ಶಿವಮೊಗ್ಗ, ಅ.13:
2020ನೇ ಸಾಲಿನಲ್ಲಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಎಸ್.ಸಿ ಎಸ್.ಟಿ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖಾಧಿಕಾರಿಗಳಾದ ಉಮೇಶ್ ಈಶ್ವರ್ ನಾಯಕ್, ಡಿವೈಎಸ್.ಪಿ, ಹಾಲೀ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ, ಶಾಂತಲಾ, ಪಿಎಸ್ಐ ಹಾಲಿ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ ಮತ್ತು ಸಹಾಯಕ ತನಿಖಾಧಿಕಾರಿಗಳಾದ ಲಕ್ಷ್ಮಿ ಮಹೆಚ್ ಸಿ ಹಾಲಿ ಗ್ರಾಮಾಂತರ ಪೊಲೀಸ್ ಠಾಣೆ ರವರುಗಳು ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣದ ತನಿಖಾಧಿಕಾರಿಗಳಾದ ಶ್ರೀ ಮಂಜುನಾಥ್ ಪಿಎಸ್ಐ, ಹಾಲಿ ತುಂಗಾನಗರ ಪೊಲೀಸ್ ಠಾಣೆ ಮತ್ತು ಸಹಾಯಕ ತನಿಖಾಧಿಕಾರಿಗಳಾದ ಜಿ. ಬಿ. ನಾಗರಾಜ್, ಹೆಚ್.ಸಿ, ಹಾಲಿ ಹೊಳೆಹೊನ್ನೂರು ಪೊಲೀಸ್ ಠಾಣೆ ರವರುಗಳು ಸದರಿ ಪ್ರಕರಣಗಳಲ್ಲಿನ ಆರೋಪಿತರಿಗೆ ಘನ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.
ಇವರುಗಳ ಈ ಉತ್ತಮವಾದ ಕಾರ್ಯಕ್ಕೆ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ನಿನ್ನೆ ಜಿಲ್ಲಾ ಪೊಲೀಸ್ ಪೊಲೀಸ್ ಕಛೇರಿಯಲ್ಲಿ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿ ಗೌರವಿಸಿರುತ್ತಾರೆ.

ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಪ್ರಭು ಡಿ.ಟಿ, ಪೊಲೀಸ್ ಉಪಾಧೀಕ್ಷಕರು, ಡಿಸಿಆರ್.ಬಿ, ಶಿವಮೊಗ್ಗ ಜಿಲ್ಲೆ ರವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!