ಶಿವಮೊಗ್ಗ,ಆ.30:
ಜಿಲ್ಲೆಯಲ್ಲಿ ಜಿಲ್ಲಾ ವರದಿ ಪ್ರಕಾರ 167 , ರಾಜ್ಯ ವರದಿ ಪ್ರಕಾರ 292 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ರಾಜ್ಯವರದಿ ಅನುಸಾರ ಶಿವಮೊಗ್ಗದಲ್ಲಿ ಸೊಂಕಿತರ ಸಂಖ್ಯೆ 8000 ಗಡಿದಾಟಿದೆ.
ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ನಾಲ್ವರು ಸಾವನ್ನಪ್ಪಿದ್ದರೆ, 94 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನು, ಈವರೆಗೂ 3200ಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್’ಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್’ಗಳ ಸಂಖ್ಯೆ ಸಾವಿರ ದಾಟಿದೆ. ಇಂದು ಒಟ್ಟು 862 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 874 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1662 ಆಗಿದೆ ಎಂದು ಬುಲೆಟಿನ್ ತಿಳಿಸಿದೆ.
ಆದರೆ, ಈಗಲೂ ರಾಜ್ಯದ ವರದಿ ಮತ್ತೆ ಬೇರೆ ಮಾಹಿತಿ ನೀಡುತ್ತಿದೆ. ಅಂಕಿ ಅಂಶ ತಪ್ಪೆನಿಸುತ್ತೆ.292 ಈಗಿನ ಪ್ರಸ್ತುತ ಸೊಂಕಿತರೆಂದು ತೋರಿಸುತ್ತದೆ. ಓದುಗರಿಗೆ ಎರಡೂ ಮಾಹಿತಿ ನೀಡಲಾಗಿದೆ.
ತಾಲೂಕುವಾರು ವಿವರ:
ಶಿವಮೊಗ್ಗ: 84
ಭದ್ರಾವತಿ: 26
ಶಿಕಾರಿಪುರ: 13
ತೀರ್ಥಹಳ್ಳಿ: 01
ಸೊರಬ: 24
ಹೊಸನಗರ: 02
ಸಾಗರ: 09
ಇತರೆ ಜಿಲ್ಲೆ: 4