![IMG_20220905_113034 (1)](https://tungataranga.com/wp-content/uploads/2022/09/IMG_20220905_113034-1.jpg)
ಶಿವಮೊಗ್ಗ, ಸೆ.೦೭:
ನಗರದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗಣಿತ ಮತ್ತು ವಿಜ್ಞಾನ ವಿಭಾಗದಲ್ಲಿ ಬೋಧಿಸುವ ಶಿಕ್ಷಕ ಬಿ.ಎಂ.ರಘು ಅವರಿಗೆ ಬೆಂಗಳೂರಿನ ವಿಧಾನ ಸೌದದ ಬಾಂಕ್ವೆಟ್ ಹಾಲ್ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
![](http://tungataranga.com/wp-content/uploads/2022/09/07-09-2022-683x1024.jpg)
ಬಿಎಂ ರಘು ಅವರು ಸುಮಾರು ೨೦ ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು. ಇವರು ಶಾಲೆಯ ಮತ್ತು ಮಕ್ಕಳ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಕ್ರೀಯಾ ಶೀಲತೆಯೇ ಬದುಕಿನ ಗುರಿಯಾಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ
![](http://tungataranga.com/wp-content/uploads/2022/09/07-09-2022-1-683x1024.jpg)
.
ಕ್ರೀಡೆ, ಕಲೆ, ಸಾಹಿತ್ಯ , ಹಾಗೂ ಸಮಾಜಸೇವೆಯಲ್ಲಿ ವಿಶೇಷವಾದ ಅಭಿರುಚಿಯನ್ನು ಹೊಂದಿದ್ದು. ಇವರು ಅನೇಕ ಗಣಿತ ಕಾರ್ಯಾಗಾರಗಳಲ್ಲಿ ಶಿಕ್ಷಕರಿಗೆ ಮತ್ತು ಅನೇಕ ವಿವಿಧ ಶಾಲಾ ವಿದ್ಯಾರ್ಥಿ ಗಳಿಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿ ಸುತ್ತಾರೆ. ಶಿಕ್ಷಕರಿಗೆ ಇಲಾಖೆಯ
![](http://tungataranga.com/wp-content/uploads/2022/09/SARJI-ADVT-615x1024.jpg)
ವತಿಯಿಂದ ನಡೆಯುವ ಸ್ಪರ್ಧೆಗಳಲ್ಲಿ ತೀರ್ಪುಗಾರರಾ ಗಿಯೂ ಕಾರ್ಯನಿರ್ವಹಿಸಿ ಹಾಗೂ ಭಾಗ ವಹಿಸಿ ರಾಜ್ಯ ಮಟ್ಟ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಇವರು ಕ್ರೀಯಾಶೀಲತೆಗೆ ಸಾಕ್ಷಿಯಾಗಿದ್ದಾರೆ.
![](http://tungataranga.com/wp-content/uploads/2022/09/IMG-20220905-WA0030-768x1024.jpg)
ಗಣಿತ ವಿಷಯದ ಸರಳವಾದ ಕಲಿಕೆಗೆ ಶಾಲೆಯಲ್ಲಿ ಗಣಿತ ಪ್ರಯೋಗಲಯದ ಸ್ಥಾಪನೆ ಸ್ಮಾರ್ಟ್ ಸುಲಭ ವಿಧಾನದ ಗಣಿತ ಲೆಕ್ಕಗಳಿಗೆ ಪರಿಹಾರೋಪಾ ಯದ ಮೂಲಕ ವಿದ್ಯಾರ್ಥಿಗಳಿಗೆ ಕೋವಿಡ್ ಸಂದರ್ಭ ದಲ್ಲಿ ವಿದ್ಯಾಗಮ ನಿರಂತರ ಕಲಿಕಾಭ್ಯಾಸದ ಸಂಪನ್ಮೂಲ ವ್ಯಕ್ತಿಯಾಗಿ ಹೊಸ ಹೊಸ ತಂತ್ರಜ್ಞಾನ ಅಧಾರಿತ ಭೋದನೆ ನಾವಿನ್ಯ ವಿಧಾನಗಳಮೂಲಕ ಕಲಿಕೆ ಸಾಧಿಸಿದ್ದಾರೆ.