ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಿಂದ ಪ್ರತಿ ವರುಷದಂತೆ ೨೭ನೇ ರಾಜ್ಯ ಮಟ್ಟದ ಬಾಲಕ ಮತ್ತು ಬಾಲಕಿಯರ ಜನಜಾಗೃತಿ ಶಿಬಿರವನ್ನು ಬರುವ ಅಕ್ಟೋಬರ್ ೧೫ ರಿಂದ ೨೨ ರವರೆಗೆ ಕ್ಷೇತ್ರದ ಬಿಜಿಎಸ್ ಸಭಾ ಮಂಟಪದಲ್ಲಿ ನಡೆಯಲಿದೆ ಎಂದು ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಶಾಖೆಯ ಕಾರ್ಯದರ್ಶಿಗಳು ಆದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳವರ ಆಶಯದಂತೆ ೨೬ ವರ್ಷಗಳಿಂದ ಮಕ್ಕಳಲ್ಲಿ ವ್ಯಕ್ತಿತ್ವದ ನಿರ್ಮಾಣ ಮಾಡಿ, ಸ್ವಾವಲಂಬಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಜನಜಾಗೃತಿ ಶಿಬಿರಗಳನ್ನು ಆಯೋಜಿಸಲಾ ಗುತ್ತಿದೆ.
೧೪ ವರ್ಷ ಮೇಲ್ಪಟ್ಟ ವಿದ್ಯಾರ್ಥಿ, ವಿದ್ಯಾರ್ಥಿ ನಿಯರಿಗೆ ಅವಕಾಶವಿದ್ದು, ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಉಚಿತ ಊಟ ಹಾಗೂ ವಸತಿಯನ್ನು ಒದಗಿಸಲಾಗುತ್ತದೆ. ಶಿಬಿರಕ್ಕೆ ಸಂಬಂಧಿಸಿದಂತೆ ಸಂಸ್ಕಾರ ಸೌರಭ ಪುಸ್ತಕ ಮತ್ತು ಲೇಖನಿ ಸಾಮಗ್ರಿಯನ್ನು ಉಚಿತವಾಗಿ ನೀಡಲಿದ್ದು, ಪರಿಸರ ನೈರ್ಮಲ್ಯ, ದೈನಂದಿನ ವ್ಯಾಯಾಮ,ಆರೋಗ್ಯದ ರಕ್ಷಣೆ, ಅರಿವು, ಪ್ರಾರ್ಥನೆ, ಧ್ಯಾನ ಮುಂತಾದ ವಿಷಯಗಳ ಕುರಿತು ಉಪನ್ಯಾಸವಿರುತ್ತದೆ. ಯೋಗ, ಜ್ಯೋತಿಷ್ಯ ಭಜನೆ, ಪೂಜಾ ವಿಧಿ ವಿಧಾನಗಳ ಬಗ್ಗೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕುರಿತು ತರಬೇತಿ ನೀಡಲಾಗುತ್ತದೆ
.
ಯೋಗ ಅಭ್ಯಾಸಕ್ಕೆ ಸಂಬಂಧಪಟ್ಟಂತೆ ಉಡುಪು, ದಿನ ನಿತ್ಯ ಬಳಕೆ ವಸ್ತುಗಳು ಮತ್ತು ಲಘು ಹೊದಿಕೆಯನ್ನು ತರಬೇಕು. ಬೆಲೆ ಬಾಳುವ ವಸ್ತು ಮತ್ತು ಮೊಬೈಲ್ ಗಳನ್ನು ನಿಷೇಧಿಸಲಾಗಿದೆ.
ಶಿಬಿರಾರ್ಥಿಗಳು ಅಕ್ಟೋಬರ್ ೧೫ ರ ಮಧ್ಯಾಹ್ನ ಒಂದು ಗಂಟೆಯ ಒಳಗೆ ಹೆಸ ರನ್ನು
ನೋಂದಾಯಿಸಬೇಕಾಗಿದೆ. ಅಂದು ಸಂಜೆ ಪರಮಪೂಜ್ಯ ಜಗದ್ಗುರು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀ ಜಿಯವರ ಸಾನಿಧ್ಯದಲ್ಲಿ ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ
ಶಾಖಾಮಠಗಳ ಶ್ರೀಗಳು ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಆಗಮಿಸುವ ಶಿಬಿರಾರ್ಥಿಗಳು ಈ ಮೊಬೈಲ್ ಸಂಖ್ಯೆ ೯೬೩೨೫೫೪೩೬೮, ೯೭೪೧೬ ೭೦೮೯೮ ಅಥವಾ ೯೪೪೯೭ ೫೬೮೧೯ ಗೆ ಸಂಪರ್ಕಿ ಸಬಹುದು. ಎಂದು ಶ್ರೀ ಮಠದ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.