ಶಿವಮೊಗ್ಗ,ಮಾ.೧೬:
ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಬರುವ ಹಿನ್ನಲೆ ಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅವರ ೧೦ ವರ್ಷದ ಆಡಳಿತಕ್ಕೆ ಸಂಬಂಧಪಟ್ಟಂತೆ ದಶ ಪ್ರಶ್ನೆಗಳನ್ನು ಕೇಳಿದರು.


ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಗಿರೀಶ್, ವರ್ಷಕ್ಕೆ ೨ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ಕೊಟ್ಟಿದ್ದೀರಿ. ೧೦ ವರ್ಷಕ್ಕೆ ೨೦ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಯಾಗಿದೆ ?

ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಮಾತನಾಡಿದ್ದೀರಿ ಎಲ್ಲಿ ನೀಡಿದ್ದೀರಿ? ರೈತರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ನಿಮ್ಮ ಸರ್ಕಾರ ಬಂದಿದೆ. ನೂರಾರು ಜನರನ್ನು ಸಾಯಿಸಿ ವ್ಯಾಪಾರಿಗಳನ್ನು ಬೀದಿಗೆ ತಳ್ಳಿ ಉದ್ಯೋಗ ನಷ್ಟ ಮಾಡಿದ ನೋಟ್ ಬ್ಯಾಂಕ್‌ನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರ?.


ಎಲ್ಲರ ಖಾತೆಗೆ ಹಾಕುವೆನೆಂದು ಹೇಳಿದ ೧೫ ಲಕ್ಷ ಹಣ ಎಲ್ಲಿ? ಇಂಧನ ಬೆಲೆ ಇಳಿಸುತ್ತೇವೆ ಎಂದು ಹೇಳಿದ್ದೀರಿ? ಎಲ್ಲಿ ಇಳಿಸಿದ್ದೀರ? ೧೦ ವರ್ಷದಲ್ಲಿ ಒಮ್ಮೆಯಾದರೂ ಪತ್ರಿಕಾ ಮಾಧ್ಯಮದ ಎದುರು ಏಕೆ ಮಾತನಾಡಿಲ್ಲ? ಕೇವಲ ಪೋಟೋ ಪ್ರಚಾರಕ್ಕಾಗಿ ಲಕ್ಷಾಂತರ ಕೋಟಿ ರೂ.ಗಳನ್ನು ಪೋಲ್ ಮಾಡಿದ್ದೀರಿ ಏಕೆ?ಎಂದು ಪ್ರಶ್ನೆಮಾಡಿದರು.


ಬೇಟಿ ಬಚಾವ್, ಬೇಟಿ ಪಡಾವೋ ಎಂದು ಹೇಳಿದ ನೀವು ಮಹಿಳೆಯರ ಮೇಲಿನ ದೌರ್ಜನ್ಯ ವನ್ನು ತಡೆಯಲು ಕಾನೂನು ಮಾಡಲಿಲ್ಲ ಏಕೆ ? ಎಲ್ಲಿದೆ ನಿಮ್ಮ ಬುಲೆಟ್ ಟ್ರೈನ್, ಕರ್ನಾಟಕದ ಯುವ ಕರಿಗೆ ಕೇಂದ್ರದ ಪರೀಕ್ಷೆಗಳಲ್ಲಿ ಸಮಾನ ಅವಕಾಶ ಕಿತ್ತುಕೊಂಡಿದ್ದು ಏಕೆ? ರಾಜ್ಯಕ್ಕೆ ಬರಬೇಕಾದ ಹಣವನ್ನು ಏಕೆ ಕೊಡಲಿಲ್ಲ? ಜಿ.ಎಸ್.ಟಿ.ಹಂಚಿಕೆ ಹಣ ಏಕೆ ಇಲ್ಲ? ಕಾವೇರಿ, ಮಹಾದಾಯಿ ಹಾಗೂ ಬರಪರಿಹಾರ ನಿಧಿ ಏಕೆ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಪ್ರವೀಣ್‌ಕುಮಾರ್, ಕೆ.ರಂಗನಾಥ್, ಲೋಕೇಶ್, ಎಂ.ರಾಹುಲ್, ಎಸ್.ಕುಮರೇಶ್, ಟಿ.ವಿ.ರಂಜಿತ್, ನಾಗರಾಜ್ ನಾಯಕ, ಪುಷ್ಪಕ್ ಕುಮಾರ್, ಮೊಹಮ್ಮದ್ ಇಕ್ಬಾಲ್ ಮುಂತಾದವರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!