಹೇಳುತ್ತಾರೆ. ಆದರೆ ಅದೇ ವಿಷಯ ಅತಿ ದೊಡ್ಡ ಚರ್ಚೆಯಾಗುತ್ತದೆ ಎಂಬ ಸತ್ಯ ಚುನಾವಣಾ ಆಯೋಗಕ್ಕೆ ಇಲ್ಲದಿರುವುದು ಅತ್ಯಂತ ನೋವಿನ ವಿಷಯ.
ಹಳ್ಳಿ ಹಳ್ಳಿಗಳಲ್ಲಿ ಅವನು ಆ ಪಕ್ಷದವ, ಈ ಪಕ್ಷದವ ಎಂದು ನ ಮತ ಎಣಿಕೆ ಹಾಗೂ ಮತದಾನದ ಲೆಕ್ಕಾಚಾರಗಳನ್ನು ಅಂದಾಜಿಸುವ ಹೆಚ್ಚು ಕಡಿಮೆಯಾದರೆ ದೊಡ್ಡ ಪ್ರಮಾಣದಲ್ಲಿ ಜಗಳ ಮಾಡುವ ಘಟನೆಗಳು ನಡೆಯುತ್ತವೆ. ಕೂಡಲೇ ಇಂತಹ ಮಾಧ್ಯಮಗಳು ವೈಯುಕ್ತಿಕ ಮತದಾನದ ಹಕ್ಕಿನ ನಿಯಮಗಳನ್ನು ಹಾಳು ಮಾಡದಂತೆ ನೋಡಿಕೊಳ್ಳಬೇಕಿದೆ. ಅನಗತ್ಯ ಜಗಳ ಬೇಕಿಲ್ಲ ಅಲ್ಲವೇ?