ಚುನಾವಣಾ ಟ್ರಿಕ್ಸ್-1
ಶಿವಮೊಗ್ಗ,ಮಾ.19:
ನಿನ್ನೆ ಇಲ್ಲಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರಧಾನಿ ಮೋದಿ ಅವರ ಬೃಹತ್ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹಾಗೂ ಮಾಜಿ ಸಚಿವ ರೇಣುಕಾಚಾರ್ಯ ಅವರ ಗೈರು ಹಾಜರಿ ಬಗ್ಗೆ ಒಬ್ಬರೇ ಒಬ್ಬರು ಒಂದೇ ಒಂದು ಚಕಾರ ಎತ್ತದಿರುವುದು ಶಿವಮೊಗ್ಗ ಹಾಗೂ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಹಾಗೂ ರೇಣುಕಾಚಾರ್ಯ ಅವರ ಬಂಡಾಯ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟರಾ?
ಇಂತಹ ಚುನಾವಣೆಗೆ ಬಿಜೆಪಿಯವರೇ ಆಹ್ವಾನ ನೀಡಿದರಾ ಎಂಬ ಪ್ರಶ್ನೆ ಹುಟ್ಟುತ್ತದೆ.


ಮೋದಿ ಅವರು ಆಗಮಿಸುವ ಮುನ್ನವೇ ಬಿಜೆಪಿಯ ಎಲ್ಲ ಗಣ್ಯರು ಅಂದರೆ ಮಾಜಿ ಸಚಿವ ಹಾಗೂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ, ಹರತಾಳು ಹಾಲಪ್ಪ, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಎಲ್ಲರೂ ಮಾತನಾಡಿದರು.
ಅವರ ಬಾಯಿಂದ ಎಲ್ಲಿಯೂ ಒಂದೇ ಒಂದು ಬಾರಿ ಈಶ್ವರಪ್ಪರ ಹೆಸರು ಬರಲೇ ಇಲ್ಲ. ಈ ಮಾಹಿತಿ ತಿಳಿದ ಈಶ್ವರಪ್ಪ ಊರಿದು ಕೆಂಡ ಮಂಡಲವಾಗಿದ್ದಾರೆ.

ಇದನ್ನೂ ಓದಿ

https://tungataranga.com/?p=28934
ಕಾಂಗ್ರೆಸ್‌ನಿಂದ ಹಣ ಲೂಟಿ ತಪ್ಪಿಸಿ, ನಾರಿ ಶಕ್ತಿಯೇ ತಕ್ಕ ಪಾಠ ಕಲಿಸಲಿ, ಶಿವಮೊಗ್ಗದಲ್ಲಿನ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ
ಸಂಪೂರ್ಣ ಸುದ್ದಿ ಓದಲು ಲಿಂಕ್ ಬಳಸಿ


ನಾನು ಈಗಲೂ ಬಿಜೆಪಿಯನ್ನು ಅಮ್ಮನ ಸ್ಥಾನದಲ್ಲಿರಿಸಿದ್ದೇನೆ. ಮೋದಿ ಅವರನ್ನು ಗೌರವಿಸುತ್ತೇನೆ. ಆದರೆ ಬಿಜೆಪಿಯನ್ನು ಅಪ್ಪ ಮಕ್ಕಳ ಪಕ್ಷವನ್ನಾಗಿ ಮಾಡಿಕೊಳ್ಳಲು ಹೊರಟಿರುವ ತಂಡದ ವಿರುದ್ಧ ನನ್ನ ಹೋರಾಟವಿರುತ್ತದೆ. ಎಷ್ಟು ದಿನ ಸುಮ್ಮನೆ ಇರಬೇಕು. ಇಲ್ಲಿ ನಾನೇ ಗೆದ್ದು ಸಂಸದನಾಗಿ ಮೋದಿ ಅವರ ಬಳಿ ಹೋಗುತ್ತೇನೆ ಎಂದು ನಿನ್ನೆ ಕಾರ್ಯಕ್ರಮಕ್ಕೆ ಆಗಮಿಸದೆ ಮಠಗಳಿಗೆ ಹೋಗಿದ್ದ ಈಶ್ವರಪ್ಪ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸದ ಬಿಜೆಪಿ ನಾಯಕರ ವರ್ತನೆ ಒಂದೆಡೆ ಈಶ್ವರಪ್ಪನವರನ್ನು ಇಡೀ ಪಕ್ಷದಿಂದ ಇಡೀ ಚುನಾವಣೆಯಿಂದ ಹೊರ ಹಾಕಿ ಬಂಡಾಯ ಸ್ಪರ್ಧೆಗೆ ಹೂವಿನ ಹಾಸಿಗೆ ಸಿದ್ಧಪಡಿಸಿಕೊಟ್ಟಿದೆ ಎನಿಸುತ್ತದೆ.


ಕನಿಷ್ಠ ಸಿಟಿ ರವಿಯಾದರೂ ಈಶ್ವರಪ್ಪ ಅವರ ಬಗ್ಗೆ ಒಂದು ಮಾತನಾಡಬೇಕಿತ್ತು. ಅಷ್ಟೊಂದು ಜನಸ್ತೋಮರ ನಡುವೆ ಈಶ್ವರಪ್ಪ ಯಾರಿಗೂ ಕಾಣಿಸಲ್ಲವೇ? ಕನಿಷ್ಠ ಈಶ್ವರಪ್ಪನವರ ಭಾವಚಿತ್ರವನ್ನು ಪ್ರದರ್ಶಿಸುವ ಮೂಲಕ ಅವರ ಪರವಾಗಿ ಧ್ವನಿ ಎತ್ತುವ ಒಬ್ಬನೇ ಒಬ್ಬ ಕಾರ್ಯಕರ್ತ ಸಹ ಕಾಣದಿರುವುದು ಈಶ್ವರಪ್ಪ ಅವರನ್ನು ಬಂಡಾಯ ಸ್ಪರ್ಧೆಗೆ ನಿಲ್ಲಿಸುವ ಪ್ರಯತ್ನವೇ..?
ಕೊನೆಯ ಹಂತದಲ್ಲಿ ದೀರ್ಘವಾಗಿ ಮಾತನಾಡಿದ ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಎಲ್ಲಿಯೂ ಬಂಡಾಯ ಸ್ಪರ್ಧೆಯ ಬಗ್ಗೆಯಾಗಲಿ ಈಶ್ವರಪ್ಪ ರೇಣುಕಾಚಾರ್ಯ ಅವರಂತಹ ನಾಯಕರ ಬಗ್ಗೆಯಾಗಲಿ ಒಂದೇ ಒಂದು ಮಾತನಾಡದಿರುವುದು ಪಕ್ಷದಲ್ಲಿ ಬಂಡಾಯ ಸ್ಪರ್ಧೆಗೆ ಒಂದು ಚೌಕಟ್ಟು ರೂಪಿಸಿದೆ ಎಂಬ ಅನುಮಾನಗಳು ಹುಟ್ಟಿವೆ.
ಒಟ್ಟಾರೆ ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಬಿಜೆಪಿಯ ಇಬ್ಬರು ಬಂಡಾಯ ಸ್ಪರ್ಧೆ ಇಳಿಯುವುದು ಖಚಿತವೆನ್ನಲಾಗುತ್ತಿದೆ. ದಾವಣಗೆರೆಯಲ್ಲಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದರೆ ಅಚ್ಚರಿಪಡಬೇಕಾಗಿಲ್ಲ.

By admin

ನಿಮ್ಮದೊಂದು ಉತ್ತರ

error: Content is protected !!