ಶಿವಮೊಗ್ಗ : ರೈತರು ಹಾಗೂ ಮಲೆನಾಡಿನ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ
ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ
ಕಾರ್ಯಕ್ರಮವನ್ನು ಮಲೆನಾಡು ರೈತರ ಹೋರಾಟ ಸಮಿತಿ ಬಹಿಷ್ಕರಿಸುತ್ತಿದ್ದು,
ಇಡಿ
ಮಲೆನಾಡಿನ ಜನತೆ ಸಂಘಟನೆಯೊಂದಿಗೆ ಕೈಜೋಡಿಸುವಂತೆ ಹೋರಾಟ ಸಮಿತಿ ಸಂಚಾಲಕ
ತೀ.ನ.ಶ್ರೀನಿವಾಸ್ ಮನವಿ ಮಾಡಿದರು.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ.ಸ್ವಾಮಿನಾಥನ್ ಆಯೋಗದ ವರದಿ
ಜಾರಿಗೊಳಿಸಿ ಕೃಷಿ ಉತ್ಪನ್ನಗಳ ವೆಚ್ಚದ ಮೂರುಪಟ್ಟು ಬೆಲೆ ಹೆಚ್ಚಳ ಮಾಡಲಾಗುವುದೆಂದು
ಹೇಳಲಾಗಿತ್ತು. ಆದರೆ ಇದುವರೆಗೂ ಇದನ್ನು ಮಾಡಿಲ್ಲ ಎಂದು ದೂರಿದರು.
ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸಿದ್ದ ಮೂರು ಕೃಷಿ ಕಾಯಿದೆಗಳನ್ನು ವಾಪಸ್
ಪಡೆಯುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ವಾಪಸ್ ಪಡೆದಿಲ್ಲ.
ಎಂಎಸ್ಪಿಯನ್ನು ಶಾಸನ ಬದ್ಧಗೊಳಿಸುವಂತೆ ದೆಹಲಿಯಲ್ಲಿ ರೈತರು ಹೋರಾಟ
ಮಾಡುತ್ತಿದ್ದರೂ ಇದುವರೆಗೂ ಅದಕ್ಕೆ ಸ್ಪಂದಿಸಿಲ್ಲ ಎಂದು ಹೇಳಿದರು.
ಈ ಹಿಂದೆ ಇಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಅಡಿಕೆ ಸಂಶೋ’ನಾ ಕೇಂದ್ರ
ತೆರೆಯುವುದಾಗಿ ಹಾಗೂ ಕಳ್ಳ ಮಾರ್ಗದಲ್ಲಿ ಅಡಿಕೆ ವಿದೇಶಗಳಿಂದ ಬರುವುದನ್ನು
ತಡೆಯಲಾಗುವುದೆಂಬ ಭರವಸೆ ನೀಡಲಾಗಿತ್ತು. ಆದರೆ ಇವುಗಳ ಬಗ್ಗೆ ಕ್ರಮಕೈಗೊಳ್ಳದೆ
ಇರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗುವಂತಾಗಿದೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂ ಹಕ್ಕು ನೀಡುವಲ್ಲಿ ಸಂಪೂರ್ಣ ವಿಲವಾಗಿದೆ.
ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ನ್ಯಾಯ
ಕಲ್ಪಿಸಲು ಇದುವರೆಗೂ ಸಾಧ್ಯವಾಗಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಪ್ರಧಾನಿಯವರ
ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಮೂರ್ತಿ, ಆರ್ಮುಗಂ, ಅರುಣ್ ಇದ್ದರು.