ಶಿವಮೊಗ್ಗ, ಆ.30;
ಶಿವಮೊಗ್ಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರೆಂದು ಹೇಳಿಕೊಳ್ಳಲು ಅಬ್ದುಲ್ ಘನಿಯವರಿಗೆ ಯಾವುದೇ ಅಧಿಕಾರವಿಲ್ಲವೆಂದು ನಿಕಟಪೂರ್ವ ಅಧ್ಯಕ್ಷ ಹಬೀಬುಲ್ಲಾ ಸ್ಪಷ್ಟಪಡಿಸಿದ್ದಾರೆ.
ನಾನು 2017 ಆಗಸ್ಟ್ ನಲ್ಲಿ ಅಧಿಕಾರ ವಹಿಸಿಕೊಂಡೆ. ವಕ್ಫ್ ಬೋರ್ಡ್ ನಲ್ಲಿ ಒಂದು ಕಾನೂನು ಇದೆ. ಯಾರು ವಕ್ಫ್ ಬೋರ್ಡ್ ಗೆ ಅಧ್ಯಕ್ಷರಾಗುತ್ತಾರೆ ಅವರಿಗೆ ಮೂರು ವರ್ಷ ಅಧಿಕಾರವಿರುತ್ತದೆ. ಅದರಂತೆ ನನಗೆ ಬೋರ್ಡ್ ಜಿಲ್ಲಾ ಅಧ್ಯಕ್ಷನೆಂದು ಮೂರು ವರ್ಷಕ್ಕೆ ಆದೇಶ ನೀಡಿದೆ.
ಯಾವಾಗ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಿತೋಎಲ್ಲಾ ನಿಗಮ ಮಂಡಳಿಯ ಅಧ್ಯಕ್ಷರನ್ನ ಬದಲಾಯಿಸಿದಂತೆ ರಾಜ್ಯದ ಎಲ್ಲಾ ವಕ್ಫ್ ಬೋರ್ಡ್ ನ ಅಧ್ಯಕ್ಷರನ್ನ ಬದಲಾಯಿಸಿತು.
ಈ ಕ್ರಮವನ್ನ ನಾವೆಲ್ಲಾ ಬೋರ್ಡ್ ನ ಗಮನಕ್ಕೆ ತಂದು ನ್ಯಾಯಾಯದಲ್ಲಿ ಪ್ರಶ್ನಿಸಿದೆವು. ನ್ಯಾಯಾಲಯವು ನಮ್ಮ ಮನವಿ ಪುರಸ್ಕರಿಸಿ ನಮ್ಮಪರ ತೀರ್ಪು ನೀಡಿದೆ. ನಾಳೆ ಆ.31 ರಂದು ನನ್ನ ಅವಧಿ ಮುಗಿಯಲಿದೆ ಎಂದು ಹಬೀಬುಲ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಗಂತ ಅಬ್ದುಲ್ ಘನಿಯವರು ಸೆ.1 ರಿಂದ ಅಧ್ಯಕ್ಷರಾಗಿ ಬಿಡುತ್ತಾರೆ ಎಂದು ಭಾವಿಸಿದರೆ ಅದು ತಪ್ಪು. ಏಕೆಂದರೆ ಸೆ.1 ರಿಂದ ಬೋರ್ಡ್ ನ ಅಧ್ಯಕ್ಷರಾಗಿ ನೇಮಕಗೊಳ್ಳಬೇಕೆಂದರೆ ಸರ್ಕಾರದಿಂದ ಮತ್ತೆ ನಾನು ಅಧ್ಯಕ್ಷರು ಎಂದು ಆದೇಶ ತರಬೇಕು. ರಾಜ್ಯದಲ್ಲಿ ಅವರದೇ ಸರ್ಕಾರವಿರಬಹುದು ಆದರೆ ವಕ್ಫ್ ಬೋರ್ಡ್ ನ ಕಾನೂನು ಹೀಗಿದೆ ಎಂದು ವಿವರಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!